More

    ಬಸವಣ್ಣ ಕನ್ನಡದ ಅಸ್ಮಿತೆ, ಅನನ್ಯತೆಗೆ ಸಾಕ್ಷಿ

    ಸಿಂದಗಿ: ವಿಜಯಪುರ ಜಿಲ್ಲೆ ಶರಣ ಕುಲದ ತೊಟ್ಟಿಲು. ಇಲ್ಲಿ ಜನಿಸಿದ ವಿಶ್ವಗುರು ಬಿರುದಾಂಕಿತ ಬಸವಣ್ಣನವರು ಕನ್ನಡದ ಅಸ್ಮಿತೆ, ಅನನ್ಯತೆಗೆ ಸಾಕ್ಷಿಯಾಗಿದ್ದಾರೆ ಎಂದು ವಿಶ್ರಾಂತ ಪ್ರಾಧ್ಯಾಪಕ, ಕನ್ನಡ ವಿದ್ವಾಂಸ ಡಾ. ಎಂ.ಎಂ. ಪಡಶೆಟ್ಟಿ ಹೇಳಿದರು.

    ಶನಿವಾರ ತಾಲೂಕು ಆಡಳಿತಸೌಧದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

    ಸಿಎಂ ಸಿದ್ದರಾಮಯ್ಯನವರು ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಬಸವಣ್ಣನವರನ್ನು ಘೋಷಿಸಿದ್ದಾರೆ. ಬಸವಣ್ಣನ ವ್ಯಕ್ತಿತ್ವ, ಲಿಂಗಬೇಧ ನಿರಸನ, ವರ್ಣಬೇಧ ನೀತಿಯನ್ನು ಮನೆ-ಮನದಿಂದಲೇ ಆರಂಭಿಸಿ, ಲಿಂಗಾಯತ, ಕನ್ನಡ ಭಾಷೆ, ವಚನದ ಅಸ್ಮಿತೆಯಾಗಿಯೂ ಉಭಯ ಪ್ರಧಾನ ಕುಟುಂಬದ ಕನಸು ಕಂಡಿದ್ದು ಹನ್ನೆರಡನೇ ಶತಮಾನದಲ್ಲಿ. ಏಕದೇವೋಪಾಸನೆ, ಆತ್ಮಾನುಸಂಧಾನದ ಮೂಲಕ ಕಾಯಕ ಮತ್ತು ದಾಸೋಹದ ಮೇಲ್ಪಂಕ್ತಿಗೆ ಮೊದಲ ಹೆಜ್ಜೆಯನ್ನಿಟ್ಟು, ದೇವ, ದೇವತ್ವವನ್ನು ನಿರಾಕರಿಸದೇ, ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಸಮಸಮಾಜದ ಪರಿಕಲ್ಪನೆ ಕೊಟ್ಟು, ಅದರಂತೆ ತಮ್ಮ ವಚನಗಳ ಮೂಲಕ ನುಡಿದು ನಡೆದರು. ನಮ್ಮೆಲ್ಲರ ಬಹು ದಿನದ ಕನಸು ಇಂದು ನನಸಾಯಿತು. ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯನವರಿಗೆ ಅಭಿನಂದಿಸುತ್ತೇನೆ ಎಂದರು.

    ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಾಮಾಜಿಕ ನ್ಯಾಯ ಮಾರ್ಗದ ಮೂಲಕ ಸಿಎಂ ಸಿದ್ದರಾಮಯ್ಯನವರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಭವಿಷ್ಯದ ಪೀಳಿಗೆಗೆ ಬಸವಣ್ಣನ ಬದುಕು, ಆದರ್ಶಗಳನ್ನು ಪರಿಚಯಿಸುವಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಸಿಂದಗಿ ಬಸವ ಮಂಟಪದ ಜೀರ್ಣೋದ್ಧಾರದ ಕೆಲಸ ಆರಂಭಿಸುವ ಕುರಿತು ಸಭೆ ನಡೆಸಿ ಕ್ರಮವಹಿಸುತ್ತೇನೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಸಾರಂಗಮಠ-ಗಚ್ಚಿನಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಕಾಯಕ ಮತ್ತು ದಾಸೋಹದ ಕೀರ್ತಿಗೆ ಬಸವಣ್ಣನವರನ್ನು ವಿಶ್ವಗುರುವೆಂದು ಅಪ್ಪಿಕೊಂಡಿರುವ ನಮಗೆ ವಿಶ್ವವೇ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಅಪ್ಪಿಕೊಳ್ಳುವಂತಾಗಲಿ ಎಂದರು.

    ಬಸವದಳದ ಅಧ್ಯಕ್ಷ ಮಲ್ಲಿಕಾರ್ಜುನ ಅರ್ಜುಣಗಿ, ಗ್ರೇಡ್-2 ತಹಸೀಲ್ದಾರ್ ಜೆ.ಎಂ.ಬಳಗಾನೂರ, ತಾಪಂ ಎಡಿ ನಿತ್ಯಾನಂದ ಯಲಗೋಡ ಇತರರಿದ್ದರು.
    ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಶೋಕ ಅಲ್ಲಾಪುರ, ಸಿ.ಎಂ. ದೇವರಡ್ಡಿ, ಡಾ. ಚೆನ್ನಪ್ಪ ಕಟ್ಟಿ, ವಿಶ್ರಾಂತ ಪ್ರಾಧ್ಯಾಪಕ ಬಿ.ಎಂ. ಬಿರಾದಾರ, ಗುರು ಬಸರಕೋಡ, ಶಿವಕುಮಾರ ಶಿವಶಿಂಪಿ, ದಾನಪ್ಪ ಜೋಗೂರ, ವೈ.ಸಿ. ಮಯೂರ, ಸಾಯಬಣ್ಣ ಪುರದಾಳ, ಸುನಂದಾ ಯಂಪುರೆ, ಶಿರಸ್ತೇದಾರ ಜಿ.ಎಸ್. ರೋಡಗಿ, ತಲಾಟಿ ನಿಖಿಲ್ ಖಾನಾಪುರ ಇತರರಿದ್ದರು.

    ಜ್ಞಾನಭಾರತಿ ವಿದ್ಯಾ ಮಂದಿರದ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ನಾಡಗೀತೆ ಹಾಡಿದರು. ಶಿವಬಸು ಕುಂಬಾರ ನಿರೂಪಿಸಿದರು. ತಹಸೀಲ್ದಾರ್ ಡಾ. ಪ್ರವೀಣಕುಮಾರ ಹಿರೇಮಠ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್ೀ ಬಿರಾದಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts