More

    ಬಸವಣ್ಣದೇವರ ಹೊಳೆದಂಡೆ ಯಾತ್ರೆ

    ಅಳವಂಡಿ: ಗ್ರಾಮದ ಶ್ರೀಬಸವಣ್ಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ಸೋಮವಾರ ಅಂಗವಾಗಿ ಪೂಜ ಕೈಂಕರ‌್ಯಗಳು ಅದ್ದೂರಿಯಾಗಿ ಜರುಗಿದವು. ಬಸವಣ್ಣನ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ನಾನ ಹೂಗಳಿಂದ ಅಲಂಕರಿಸಲಾಗಿತ್ತು.

    ಇದನ್ನೂ ಓದಿ: ಅಪ್ಪು ಅಭಿಮಾನಿಯಿಂದ ಸೈಕಲ್ ಯಾತ್ರೆ

    ದೇವಸ್ಥಾನವನ್ನು ವಿವಿಧ ಹೂ, ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಹೂ ಹಾಗೂ ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಲಾಗಿತ್ತು. ಭಕ್ತರು ದೇವರಿಗೆ ಕಾಯಿ, ಕರ್ಪೂರ, ನೈವೇದ್ಯ ಸಲ್ಲಿಸಿ ಭಕ್ತಿ ಹರಕೆ ಸಲ್ಲಿಸಿದರು.

    ನಂತರ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯೊಂದಿಗೆ ಭಕ್ತರ ಸಮ್ಮುಖದಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ಸಮೀಪದ ತುಂಗಭದ್ರಾ ನದಿ ತೀರಕ್ಕೆ ಗಂಗಾಪೂಜೆಗೆ ತೆರಳಲಾಯಿತು.

    ಪ್ರಮುಖರಾದ ದೇವಪ್ಪ ಕಟ್ಟಿಮನಿ, ನಾಗಪ್ಪ ಮಾಸ್ತರ, ಚಿಕ್ಕವೀರಜ್ಜ ಕವಡಿಮಟ್ಟಿ, ಕೊಟ್ರಪ್ಪ ಕುರಗೋಡ,ಜಗನ್ನಾಥರಡ್ಡಿ ದಾಸರಡ್ಡಿ, ಪರಮೇಶಪ್ಪ ಹಮ್ಮಗಿ, ಗವಿಸಿದ್ದಪ್ಪ ಹರಪನಹಳ್ಳಿ, ವೀರಭದ್ರಯ್ಯ ಶಿರೂರಮಠ, ಗುರುಶಾಂತಪ್ಪ ಶೆಟ್ಟರ, ಶಿವಪುತ್ರಪ್ಪ ಕವಡಿಮಟ್ಟಿ,
    ಸಿದ್ದಲಿಂಗಯ್ಯ ಗೊರ್ಲೆಕೊಪ್ಪ, ಬಸವರಾಜ ಟುಬಾಕಿ,
    ಬಸವರಾಜ ಶೆಟ್ಟರ, ಭರತ್‌ಸ್ವಾಮಿ ಗೊರ್ಲೆಕೊಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts