More

    2144ವಿದ್ಯಾರ್ಥಿಗಳ ಹಾಜರ್

    ಬಸವನಬಾಗೇವಾಡಿ: ಪಟ್ಟಣದ ವಿವಿಧ ಪರೀಕ್ಷೆ ಕೇಂದ್ರದಲ್ಲಿ ಶನಿವಾರ ನಡೆದ ಜವಾಹರ ನವೋದಯ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ 2341 ವಿದ್ಯಾರ್ಥಿಗಳ ಪೈಕಿ 197 ವಿದ್ಯಾರ್ಥಿಗಳು ಗೈರು ಹಾಜರಿ ಉಳಿದರೆ 2144 ಹಾಜರಾಗಿ ಪರೀಕ್ಷೆ ಬರೆದಿದ್ದಾರೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಮಾಡಗಿ ತಿಳಿಸಿದರು.
    ತಾಲೂಕಿನ ವಿವಿಧ ಗ್ರಾಮಗಳಿಂದ ಶನಿವಾರ ಬೆಳಗ್ಗೆ ಪಾಲಕರು, ಶಿಕ್ಷಕರೊಂದಿಗೆ ಪಟ್ಟಣದಲ್ಲಿನ ಪರೀಕ್ಷೆ ಕೇಂದ್ರಗಳತ್ತ ಆಗಮಿಸಿದರು. ವಿಜಯಪುರ ರಸ್ತೆಯ ಬಸವೇಶ್ವರ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿನ ಪರೀಕ್ಷೆ ಕೇಂದ್ರಗಳು, ಇವಣಗಿ ರಸ್ತೆಯ ಗುರುಕೃಪಾ ಪ್ರಾಥಮಿಕ ಶಾಲೆ, ಮಡಿವಾಳೇಶ್ವರ ಶಾಲೆ, ಮಸಬಿನಾಳ ರಸ್ತೆಯ ನಂದಿ ಪ್ರಾಥಮಿಕ ಶಾಲೆ, ಕೇಶವ ನಗರದಲ್ಲಿನ ಜ್ಞಾನಭಾರತಿ ಪ್ರಾಥಮಿಕ ಶಾಲೆ, ಬಸವತತ್ವ ಹಿರಿಯ ಪ್ರಾಥಮಿಕ ಶಾಲೆ, ಅಕ್ಕನಾಗಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಗಾಂಧಿ ನಗರದಲ್ಲಿನ ನೂತನ ಪ್ರೌಢಶಾಲೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಹುರುಪಿನಿಂದ ಪರೀಕ್ಷೆ ಬರೆದರು.
    ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದನಗೌಡ ಮಾಡಗಿ ನೇತೃತ್ವದ ಸಿಬ್ಬಂದಿ, ನವೋದಯ ಶಾಲೆ ಸಿಬ್ಬಂದಿ, ನೋಡಲ್ ಅಧಿಕಾರಿಗಳು ಹಾಗೂ ತಾಪಂ ಇಒ ನೇತೃತ್ವದಲ್ಲಿ ನಾಲ್ಕು ತಂಡಗಳು ಪರೀಕ್ಷೆ ಮೇಲ್ವಿಚಾರಣೆ ನಡೆಸಿದವು. 107 ಕೊಠಡಿಗಳಲ್ಲಿ ನಡೆದ ಪರೀಕ್ಷೆಯಲ್ಲಿ 10 ಕೊಠಡಿಗೊಬ್ಬ ಹೆಚ್ಚುವರಿ ಸಿಬ್ಬಂದಿಯನ್ನು ಕಾರ್ಯನಿರ್ವಹಿಸಲು ನೇಮಿಸಲಾಗಿತ್ತು. ಪರೀಕ್ಷೆ ಕೇಂದ್ರದಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts