More

    ನ್ಯಾಯ ನಂಬಿ ಸಮಾಜ ಬದುಕಿದೆ

    ಬಸವನಬಾಗೇವಾಡಿ: ವಿಶ್ವಗುರು ಬಸವಣ್ಣನವರ ನಾಡಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಂದರ ನ್ಯಾಯಾಲಯದ ಕಟ್ಟಡದಲ್ಲಿ ಪ್ರಕರಣಗಳನ್ನು ಬೇಗ ಇತರ್ಥ್ಯಪಡಿಸುವಂತಾಗಲಿ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕ್ ಹೇಳಿದರು.

    ವಿಜಯಪುರ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ಬಸವನಬಾಗೇವಾಡಿ ವಕೀಲರ ಸಂಘದ ನೆತೃತ್ವದಲ್ಲಿ ಬುಧವಾರ ಸಂಜೆ ಸ್ಥಳೀಯ ವಿಜಯಪುರ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ನ್ಯಾಯಾಲಯ ಸಂಕೀರ್ಣದ ಮೊದಲನೇ ಮಹಡಿಯಆನ್‌ಲೈನ್ ಮುಖಾಂತರ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಶಾಸಕ ಶಿವಾನಂದ ಪಾಟೀಲ ಮಾತನಾಡಿ ನ್ಯಾಯಾಲಯದ ಕಟ್ಟಡ ಎಷ್ಟೇ ದೊಡ್ಡದು ಎನ್ನುವುದು ಮುಖ್ಯವಲ್ಲ, ನ್ಯಾಯಾಲಯದ ಎಷ್ಟು ಪ್ರಕರಣಗಳು ಇತರ್ಥ್ಯವಾದವು ಎನ್ನುವುದು ಮುಖ್ಯ. ಈ ಕಟ್ಟಡದಲ್ಲಿನ ಕಟ್ಟ ಕಡೆ ವ್ಯಕ್ತಿಗೂ ನ್ಯಾಯ ಸಿಗುವಂತಾಗಬೇಕು. ನ್ಯಾಯವನ್ನು ನಂಬಿಕೊಂಡು ಸಮಾಜ ಬದುಕುತಿದೆ. ನ್ಯಾಯ ಎಲ್ಲರಿಗೂ ಸರಿ ಸಮಾನವಾಗಿ ಸಿಗಬೇಕು. ಈ ನೂತನ ಕಟ್ಟಡ ನ್ಯಾಯ ಸಮ್ಮತವಾಗಿ ನ್ಯಾಯ ಸಿಗಲಿ ಎಂದು ಹೇಳಿದರು. ಕರ್ನಾಟಕದ ಉಚ್ಛ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಬಿ.ಎ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿಜಯಪುರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಯಕ ಮಾತನಾಡಿದರು.

    ಹಿರಿಯ ಸಿವಿಲ್ ನ್ಯಾಯಾಧೀಶೆ ಎಸ್.ಎಲ್. ಲಾಡಖಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್ಚುವರಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ವೀರನಗೌಡ ಪಾಟೀಲ, ಸಿವಿಲ್ ನ್ಯಾಯಾಧೀಶ ಶಿವರಾಜ ಎಚ್.ಎಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ವಿಜಯಪುರದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಬಿ.ಬಿ. ಪಾಟೀಲ, ಎಇಇ ಎಸ್.ಎಂ. ಕರೂರ, ಜೆಇ ಜಿ.ಎಸ್. ವಂದಾಲ, ಬಿ.ಬಿ. ಬಿರಾದಾರ, ಗುತ್ತಗೆದಾರ ಅರುಣ ಮಠ ಇದ್ದರು. ವಕೀಲರ ಸಂಘದ ಅಧ್ಯಕ್ಷ ಎನ್.ಎಸ್. ಪಾಟೀಲ ಸ್ವಾಗತಿಸಿದರು. ನ್ಯಾಯವಾದಿ ಪ್ರಕಾಶ ಹೊಸಮನಿ ನಿರೂಪಿಸಿದರು. ನ್ಯಾಯವಾದಿ ಸುರೇಶ ಚಿಂಚೋಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts