More

    ಸ್ವಚ್ಛ ಪರಿಸರದಿಂದ ಆರೋಗ್ಯ ವೃದ್ಧಿ

    ಬಸವನಬಾಗೇವಾಡಿ: ಅಧುನಿಕ ಭರಾಟೆಯಲ್ಲಿ ಪರಿಸರ ಕಲುಷಿತಗೊಳ್ಳುತ್ತಿದ್ದು, ಜನ ಜಾಗೃತಿ ಮುಖ್ಯವಾಗಿದೆ. ಸ್ವಚ್ಛ ಪರಿಸರದಿಂದ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಸಿವಿಲ್ ನ್ಯಾಯಾಧೀಶ ಶಿವರಾಜು ಎಚ್.ಎಸ್.ಹೇಳಿದರು.
    ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ನಿಮಿತ್ತ ನ್ಯಾಯಾಲಯ ಆವರಣದಲ್ಲಿ ಶನಿವಾರ ಕಸಗುಡಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಇಲ್ಲದಿದ್ದರೆ ಕ್ರಿಮಿಕೀಟಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡಿ ಮನುಷ್ಯನ ಸ್ವಾಸ್ಥೃ ಹಾಳು ಮಾಡುತ್ತವೆ. ಸುಂದರ ಪರಿಸರದಿಂದ ವ್ಯಕ್ತಿಯ ಆರೋಗ್ಯ ಜತೆಗೆ ಸಕಾರಾತ್ಮಕ ಆಲೋಚನೆಗಳು ಬೆಳೆಯಲು ಸಾಧ್ಯ ಎಂದು ಹೇಳಿದರು.
    ವಕೀಲರ ಸಂಘದ ಕಾರ್ಯದರ್ಶಿ ಎಸ್.ಎಲ್.ಕಳ್ಳಿಗುಡ್ಡ, ವಕೀಲರಾದ ಮಲ್ಲಿಕಾರ್ಜುನ ದೇವರಮನಿ, ಸದಾನಂದ ಬಶೆಟ್ಟಿ, ಪ್ರಕಾಶ ಗಬ್ಬೂರ, ತಾನಾಜಿ ಗಾಯಕವಾಡ, ರಾಜು ವಂದಾಲ, ಸಂಗಮೇಶ ಹಗ್ಗದ, ನೀಲಕಂಠ ಸಜ್ಜನ, ಅನೀಲ ಚಿಕ್ಕೊಂಡ, ಮಂಜುನಾಥ ಬಿರಾದಾರ, ಅನೀಲ ನಂದಿ, ಮನೋಜ ಕದಂ ಸೇರಿದಂತೆ ನ್ಯಾಯಾಲಯ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts