More

    ಹವಾಮಾನ ವೈಪರಿತ್ಯಕ್ಕೆ ಮನುಷ್ಯ ದುರಾಸೆ ಕಾರಣ

    ಬಸವನಬಾಗೇವಾಡಿ: ಕೆಲ ಮಹಾನಗರಗಳಲ್ಲಿ ಹವಾಮಾನ ವೈಪರಿತ್ಯದಿಂದ ಜನರ ಬದುಕು ಕಷ್ಟಕರವಾಗಿದೆ. ಇದಕ್ಕೆ ಮನುಷ್ಯನ ದುರಾಸೆಯೇ ಕಾರಣ ಎಂದು ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ ಹೇಳಿದರು.

    ಪಟ್ಟಣದ ನಂದಿ ಬಡಾವಣೆಯಲ್ಲಿ ವಿಜಯಪುರ ಜಿಪಂ, ಸಾಮಾಜಿಕ ಅರಣ್ಯ ವಿಭಾಗದ ಬಸವನಬಾವೇವಾಡಿ ವಲಯ ಅರಣ್ಯಾಧಿಕಾರಿಗಳ ನೂತನ ಕಚೇರಿ ಕಟ್ಟಡದ ಉದ್ಘಾಟನಾ ಸಮಾರಂಭ ನೆರವೇರಿಸಿ, ನಂತರ ಸಾರ್ವಜನಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಮನುಷ್ಯ ಅತಿಯಾದ ಆಸೆಯಿಂದ ಕಾಡು ನಾಶಮಾಡಿ ನಾಡು ಕಟ್ಟುತ್ತಿದ್ದಾನೆ. ಇದರಿಂದ ಜನತೆ ಆಮ್ಲಜನಕದ ಕೊರತೆಯಿಂದ ಉಸಿರಾಟದ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕಾಡು ಬೆಳೆಸಿ ನಾಡು ಉಳಿಸಬೇಕಾದ ಅಗತ್ಯವಿದೆ ಎಂದರು.

    ಪಟ್ಟಣಗಳಲ್ಲಿ ಹೆಚ್ಚೆಚ್ಚು ಗಿಡ, ಮರ ಬೆಳೆಸುವ ಕಾರ್ಯವಾಗಬೇಕು. ಪಟ್ಟಣ ಪ್ರದೇಶಗಳಲ್ಲಿ ಉದ್ಯಾನ ರಸ್ತೆಯ ಅಕ್ಕ ಪಕ್ಕ ಗಿಡ, ಮರಗಳನ್ನು ಬೆಳೆಸುವುದು, ಮನೆಗೊಂದು ಗಿಡ, ಮರ ಬೆಳೆಸುವ ಕಾರ್ಯವಾದಾಗ ಮಾತ್ರ ನಾವುಗಳು ಉತ್ತಮ ಆರೋಗ್ಯದಿಂದ ಜೀವಿಸಲು ಸಾಧ್ಯ ಎಂದರು.

    ಜಿಪಂ ಎಇಇ ಪಿ.ಎಚ್. ಬಂಡಿ ಮಾತನಾಡಿ, 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ವಲಯ ಅರಣ್ಯಾಧಿಕಾರಿಗಳ ನೂತನ ಕಚೇರಿ ಕೇವಲ 10 ತಿಂಗಳಲ್ಲಿ ನಿರ್ಮಾಣವಾಗಿದೆ. ಇದಕ್ಕೆ ಶಾಸಕರ ಮುತುವರ್ಜಿಯೇ ಮುಖ್ಯ ಕಾರಣವಾಗಿದೆ ಎಂದರು. ಖಾಸ್ಗತೇಶ್ವರ ಶಾಖಾಮಠದ ಶಿವಕಾಂತಯ್ಯಮಠ ಸಾನ್ನಿಧ್ಯ ವಹಿಸಿದ್ದರು.

    ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಯಾಣಿ, ಉಪಾಧ್ಯಕ್ಷೆ, ಲಕ್ಷ್ಮಿಬಾಯಿ ಬೆಲ್ಲದ, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ಹಾರಿವಾಳ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಎಪಿಎಂಸಿ ನಿರ್ದೇಶಕ ಶೇಖರ ಗೊಳಸಂಗಿ, ಪುರಸಭೆ ಮುಖ್ಯಾಧಿಕಾರಿ ಬಿ.ಎ. ಸೌದಾಗರ, ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳಾದ ಸರೀನಾ ಸಿಕ್ಕಲಿಗಾರ, ಎಸ್.ಸುರೇಶ, ಪಿ.ಎಚ್. ಚವ್ಹಾಣ್, ಪುರಸಭೆ ಮುಖ್ಯಾಧಿಕಾರಿ ಬಿ.ಎ. ಸೌದಾಗರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts