More

    7 ತಾಸು ವಿದ್ಯುತ್ ಪೂರೈಕೆ ಮಾಡಿ

    ಬಸವನಬಾಗೇವಾಡಿ: ಅಖಂಡ ಬಸವನಬಾಗೇವಾಡಿ ತಾಲೂಕಿನ ರೈತರ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ನಿರಂತರ 7 ತಾಸು ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ವಿದ್ಯುತ್ ವಿಭಾಗೀಯ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಧರಣಿ ನಡೆಸಿದರು.

    ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಜಿಲ್ಲೆಯ ಇಂಡಿ, ಸಿಂದಗಿ, ಮುದ್ದೇಬಿಹಾಳ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಹಗಲು ಹೊತ್ತು ನಿರಂತರ 7 ತಾಸು ವಿದ್ಯುತ್ ಪೂರೈಸಲಾಗುತ್ತದೆ. ಆದರೆ, ಬಸವನಬಾಗೇವಾಡಿ ತಾಲೂಕಿಗೆ ಮಾತ್ರ ಏಕೆ ಈ ತಾರತಮ್ಯ ಮಾಡಲಾಗುತ್ತದೆ ಎಂದು ಅರ್ಥವಾಗುತ್ತಿಲ್ಲ. ಬಸವನಬಾಗೇವಾಡಿ ತಾಲೂಕಿನ ಹೆಸ್ಕಾಂನವರು ಹಗಲು ಮತ್ತು ರಾತ್ರಿ ಕೇವಲ 2 ತಾಸು ವಿದ್ಯುತ್ ನೀಡುತ್ತಿದ್ದು ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಅಧಿಕಾರಿಗಳು ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.

    ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಬಸವನಬಾಗೇವಾಡಿ ತಾಲೂಕಿಗೆ ಹಗಲು ಹೊತ್ತಿನಲ್ಲಿ ನಿರಂತರ 7 ತಾಸ್ ವಿದ್ಯುತ್ ಪೂರೈಸಬೇಕು. ಅಲ್ಲಿವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಧರಣಿ ಸ್ಥಳದಲ್ಲೇ ರೈತರು ಮಧ್ಯಾಹ್ನದ ಅಡುಗೆ ತಯಾರಿಸಿ ಊಟ ಮಾಡಿದರು. ಚನ್ನಬಸಪ್ಪ ಸಿಂಧೂರ, ಹೊನಕೇರಪ್ಪ ತೆಲಗಿ, ವಿಠ್ಠಲ ಬಿರಾದಾರ, ಶ್ರೀಶೈಲ ಸಾಸನೂರ, ಬಸವನಗೌಡ ಬಿರಾದಾರ, ಗುರುಲಿಂಗಪ್ಪ ಪಡಸಲಗಿ, ಶಂಕರಪ್ಪ ಹಚಡದ, ಬಸವರಾಜ ಸುಂಟಾಣಿ, ಸಂಗಪ್ಪ ಪಡಸಲಗಿ, ರಾಯಪ್ಪ ದಳವಾಯಿ, ಗುರಣ್ಣಗೌಡ ಬಿರಾದಾರ, ಪರಶುರಾಮ ದೊಡ್ಡಮನಿ, ಎಂ.ಜಿ.ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts