More

    ನಕಲು ರಹಿತ ಪರೀಕ್ಷಾ ಕೇಂದ್ರಗಳಾಗಿ ಪರಿವರ್ತನೆಯಾಗಲಿ

    ಬಸವನಬಾಗೇವಾಡಿ: ಭವಿಷ್ಯದ ಮಕ್ಕಳಲ್ಲಿ ಕಲಿಕಾ ಮಟ್ಟ ಸುಧಾರಣೆೆಗಾಗಿ ಕಟ್ಟು ನಿಟ್ಟಿನ ಪರೀಕ್ಷಾ ಪದ್ಧತಿ ಅವಶ್ಯಕವಾಗಿದ್ದು, ಬದಲಾದ ಪರೀಕ್ಷಾ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಗೆ ನಕಲಿಗೆ ಅವಕಾಶ ನೀಡದೆ, ನಕಲು ರಹಿತ ಪರೀಕ್ಷಾ ಕೇಂದ್ರಗಳಾಗಿ ಬದಲಾವಣೆಯಾಗಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.

    ಪಟ್ಟಣದ ಮಿನಿ ವಿಧಾನ ಸೌಧದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಮಂಗಳವಾರ ನಡೆದ 2020-21ನೇ ಸಾಲಿನ ಜು.19 ಮತ್ತು 22 ರಂದು ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ಸಿದ್ಧ್ದತಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

    ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರು, ಉಪ ಅಧೀಕ್ಷಕರು, ಕಸ್ಟೋಡಿಯನ್‌ಗಳು ಸೇರಿದಂತೆ ಇತರೆ ಎಲ್ಲ ಸಿಬ್ಬಂದಿ ಪರೀಕ್ಷಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡುವ ಜತೆಗೆ ಭಯದ ವಾತಾವರಣ ನಿರ್ಮಾಣ ಮಾಡಬಾರದು. ಪರೀಕ್ಷಾ ಅವಧಿ ಮುಗಿಯುವವರೆಗೆ ವಿದ್ಯಾರ್ಥಿಗಳು ಕೊಠಡಿಯಲ್ಲೇ ಇರುವಂತಾಗಬೇಕು ಎಂದರು.

    ಕರೊನಾ ಮಹಾಮಾರಿ ಅಟ್ಟಹಾಸದ ಪರಿಣಾಮ ಅಖಂಡ ತಾಲೂಕಿನಲ್ಲಿ ಕಳೆದ ಸಾಲಿನ 19 ಪರೀಕ್ಷಾ ಕೇಂದ್ರಗಳ ಬದಲಾಗಿ ಈ ಸಾಲಿನಲ್ಲಿ 28 ಕೇಂದ್ರಗಳು ಗುರುತಿಸಲಾಗಿದ್ದು, 5603 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪಾಲಕರು ಮತ್ತು ಪೋಷಕರಿಗೆ ಪರೀಕ್ಷಾ ಕೇಂದ್ರಗಳ ಬಳಿ ಸುಳಿಯದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

    ಕ್ಷೇತ್ರ ಸಮನ್ವಯಾಧಿಕಾರಿ ಪಿ.ಯು.ರಾಠೋಡ ಅವರು ಕಟ್ಟುನಿಟ್ಟಿನ ಪರೀಕ್ಷೆ ನಡೆಯುವಂತಾಗಲು ಮಾರ್ಗ ಸೂಚಿಗಳನ್ನು ತಿಳಿಸಿದರು. ತಹಸೀಲ್ದಾರ್ ಎಂ.ಎನ್.ಬಳಿಗಾರ ಮತ್ತು ಪಿ.ಐ. ಬಸವರಾಜ ಪಾಟೀಲ ಮಾತನಾಡಿದರು.

    ಇಒ ಭಾರತಿ ಚಲುವಯ್ಯ, ನಿಡಗುಂದಿ ಪಿಎಸ್‌ಐ ಚಂದ್ರಶೇಖರ ಹೆರಕಲ್, ಆರೋಗ್ಯ ಇಲಾಖೆಯ ರಾಜಶೇಖರ ಚಿಂಚೋಳಿ, ಶಿಕ್ಷಕ ಅಶೋಕ ಹಂಚಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts