More

    ಬಂಡೇಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಚಾರ್ಜ್​ಶೀಟ್​ನಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

    ರಾಮನಗರ: ಮಾಗಡಿಯ ಕಂಚುಗಲ್ ಬಂಡೇಮಠದ ಪೀಠಾಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ(45) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಅವರ ಕೊಠಡಿಯಲ್ಲಿ ಪತ್ತೆಯಾಗಿದ್ದ ನಂತರ ಅವರ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿತ್ತು. ಅದಾದ ಮೇಲೆ ಅನೇಕ ಕುತೂಹಲಕಾರಿ ಬೆಳವಣಿಗೆಗಳಿಗೆ ಈ ಘಟನೆ ಕಾರಣವಾಗಿತ್ತು. ಇತ್ತೀಚೆಗೆ ಮಾಗಡಿಯ ಕಂಚುಗಲ್ ಬಂಡೇ ಮಠದ ಶಿವೈಕ್ಯ ಶ್ರೀ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ರಾಮನಗರ ನ್ಯಾಯಾಲಯ ವಜಾಗೊಳಿಸಿತ್ತು.

    ಇದೀಗ ಮಾಗಡಿ ಬಂಡೆಮಠದ ಬಸವಲಿಂಗ ಶ್ರೀ ಆತ್ಮಹತ್ಯೆ ಪ್ರಕರಣದಲ್ಲಿ ಮಾಗಡಿ ಪೊಲೀಸರು ಗುರುವಾರ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪ್ರಕರಣದ ನಡೆದ ಒಂದುವರೆ ತಿಂಗಳ ಬಳಿಕ ಈಗ ಪೊಲೀಸರು 72 ಸಾಕ್ಷಿಗಳನ್ನು ಕಲೆಹಾಕಿ 216 ಪುಟಗಳ ಚರ್ಚ್ ಶೀಟ್ ಸಲ್ಲಿಸಿದ್ದಾರೆ ಎಂದು ರಾಮನಗರ ಎಸ್ಪಿ ಸಂತೋಷ್ ಬಾಬು ಮಾಹಿತಿ ನೀಡಿದ್ದಾರೆ.

    ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಗಳನ್ನು ಬಂಧಿಸಲಾಗಿದ್ದು ನಾಲ್ಕನೇ ಆರೋಪಿ ಸುರೇಶ್ ಗಾಗಿ ಹುಡುಕಾಟ ನಡೆದಿದೆ. ಸಿದ್ದಗಂಗಾ ಮಠದಲ್ಲಿನ ಸುರೇಶ್ ಎಂಬ ಮೆಕಾನಿಕಲ್ ಇಂಜಿನಿಯರ್ ಕಾಣೆಯಾಗಿದ್ದಾನೆ. ಈತ ಸಿಡಿಯನ್ನು ಎಡಿಟ್ ಮಾಡಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿತ್ತು.

    ಬಸವಲಿಂಗ ಸ್ವಾಮೀಜಿ ಸಿದ್ದಗಂಗಾ ಶ್ರೀಗಳಿಗೆ ಆಪ್ತರಾಗಿದ್ದರು. ಆದರೆ ಕಣ್ಣೂರು ಮಠದ ಸ್ವಾಮೀಜಿ ಶ್ರೀಗಳಿಗೆ ಏನೇ ಮಾಡಿದರೂ ಹತ್ತಿರವಾಗುತ್ತಿರಲಿಲ್ಲ. ಹೀಗಾಗಿ ಮಹಿಳೆಯನ್ನು ಬಳಸಿಕೊಂಡು ಬಂಡೆಮಠದ ಸ್ವಾಮೀಜಿಯನ್ನು ಟ್ರ್ಯಾಪ್ ಮಾಡಲಾಗಿತ್ತು. ಸವಲಿಂಗ ಶ್ರೀ ತೇಜೋವಧೆ ಮಾಡಲು ಈ ರೀತಿ ಮಾಡಿದ್ದರು. ಬಳಿಕ ಮರ್ಯಾದೆಗೆ ಅಂಜಿ ಬಸವಲಿಂಗ ಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಪ್ರಕರಣದಲ್ಲಿ ಡೆತ್ ನೋಟ್ ಪ್ರಮುಖ ಸಾಕ್ಷಿಯಾಗಿತ್ತು. ಸ್ವಾಮೀಜಿ ಒಂದು ಪೇಜ್ ಡ್ರ್ಯಾಫ್ಟ್ ಬರೆದು ಹರಿದು ಹಾಕಿದ್ದರು. ಒಂದು ಡೇತ್ ನೋಟ್ ಪೊಲೀಸರಿಗೆ, ಮತ್ತೊಂದು ಡೇತ್ ನೋಟ್ ಮಠಕ್ಕೆ ಎಂದು ಸ್ವಾಮೀಜಿ ಆತ್ಮಹತ್ಯೆಗೂ ಮುನ್ನ ಬರೆದಿದ್ದರು. ಫೆಬ್ರವರಿ ತಿಂಗಳಿನಲ್ಲಿ ಕಣ್ಣೂರು ಸ್ವಾಮೀಜಿ ಇಡೀ ಪ್ರಕರಣದ ಯೋಜನೆ ರೂಪಿಸಿದ್ದ. ಮಾರ್ಚ್ ತಿಂಗಳಿನಲ್ಲಿ ವಿಡಿಯೋ ಕಾಲ್ ಮೂಲಕ ಬಂಡೇಮಠದ ಸ್ವಾಮಿಜಿಯನ್ನು ಹೆದರಿಸಲಾಗುತ್ತಿತು ಎನ್ನುವ ಆಘಾತಕಾರಿ ಮಾಹಿತಿ ಈಗ ಬೆಳಕಿಗೆ ಬಂದಿದೆ.

    ಸಾಕ್ಷ್ಯಗಳ ಬಗ್ಗೆ ಸಂದೇಹ ವ್ಯಕ್ತವಾದ್ದರಿಂದ ಎಸ್​ಪಿ ಸಂತೋಷ್​ ಬಾಬು ಹೇಳಿಕೆ ನೀಡಿದ್ದು ‘ನಮ್ಮೆಲ್ಲ ಸಾಕ್ಷಿಗಳು ಸರಿಯಾಗಿಯೇ ಇದೆ. ಪಿಪಿಗೆ ಸಹ ಈ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಯಾವುದೇ ಕಾರಣಕ್ಕೂ ಮರು ತನಿಖೆ ಆಗುವುದಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts