More

    60ಕ್ಕೆ ಏರಿತು ಬಿಹಾರದಲ್ಲಿ ಕಳ್ಳಭಟ್ಟಿಗೆ ಬಲಿಯಾದವರ ಸಂಖ್ಯೆ…

    ಪಟ್ನಾ: ಇತ್ತೀಚೆಗೆ ಬಿಹಾರದ ಛಾಪ್ರಾ ಹೂಚ್​ ಪ್ರದೇಶದಲ್ಲಿ ಕಳ್ಳಭಟ್ಟಿಯಲ್ಲಿ ತಯಾರಿಸಿದ ಮದ್ಯವನ್ನು ಸೇವಿಸಿ ಅನೇಕರು ಅಸ್ವಸ್ಥರಾದ ಘಟನೆ ನಡೆದಿತ್ತು. ಅದಾದ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​, ಮದ್ಯಪಾನ ಮಾಡಿದವರು ಸತ್ತೇ ಹೋಗುತ್ತಾರೆ ಎಂದಿದ್ದರು. ಈಗ ಅಲ್ಲಿ ಸಾವಿನ ಸಂಖ್ಯೆ 60ಕ್ಕೆ ಏರಿದ್ದು, ಮದ್ಯ ನಿಷೇಧದ ಕಾಯ್ದೆ ಭಾರಿ ಟೀಕೆಗೆ ಗುರಿಯಾಗಿದೆ.

    ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಸತತ ಮೂರನೇ ದಿನವೂ ವಿರೋಧ ಪಕ್ಷಗಳು ಈ ದುರಂತದ ಬಗ್ಗೆ ಗದ್ದಲ ಎಬ್ಬಿಸಿದವು. ಸ್ಪೀಕರ್ ಪೀಠದ ಎದುರು ಬಿಜೆಪಿ ಶಾಸಕರು ಫಲಕಗಳನ್ನು ಹಿಡಿದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

    ಮಹಾಘಟಬಂಧನಕ್ಕೆ ಬೆಂಬಲ ನೀಡಿರುವ ಸಿಪಿಎಂ (ಎಂಎಲ್) ಲಿಬರೇಷನ್ ಪಕ್ಷ ಕೂಡ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದೆ. ಮದ್ಯ ಸೇವಿಸಿ ಮೃತಪಟ್ಟರೆ ಅಂಥವರ ಕುಟುಂಬಕ್ಕೆ ಪರಿಹಾರ ನೀಡಲಾಗುವುದಿಲ್ಲ ಎಂಬ ನಿಯಮವು ಮದ್ಯ ನಿಷೇಧ ಕಾನೂನಿನಲ್ಲಿದೆ. ಕಾನೂನಿನ ಈ ಅಂಶದ ಕುರಿತು ಮರುಪರಿಶೀಲನೆ ನಡೆಸಬೇಕು ಎಂದು ಆ ಪಕ್ಷ ಆಗ್ರಹಿಸಿದೆ!ಣ (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts