More

    ಜಾನುವಾರುಗಳಿಗೆ ಲಸಿಕೆ ಹಾಕಿಸಿ

    ಬಸವಕಲ್ಯಾಣ: ಮುಡಬಿ ವಲಯದ ಹಿರೇನಾಗಾಂವದ ಪ್ರಗತಿಪರ ಹೈನುಗಾರರಾದ ಶರಣಪ್ಪ ಗದಲೇಗಾಂವ್ ಹೈನುಗಾರಿಕಾ ಘಟಕದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹಾಗೂ ಹಿರೇನಾಗಾಂವ ಹಾಲು ಉತ್ಪಾದಕರ ಸಹಕಾರಿ ಸಂಘದ ಜಂಟಿ ಆಶ್ರಯದಲ್ಲಿ ಹೈನುಗಾರಿಕಾ ತರಬೇತಿ ಕಾರ್ಯಾಗಾರ ಜರುಗಿತು.

    ಯೋಜನೆಯ ಜಿಲ್ಲೆಯ ಹೈನುಗಾರಿಕಾ ನಿರ್ದೇಶಕ ಎಸ್.ಎಸ್.ಹಿರೇಮಠ ಮಾತನಾಡಿ, ರೈತರು ಲಾಭದಾಯಕ ಹೈನುಗಾರಿಕೆ ಆದಷ್ಟು ಕಡಿಮೆ ಖರ್ಚಿನಲ್ಲಿ ಸ್ಥಳೀಯ ಸಂಪನ್ಮೂಲ ಬಳಸಿಕೊಳ್ಳಬೇಕು. ಪಶು ಆಹಾರ ಮತ್ತು ಕೊಟ್ಟಿಗೆ ರಚಿಸಿಕೊಳ್ಳಬೇಕು. ಪ್ರಥಮ ಅಥವಾ ದ್ವಿತೀಯ ಗರ್ಭ ಧರಿಸಿದ ಕರು ಹಾಕಿದ ಜಾನುವಾರು ಖರೀದಿಸುವುದು ಸೂಕ್ತ. ಜಾನುವಾರುಗಳಿಗೆ ಬರುವ ರೋಗಗಳ ನಿರ್ವಹಣೆಗೆ ಲಸಿಕೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಹಿರೇನಾಗಾಂವ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷೆ ಕಲಾವತಿ ಚಿದಾನಂದ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಗ್ರಾಪಂ ಮಾಜಿ ಅಧ್ಯಕ್ಷ ನಾಗೇಶ ದರ್ಜೆ, ಸದಸ್ಯ ಪ್ರಭು ನಾಗೂರೆ, ಕೃಷಿ ಮೇಲ್ವಿಚಾರಕ ಮಹಾಂತೇಶ ಎಂ.ಡಿ., ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ನಿರ್ಮಲಾ, ಸೇವಾ ಪ್ರತಿನಿಧಿ ಸಂಗೀತಾ, ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ಮತ್ತು ಪ್ರಗತಿ ಬಂದು ಸ್ವಸಹಾಯ ಸಂಘ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts