More

    ಇಷ್ಟಲಿಂಗದ ಸಮಗ್ರ ಸೃಷ್ಟಿಯ ಸಂಕೇತ ಸಮಾನತೆ

    ಧಾರವಾಡ: ಬಸವಣ್ಣನವರ ಆಶಯದಂತೆ ಕಾಯಕದ ಅನುಗುಣವಾಗಿ ಜಾತಿ ಪರಿಗಣಿಸದೆ ಇಷ್ಟಲಿಂಗ ಧರಿಸಿದ ಪ್ರತಿಯೊಬ್ಬರು ಲಿಂಗಾಯತ ಎನ್ನುವ ಪರಂಪರೆ ಬಿತ್ತುವ ಕೆಲಸವಾಗಬೇಕು ಎಂದು ಬೆಂಗಳೂರಿನ ರಾಷ್ಟ್ರೀಯ ಬಸವದಳದ ಶ್ರೀ ಅಲ್ಲಮಪ್ರಭು ಸ್ವಾಮಿಜಿ ಹೇಳಿದರು.

    ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ರಾಷ್ಟ್ರೀಯ ಬಸವ ದಳ ಹಾಗೂ ಲಿಂಗಾಯತ ಮಹಾಸಭಾ ಏರ್ಪಡಿಸಿದ ಲಿಂ.ಲಿ೦ಗಾನ೦ದ ಸ್ವಾಮಿಜಿ ಹುಟ್ಟುಹಬ್ಬ ಹಾಗೂ ಬಸವಜ್ಯೋತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಮಾನತೆ ಎಂಬುದು ಇಷ್ಟಲಿಂಗದ ಸಮಗ್ರ ಸೃಷ್ಟಿಯ ಸಂಕೇತ ,ಇದು ವ್ಯಕ್ತಿಯ ಚೈತನ್ಯದ ಚಿತ್ಕಳೆಯ ಸಂಕೇತವೂ ಹೌದು. ಅಷ್ಟಾವರಣ ಪಂಚಾಚಾರ ಷಟಷ್ಥಲ ನಮ್ಮ ಅಂಗ ಪ್ರಾಣ ಆತ್ಮಗಳು. ಕಾಯಕ ದಾಸೋಹ, ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ ಪರಿಕಲ್ಪನೆಯಾಗಿದೆ ಎಂದರು.

    ಬಸವ ಸಮಿತಿ ಎಂ.ಜಿ.ಮುಳಕೂರ ಮಾತನಾಡಿ, ವೈಚಾರಿಕ ಧರ್ಮದಲ್ಲಿ ಜಾತಿಗಳಿಲ್ಲ ಆದರೆ ಕಸಬು ಉದ್ಯೋಗಗಳಿವೆ. ಸರ್ವರಿಗೂ ಸಮಪಾಲು, ಸಮಬಾಳು ಕಲ್ಪಿಸಿದ ಶ್ರೇಷ್ಠ ಧರ್ಮ ಬಸವಧರ್ಮ. ಸರ್ಕಾರದ ಮೀಸಲಾತಿ ಪಡೆಯಲು, ಫಲಾನುಭವಿಯಾಗಲು, ಅನುದಾನ ಪಡೆಯಲು ನಮ್ಮತನವನ್ನು ಮಾರಿಕೊಂಡು ಪಂಗಡ ಮಾಡಿಕೊಂಡು ವಿಭಜನೆ ಆಗಬಾರದು ಎಂದರು.

    ರವಿಕುಮಾರ ಅನುಭಾವ ನಿವೇದನೆ ಮಾಡಿದರು. ದೇವೆಂದ್ರಪ್ಪ ಇಂಗಳಹಳ್ಳಿ, ಅಧ್ಯಕ್ಷತೆವಹಿಸಿದ್ದರು. ಶಿವಾನಂದ ಲೋಲೆನವರ, ಶಿವಕುಮಾರ ಕಟಗಿ, ಶಿವಾನಂದ ಅಬಲೂರ, ಪ್ರಕಾಶ ಗರಗ, ಮಂಜುನಾಥ ಅಂಗಡಿ, ಫಕೀರಪ್ಪ ಬೇವಿನಮರದ ವೇದಿಕೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts