More

    ಸಿಎಂ ಬದಲಾವಣೆ ವಿಚಾರ ಪ್ರಸ್ತಾಪಿಸಿದ ಯತ್ನಾಳ್​ಗೆ ರೇಣುಕಾಚಾರ್ಯರಿಂದ ಖಡಕ್ ವಾರ್ನಿಂಗ್​​..!

    ಬೆಂಗಳೂರು: ಮುಖ್ಯಮಂತ್ರಿ ಬದಲಾಗ್ತಾರೆ ಎಂಬ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಿಎಂ ಬಿ.ಎಸ್​. ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

    ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಕಾಲು ಹಿಡಿದು ಬಿಜೆಪಿಗೆ ಬಂದ್ದಿದ್ದೀರಿ. ಇವತ್ತು ಅವರ ವಿರುದ್ಧ ‌ಮಾತನಾಡುತ್ತಿದ್ದಿರಾ? ರಾಜ್ಯದಲ್ಲಿ ಸಿಎಂ ಸ್ಥಾನ‌ ಖಾಲಿ‌ ಇಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕೆಂಬ ಕಾಳಜಿ ನಮಗೂ ಇದೆ. ಬನ್ನಿ ಒಟ್ಟಾಗಿ ಹೋಗಿ ಅನುದಾನ ಕೇಳೋಣ. ಅದನ್ನು ಬಿಟ್ಟು ಪಕ್ಷ ವಿರೋಧಿ ಹೇಳಿಕೆ ನೀಡಬೇಡಿ ಎಂದು ಯತ್ನಾಳಗೆ ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.

    ಯಡಿಯೂರಪ್ಪ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಮಹಾನ್ ನಾಯಕ. ಅವರ ನಾಯಕತ್ವವನ್ನು ಕೇಂದ್ರದ ವರಿಷ್ಠರು ಒಪ್ಪಿದ್ದಾರೆ. ಪ್ರಧಾನಮಂತ್ರಿ ನಿಮಗೆ ಕರೆ ಮಾಡಿ ಯಡಿಯೂರಪ್ಪ ಅವರನ್ನು ಇಳಿಸುತ್ತೇವೆ ಅಂತಾ ಹೇಳಿದ್ರಾ? ಒಂದು ಕಡೆ ಪಕ್ಷಕ್ಕೆ ಮುಜುಗರ ಆಗುವ ಹಾಗೆ ಮಾತಾಡ್ತೀರಿ, ಇನ್ನೊಂದು ಕಡೆ ಪ್ರಧಾನಿ ಹೆಸರು ಹೇಳ್ತೀರಿ, ಕಳೆದ ವರ್ಷ ಪ್ರವಾಹ ಆದಾಗ ನೀವೇ ನೇರವಾಗಿ ಪ್ರಧಾನಿ ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡಿಸಬೇಕಿತ್ತು. ಅದರ ಬದಲು ಬಹಿರಂಗವಾಗಿ ಪ್ರಧಾನಿ ವಿರುದ್ಧ ಹೇಳಿಕೆ ಕೊಡಲಿಲ್ವಾ ನೀವು? ಈಗ ನಮಗೆ ಯಡಿಯೂರಪ್ಪ ನಾಯಕ ಅಲ್ಲ, ಮೋದಿ, ಷಾ ಅಂತಾ ಹೇಳ್ತೀರಿ, ಬಿಜೆಪಿಗೆ ಎಲ್ಲರೂ ನಾಯಕರೇ, ಹಾಗಾದರೆ ಹಿಂದೆ ಯಡಿಯೂರಪ್ಪ ಅವರನ್ನು ಕೈಕಾಲು ಕಟ್ಟಿ ತಾವು ಬಿಜೆಪಿಗೆ ಬರಲಿಲ್ವಾ? ಆಗ ಯಡಿಯೂರಪ್ಪ ನಾಯಕ ಆಗಿರಲಿಲ್ವಾ? ಯಾಕೆ ಈ ರೀತಿ ಹೇಳಿಕೆ ಕೊಡ್ತಿದ್ದೀರಿ? ಹಗಲುಗನಸು ಕಾಣ್ತಾ ದುರಹಂಕಾರದ ಮಾತಾಡ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ: ಡಿಜೆಹಳ್ಳಿ ಗಲಭೆಕೋರರೊಂದಿಗೆ ಸಂಪರ್ಕ- ಕಾಲ್​ ರೆಕಾರ್ಡ್ಸ್​ನಿಂದ ‘ಸಿಕ್ಕಿಬಿದ್ದ’ ಸಂಪತ್​ರಾಜ್​

    ಯಡಿಯೂರಪ್ಪನವರು ಬಿಜೆಪಿ ಅಧಿಕಾರಕ್ಕೆ ತಂದ ಉದ್ದೇಶ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಶಾಸಕರ ಕೆಲಸ ಆಗುತ್ತಿಲ್ಲ ಅಂತಾ. ಸಿಎಂ ಸ್ಥಾನ ಖಾಲಿ ಇಲ್ಲ. ಏನು ನೀವು ದುರಹಂಕಾರದ ಮಾತು ಮಾತಾಡ್ತೀರಾ? ಉತ್ತರ ಕರ್ನಾಟಕ ಶಾಸಕರು ಎಲ್ಲರೂ ನಿಮ್ಮ ಬೆಂಬಲಕ್ಕೆ ಇದ್ದಾರಾ? ಯಡಿಯೂರಪ್ಪ ವಿರುದ್ಧ ಹೇಳಿಕೆ ಕೊಡಿ ಅಂತಾ ಹೇಳಿದ್ದಾರಾ? ಅಭಿವೃದ್ಧಿ ಪ್ರಶ್ನೆ ಬಂದಾಗ ನಾವೆಲ್ಲಾ ಉತ್ತರ ಕರ್ನಾಟಕ ಪರ ಕೈ ಎತ್ತುತ್ತೇವೆ. ಹೋಗ್ರೀ, ಪ್ರಧಾನಿ ಭೇಟಿ ಮಾಡ್ರೀ, ಅನುದಾನ ತನ್ರೀ ಎಂದು ಅವಾಲು ಎಸೆದರು.

    ಬಿಎಸ್​ವೈ ಅಧಿಕಾರ ಮುಗೀತು- ಉ.ಕದವರೇ ಮುಂದಿನ ಸಿಎಂ: ಯತ್ನಾಳ್​ ಸಿಡಿಸಿದರು ಬಾಂಬ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts