More

    ವಿಧಾನಸಭೆ ಸಭಾಂಗಣದಲ್ಲಿ ಸಾವರ್ಕರ್ ಫೋಟೋ ಹಾಕಲು ಚರ್ಚಿಸುವ ಅಗತ್ಯವಿಲ್ಲ; ಬಸನಗೌಡ ಪಾಟೀಲ ಯತ್ನಾಳ್

    ಬೆಳಗಾವಿ: ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಅವರ ಭಾವಚಿತ್ರ ಅನಾವರಣ ಮಾಡುತ್ತಿರುವುದು ಸ್ವಾಗತಾರ್ಹ. ಮಹಾತ್ಮಾ ಗಾಂಧಿ, ವಲ್ಲಭಬಾಯ್ ಪಟೇಲ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರ ಹಾಕಲು ಚರ್ಚಿಸುವ ಅವಶ್ಯಕತೆ ಇಲ್ಲ. ಅದರಂತೆ ವೀರ ಸಾವರ್ಕರ್ ಅವರ ಭಾವಚಿತ್ರ ಅಳವಡಿಕೆಗೂ ಚರ್ಚೆ ಅನಗತ್ಯ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

    ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಬಂದು, ಅವರು ಟಿಪ್ಪು ಸುಲ್ತಾನ ಭಾವಚಿತ್ರ ಹಾಕಿದರೆ ಸ್ವಾಗತಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಟಿಪ್ಪು ಓರ್ವ ಮತಾಂಧ ರಾಜ. ಆತನ ಫೋಟೋ ಹಾಕುವುದು ಸರಿಯಲ್ಲ, ನಾನು ಯಾವತ್ತಿಗೂ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.‌ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯಾವುದೇ ರಾಜ್ಯದ ಹೋರಾಟಗಾರರು ನಮ್ಮ ರಾಷ್ಟ್ರ ನಾಯಕರೇ. ಹೀಗಾಗಿ ಸಾವರ್ಕರ್ ಅವರ ಭಾವಚಿತ್ರ ರಾಜ್ಯ ವಿಧಾನಸಭೆ ಸಭಾಂಗಣದಲ್ಲಿ ಅಳವಡಿಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.‌

    ‘ಮಹಾತ್ಮ ಗಾಂಧಿ ಅವರನ್ನು ಹತ್ಯೆಗೈದ ಗೂಡ್ಸೆ ಜತೆ ಸಾವರ್ಕರ್ ಒಡನಾಟ ಹೊಂದಿದ್ದರು. ಗಾಂಧೀ ಅವರ ಭಾವಚಿತ್ರ ಇರುವಲ್ಲಿ ಗೂಡ್ಸೆ ಅವರ ಭಾವಚಿತ್ರ ಅಳವಡಿಕೆ ಎಷ್ಟು ಸರಿ’ ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸುತ್ತಿರುವ ವಿಚಾರವಾಗಿ, ಕಾಂಗ್ರೆಸ್​​ನ ಇಂದಿರಾ ಗಾಂಧಿ ಅವರೇ, ವೀರ ಸಾವರ್ಕರ್ ಅವರಂಥ ಅಪ್ಪಟ ದೇಶ ಭಕ್ತನನ್ನು ಕಂಡಿಲ್ಲ ಎಂದು ಪುಸ್ತಕದಲ್ಲಿ ಬರೆದಿದ್ದಾರೆ. ಆರೋಪ ಮುಕ್ತರಾಗಿರುವವರನ್ನು ಆರೋಪಿಸಲು ಯಾವುದೇ ನೈತಿಕತೆ ಇಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts