More

    ಬಸನಗೌಡ ಬಾದರ್ಲಿಗೆ ಲೋಕಸಭೆ ಟಿಕೆಟ್ -ರಣದೀಪ್‌ಸಿಂಗ್ ಸುರ್ಜೇವಾಲ

    ಸಿಂಧನೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿಗೆ ಮುಂಬರುವ ಲೋಕಸಭಾ ಚುನಾವಣೆಯ ಟಿಕೆಟ್ ಕೊಡಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದ್ದು, ಉನ್ನತ ಸ್ಥಾನಮಾನ ನೀಡಲಾಗುವುದೆಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ತಿಳಿಸಿದರು.

    ಬಸನಗೌಡ ನನ್ನ ತಮ್ಮನಿದ್ದಂತೆ

    ವಿಧಾನಸಭೆ ಕಾಂಗ್ರೆಸ್ ಟಿಕೆಟ್ ವಂಚಿತ ಬಸನಗೌಡ ಬಾದರ್ಲಿ ಅವರನ್ನು ಪಟ್ಟಣದ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚಿಸಿದ ಬಳಿಕ, ಸುದ್ದಿಗಾರರ ಜತೆ ಮಾತನಾಡಿ, ಬಸನಗೌಡ ನನ್ನ ತಮ್ಮನಿದ್ದಂತೆ. ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಈ ಹಿಂದೆ ನಾನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿದ್ದಾಗ, ಟಿಕೆಟ್ ತಪ್ಪಿತ್ತು. ಆದರೆ, ತಾಯಿಯಂತಿರುವ ಪಕ್ಷದಿಂದ ನಮಗೆ ಅನ್ಯಾಯವಾಗಿಲ್ಲ ಎಂದರು.

    ಇದನ್ನೂ ಓದಿ: ಸಮಯ, ಜಾಗ ನಿಗದಿ ಮಾಡಿ; ಬಿಜೆಪಿಗೆ ಸುರ್ಜೆವಾಲ ಸವಾಲು

    ಪಕ್ಷದಿಂದಾಗಿಯೇ ನಾವು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಹೀಗಾಗಿ ಬಸನಗೌಡರ ಬೆಂಬಲಿಗರು ಆಕ್ರೋಶಕ್ಕೆ ಒಳಗಾಗದೆ, ಪಕ್ಷದ ತೀರ್ಮಾನವನ್ನು ಗೌರವಿಸಬೇಕು. ಮುಂದಿನ 9 ತಿಂಗಳ ಅವಧಿಯಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಸನಗೌಡರಿಗೆ ಪಕ್ಷದ ಟಿಕೆಟ್ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

    ಸಚಿವ ಸ್ಥಾನ ದರ್ಜೆಯ ನಿಗಮ ಮಂಡಳಿಯ ಅಧಿಕಾರ

    ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಕೆಲವೇ ದಿನಗಳಲ್ಲಿ ಸಚಿವ ಸ್ಥಾನ ದರ್ಜೆಯ ನಿಗಮ ಮಂಡಳಿಯ ಅಧಿಕಾರ ನೀಡಲಾಗುವುದು. ಇನ್ನೂ 20 ಗಂಟೆಗಳಲ್ಲಿ ಬಸನಗೌಡರು ಬೆಂಬಲಿಗರೊಂದಿಗೆ ಚರ್ಚಿಸಿ ತಮ್ಮ ನಿರ್ಧಾರ ತಿಳಿಸಬೇಕೆಂದರು.

    ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ ಮಾತನಾಡಿ, ನಾನು ಯುವ ಕಾಂಗ್ರೆಸ್ ಅಧ್ಯಕ್ಷನಾಗಲು ಬಸನಗೌಡರು ಕಾರಣ. ಅವರಿಗೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ. ಪಕ್ಷದಿಂದ ಅವರಿಗೆ ಟಿಕೆಟ್ ಕೈತಪ್ಪಿದ್ದು, ನನಗೂ ಬೇಸರ ಮೂಡಿಸಿದೆ. ಆದರೆ, ಬಸನಗೌಡರು ರಾಜ್ಯಮಟ್ಟದ ನಾಯಕರಾಗಲಿದ್ದಾರೆ. ಹೀಗಾಗಿ ತಾಳ್ಮೆಯಿಂದ ಮುಂದಿನ ಹೆಜ್ಜೆ ಇಡಬೇಕು ಎಂದರು.

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಮಾತನಾಡಿ, ಕಾರ್ಯಕರ್ತರು ತಾಳ್ಮೆಯಿಂದ ಇರಬೇಕು. ನನಗೆ ಟಿಕೆಟ್ ಕೊಡಿಸಲು ಎಲ್ಲ ರೀತಿಯ ಪ್ರಯತ್ನವನ್ನು ಪಕ್ಷದ ಹಿರಿಯರು ಮಾಡಿದ್ದಾರೆ. ಎಲ್ಲರೂ ಸೇರಿ ಸೂಕ್ತ ತೀರ್ಮಾನ ಮಾಡೋಣ ಎಂದರು.

    ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ ಜವಳಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ವೆಂಕಟೇಶ ರಾಗಲಪರ್ವಿ, ಖಾಜಾ ರೌಡಕುಂದಾ, ಹಬೀಬ್, ದಾದಾಪೀರ್ ಇದ್ದರು.

    ಗೊಂದಲ

    ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹಾಗೂ ಮಹಮ್ಮದ್ ನಲಪಾಡ್ ಬಸನಗೌಡ ಬಾದರ್ಲಿ ಕಚೇರಿಗೆ ಆಗಮಿಸುತ್ತಿದ್ದಂತೆ ಘೋಷಣೆ ಕೂಗಿ, ಟಿಕೆಟ್ ನೀಡಬೇಕೆಂದು ಸ್ಥಳೀಯ ಕಾರ್ಯಕರ್ತರು ಪಟ್ಟು ಹಿಡಿದರು. ಸಂಧಾನ ಮಾತುಕತೆ ನಂತರ ನಡೆದ ಸಭೆಯಲ್ಲಿಯೂ ಕೆಲಕಾಲ ತಳ್ಳಾಟ ನಡೆಯಿತು.

    ಯಾವುದೇ ಕಾರಣಕ್ಕೂ ನಿಮ್ಮ ಮಾತಿಗೆ ನಾವು ಒಪ್ಪುವುದಿಲ್ಲ. ಟಿಕೆಟ್ ಕೊಡುವುದಾದರೆ ಮಾತ್ರ ಒಪ್ಪಿಕೊಳ್ಳುತ್ತೇವೆ ಎಂದು ಕಾರ್ಯಕರ್ತರು ಒತ್ತಾಯಿಸಿದಾಗ, ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕಾರ್ಯಕರ್ತರನ್ನು ಸಮಾಧಾನಪಡಿಸುವಷ್ಟರಲ್ಲಿ ಮುಖಂಡರು ಸುಸ್ತಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts