More

    ಬ್ಯಾರೇಜ್ ಅಕ್ಕಪಕ್ಕದ ರಸ್ತೆ ಹಾಳು

    ಮಾಂಜರಿ: ಕರ್ನಾಟಕ-ಮಹಾರಾಷ್ಟ್ರದ ಸಂಪರ್ಕ ಕೊಂಡಿಯಾದ ದೂಧಗಂಗಾ ನದಿಯ ಕಾರದಗಾ-ಭೋಜ ಬ್ಯಾರೇಜ್‌ನ ಎರಡೂ ಬದಿ ರಸ್ತೆಗಳು ನೀರಿನ ರಭಸಕ್ಕೆ ಕಿತ್ತು ಹೋಗಿವೆ. ಹಾಗಾಗಿ, ಶೀಘ್ರ ದುರಸ್ತಿ ಕೈಗೊಳ್ಳುವಂತೆ ಕಾರದಗಾ, ಭೋಜ, ಬೇಡಕಿಹಾಳ, ಮಾಂಗೂರ ಗ್ರಾಮಸ್ಥರು ಜನಪ್ರತಿನಿಧಿಗಳನ್ನು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

    ಪ್ರಸಕ್ತ ಸಾಲಿನ ಪ್ರವಾಹದಲ್ಲಿ ಕಾರದಗಾ-ಭೋಜ ಬ್ಯಾರೇಜ್ 24 ದಿನಗಳ ಕಾಲ ಮುಳುಗಡೆಯಾಗಿತ್ತು. ಬ್ಯಾರೇಜ್‌ನ ಭೋಜ ಬದಿ ಮತ್ತು ಕಾರಗದಾ ಬದಿಯ ರಸ್ತೆ ಕಿತ್ತು ಹೋಗಿದ್ದು, ಪ್ರಯಾಣಿಕರು ಸಂಚರಿಸಲು ಹೆದರುತ್ತಿದ್ದಾರೆ. ಅನಾಹುತವಾಗುವ ಮುನ್ನ ದುರಸ್ತಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.

    ಬ್ಯಾರೇಜ್ ಮಾರ್ಗವಾಗಿ ಬೇಡಕಿಹಾಳ, ಶಮನೇವಾಡಿ, ಭೋಜ, ಮಾಂಗೂರ, ಬಾರವಾಡ ಗ್ರಾಮಸ್ಥರಿಗೆ ಮಹತ್ವದ ಪಾತ್ರ ವಹಿಸುತ್ತವೆ. ಬಸ್, ಖಾಸಗಿ
    ವಾಹನಗಳು, ಲಾರಿಗಳು, ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳು ನೂರಾರು ಸಂಖ್ಯೆಯಲ್ಲಿ ಓಡಾಡುತ್ತವೆ. ಆದರೆ, ರಸ್ತೆ ಹದಗೆಟ್ಟಿದ್ದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ.

    ಕಾರದಗಾ-ಭೋಜ ಬ್ಯಾರೇಜ್ 1975 ರಲ್ಲಿ ನಿರ್ಮಿಸಲಾಗಿದೆ. ಪ್ರತಿವರ್ಷ ದೂಧಗಂಗಾ ನದಿಗೆ ಪ್ರವಾಹ ಬಂದು ಬಂದು ಬ್ಯಾರೇಜ್ ಶಿಥಿಲಾವಸ್ಥೆ ತಲುಪಿದೆ.

    10 ವರ್ಷ ಹಿಂದೆ ನೂತನ ಬ್ಯಾರೇಜ್ ನಿರ್ಮಾಣಕ್ಕೆ ಅನುದಾನ ಮಂಜೂರಾಗಿತ್ತು. ಆದರೆ, ಕಾರಣಾಂತರಗಳಿಂದ ಬ್ಯಾರೇಜ್ ನಿರ್ಮಾಣ ಆಗಲಿಲ್ಲ. ಇನ್ನಾದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಲಾಗುವುದು.
    | ರಾಜು ಖಿಚಡೆ ಗ್ರಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts