More

    ಕ್ರೆಜ್‌ಸಿಕೋವಾಗೆ ಫ್ರೆಂಚ್ ಓಪನ್ ಕಿರೀಟ, ಜೆಕ್ ಆಟಗಾರ್ತಿಗೆ ಚೊಚ್ಚಲ ಗ್ರಾಂಡ್ ಸ್ಲಾಂ ಗರಿ

    ಪ್ಯಾರಿಸ್: ಜೆಕ್ ಗಣರಾಜ್ಯದ ಬಾರ್ಬರಾ ಕ್ರೆಜ್‌ಸಿಕೋವಾ ಬಾರ್ಬರಾ ಕ್ರೆಜ್‌ಸಿಕೋವಾ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 25 ವರ್ಷದ ಕ್ರೆಜ್‌ಸಿಕೋವಾಗೆ ಇದು ವೃತ್ತಿಜೀವನದ ಮೊದಲ ಗ್ರಾಂಡ್ ಸ್ಲಾಂ ಗೆಲುವಾಗಿದೆ. ಅಲ್ಲದೆ, 1981ರ ಬಳಿಕ (ಹನಾ ಮಂಡ್ಲಿಕೋವಾ) ಬಳಿಕ ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ಪ್ರಶಸ್ತಿ ಜಯಿಸಿದ ಮೊದಲ ಜೆಕ್ ಆಟಗಾರ್ತಿ ಎನಿಸಿದರು.

    ವಿಶ್ವ ನಂ. 33 ಕ್ರೆಜ್‌ಸಿಕೋವಾ ಶನಿವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ರಷ್ಯಾದ ಅನುಭವಿ ಆಟಗಾರ್ತಿ ಅನಸ್ಟೆಸಿಯಾ ಪಾವ್ಲಚೆಂಕೋವಾ ವಿರುದ್ಧ 6-1, 2-6, 6-4 ಸೆಟ್‌ಗಳಿಂದ ಜಯಿಸಿದರು. ಒಂದು ಗಂಟೆ 58 ನಿಮಿಷಗಳ ಹೋರಾಟದಲ್ಲಿ ಕ್ರೆಜ್‌ಸಿಕೋವಾ ಜಯಿಸಿದರು. ಗ್ರಾಂಡ್ ಸ್ಲಾಂನಲ್ಲಿ ಈ ಹಿಂದೆ 6 ಬಾರಿ ಕ್ವಾರ್ಟರ್​ಫೈನಲ್‌ನಲ್ಲೇ ಎಡವಿದ್ದ 29 ವರ್ಷದ ಪಾವ್ಲಚೆಂಕೋವಾ, 52ನೇ ಗ್ರಾಂಡ್ ಸ್ಲಾಂನಲ್ಲಿ ಆಡಿದ ಚೊಚ್ಚಲ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು.

    ಇದನ್ನೂ ಓದಿ: ಯುರೋ ಕಪ್​ ಫುಟ್​ಬಾಲ್​ ಟೂರ್ನಿ; ಡ್ರಾ ಪಂದ್ಯದಲ್ಲಿ ವೇಲ್ಸ್​- ಸ್ವಿಜರ್ಲೆಂಡ್

    ಚಾಂಪಿಯನ್ ಕ್ರೆಜ್‌ಸಿಕೋವಾ 12.41 ಕೋಟಿ ರೂ. (14 ಲಕ್ಷ ಯುರೋ) ಬಹುಮಾನ ಪಡೆದರೆ, ರನ್ನರ್‌ಅಪ್ ಪಾವ್ಲಚೆಂಕೋವಾ 6.65 ಕೋಟಿ ರೂ. ಗಳಿಸಿದರು. ಫ್ರೆಂಚ್ ಓಪನ್‌ನಲ್ಲಿ ಸತತ 6ನೇ ವರ್ಷ ಮಹಿಳಾ ಸಿಂಗಲ್ಸ್ ಆಟಗಾರ್ತಿಯೊಬ್ಬರಿಗೆ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಒಲಿಯಿತು. ಗಾರ್ಬಿನ್ ಮುಗುರುಜಾ (2016), ಜೆಲೆನಾ ಒಸ್ತಾಪೆಂಕೊ (2017), ಸಿಮೋನಾ ಹಲೆಪ್ (2018), ಆಶ್ಲೆಗ್ ಬಾರ್ಟಿ (2019), ಇಗಾ ಸ್ವಿಯಾಟೆಕ್ (2020) ಹಿಂದೆ ಇಲ್ಲಿ ಚೊಚ್ಚಲ ಗ್ರಾಂಡ್ ಸ್ಲಾಂ ಒಲಿಸಿಕೊಂಡಿದ್ದರು. ಕಳೆದ 15 ಗ್ರಾಂಡ್ ಸ್ಲಾಂಗಳಲ್ಲಿ 9ರಲ್ಲಿ ಸಿಂಗಲ್ಸ್ ಆಟಗಾರ್ತಿಯರಿಗೆ ಚೊಚ್ಚಲ ಪ್ರಶಸ್ತಿ ಒಲಿದಿದೆ.

    ಪ್ರಶಸ್ತಿ ಡಬಲ್ ಅವಕಾಶ
    ಕ್ರೆಜ್‌ಸಿಕೋವಾ ಮಹಿಳಾ ಡಬಲ್ಸ್ ವಿಭಾಗದಲ್ಲೂ ಈಗಾಗಲೆ ದೇಶಬಾಂಧವೆ ಕ್ಯಾಟರಿನಾ ಸಿನಿಯಕೋವಾ ಜತೆಗೂಡಿ ಫೈನಲ್‌ಗೇರಿದ್ದು, ಪ್ರಶಸ್ತಿ ಡಬಲ್ ಸಾಧನೆಯ ಅವಕಾಶ ಹೊಂದಿದ್ದಾರೆ. 2000ದಲ್ಲಿ ಕೊನೆಯದಾಗಿ ಫ್ರಾನ್ಸ್‌ನ ಮೇರಿ ಪಿಯರ್ಸ್‌ ಪ್ಯಾರಿಸ್‌ನಲ್ಲಿ ಈ ಸಾಧನೆ ಮಾಡಿದ್ದರು.

    ಕರ್ನಾಟಕದ ಮನೀಷ್ ಪಾಂಡೆ ಲಂಕಾ ಪ್ರವಾಸಕ್ಕೆ ನಾಯಕನಾಗಬೇಕಿತ್ತು ಎಂದ ಭಾರತ ತಂಡದ ಮಾಜಿ ವೇಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts