More

    ಯುರೋ ಕಪ್​ ಫುಟ್​ಬಾಲ್​ ಟೂರ್ನಿ; ಡ್ರಾ ಪಂದ್ಯದಲ್ಲಿ ವೇಲ್ಸ್​- ಸ್ವಿಜರ್ಲೆಂಡ್​

    ಬಾಕು​: ಅಂತಿಮ ಹಂತದವರೆಗೂ ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾದ ಹಣಾಹಣಿಯಲ್ಲಿ ವೇಲ್ಸ್​ ಹಾಗೂ ಸ್ವಿಜರ್ಲೆಂಡ್​ ನಡುವಿನ ಯುರೋ ಕಪ್​ ಫುಟ್​ಬಾಲ್​ ಟೂರ್ನಿಯ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿತು. ಒಲಿಂಪಿಕ್​ ಸ್ಟೇಡಿಯಂನಲ್ಲಿ ಶನಿವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಉಭಯ ತಂಡಗಳು ತಲಾ 1 ಗೋಲುಗಳಿಸಿದವು. ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲುರಹಿತ ಸಮಬಲ ಸಾಧಿಸಿದ್ದರೂ ದ್ವಿತೀಯಾರ್ಧದ ಆರಂಭದಲ್ಲೇ ಬ್ರಿಲ್​ ಎಂಬೊಲೊ (49ನೇ ನಿಮಿಷ) ಗೋಲು ದಾಖಲಿಸಿ ಸ್ವಿಜರ್ಲೆಂಡ್​ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದರಿಂದ 49ನೇ ನಿಮಿಷದಲ್ಲಿ 1-0 ಗೋಲುಗಳಿಂದ ಮುನ್ನಡೆ ಸಾಧಿಸಿದ ಸ್ವಿಜರ್ಲೆಂಡ್​ ತಂಡದ ಪಾಳಯದಲ್ಲಿ ಗೆಲುವಿನ ಆಸೆ ಚಿರುಗಿತು.

    ಇದನ್ನೂ ಓದಿ: ಕರ್ನಾಟಕದ ಮನೀಷ್ ಪಾಂಡೆ ಲಂಕಾ ಪ್ರವಾಸಕ್ಕೆ ನಾಬಾಯಕನಾಗಬೇಕಿತ್ತು ಎಂದ ಭಾರತ ತಂಡದ ಮಾಜಿ ವೇಗಿ

    ಮತ್ತೊಂದೆಡೆ, ವೇಲ್ಸ್​ ತಂಡದ ಆಟಗಾರರು ಕೂಡ ತಿರುಗೇಟು ನೀಡಲು ಯತ್ನಿಸಿದರು. 75ನೇ ನಿಮಿಷದಲ್ಲಿ ಕ್ಲೀಫರ್​ ಮೂರೆ ಗೋಲು ದಾಖಲಿಸಿ ಸ್ವಿಜರ್ಲೆಂಡ್​ ತಂಡಕ್ಕೆ ಆಘಾತ ನೀಡಿದರು. ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಸ್ವೀಜ್​ ತಂಡಕ್ಕೆ ಕ್ಲೀಫರ್​ ಮೂರೆ​ ಶಾಕ್​ ಕೊಟ್ಟರು. ಬಳಿಕ ಸ್ವೀಸ್​ ತಂಡದ ಸ್ರೈಕರ್​ ಹ್ಯಾರಿಸ್​ ಸೆೆರೊವಿಕ್​ ಹೆಡರ್​ ಮೂಲಕ 85ನೇ ನಿಮಿಷದಲ್ಲಿ ಗೋಲು ಬಾರಿಸಿದರೂ ಆಫ್​ ಸೈಡ್​ ಆಗಿದ್ದ ಹಿನ್ನೆಲೆಯಲ್ಲಿ ಮೈದಾನದ ರೆಫ್ರಿ ಗೋಲನ್ನು ಮಾನ್ಯ ಮಾಡಲಿಲ್ಲ. ಇದರಿಂದ ಕಡೆ ಹಂತದಲ್ಲಿ ಗೆಲುವಿನ ಅವಕಾಶವನ್ನು ಸ್ವೀಸ್​ ತಂಡ ಕೈಚೆಲ್ಲಿತು.

    ಇದನ್ನೂ ಓದಿ: ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಶಿಖರ್​ ಧವನ್​ ಸಾರಥ್ಯದ ಭಾರತ ತಂಡ ಎದುರಿಸಲಿದೆ ಕಠಿಣ ಕ್ವಾರಂಟೈನ್​

    ಸ್ವೀಸ್​ ತಂಡ ಯುರೋ ಕಪ್​ನಲ್ಲಿ ಸತತ 6ನೇ ಪಂದ್ಯದಲ್ಲಿ ಅಜೇಯ ಸಾಧನೆ ಮಾಡಿತು. ಮೊದಲ ಪಂದ್ಯದಲ್ಲಿ ಜಯ ದಾಖಲಿಸಿರುವ ಇಟಲಿ ತಂಡ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಉಳಿಯಿತು. ವೇಲ್ಸ್​ ತಂಡ ಬುಧವಾರ ಟರ್ಕಿ ತಂಡವನ್ನು ಬಾಕುವಿನಲ್ಲಿ ಎದುರಿಸಿದರೆ, ಸ್ವೀಸ್​ ತಂಡ ರೋಮ್​ನಲ್ಲಿ ಇಟಲಿ ವಿರುದ್ಧ ಆಡಲಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts