More

    ಮೀಸಲಾತಿಗೆ ನಮ್ಮವರೇ ಬೆಂಬಲಿಸಿಲ್ಲ : ಶ್ರೀ ಶಾಂತವೀರ ಸ್ವಾಮೀಜಿ ಬೇಸರ ; ಹೊಸಕೆರೆಯಲ್ಲಿ ಡಿ.ಬನುಮಯ್ಯ ಪುತ್ಥಳಿ ಅನಾವರಣ

    ಮಧುಗಿರಿ : ಹೊಸಕೆರೆ ಗ್ರಾಮದಲ್ಲಿ ಮಂಗಳವಾರ ವಿಶ್ವ ಕುಂಚಿಟಿಗರ ಯುವಶಕ್ತಿ ಹಾಗೂ ಹೊಸಕೆರೆ ಗ್ರಾಪಂ ಸಂಯುಕ್ತಾಶ್ರಯದಲ್ಲಿ ಡಿ.ಬನುಮಯ್ಯ ಪುತ್ಥಳಿ ಅನಾವರಣ ಹಾಗೂ ವೃತ್ತ ನಾಮಕರಣ ಕಾರ್ಯಕ್ರಮ ನಡೆಯಿತು.

    ಹೊಸಕೆರೆಯಲ್ಲಿ ರಾವ್ ಬಹದ್ದೂರ್ ಡಿ.ಬನುಮಯ್ಯ ವೃತ್ತ ಎಂದು ನಾಮಕರಣ ಮಾಡಿರುವುದು ರಾಜ್ಯದಲ್ಲೇ ಮೊದಲು ಎಂದು ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು.

    ಡಿ.ಬನುಮಯ್ಯ ಅವರ ಹೆಸರನ್ನು ಮೈಸೂರಿನಲ್ಲಿ ರಸ್ತೆಗೆ ಹೆಸರಿಡಲಾಗಿದೆ. ವೃತ್ತಕ್ಕೆ ಹೆಸರಿಟ್ಟಿರುವುದು ಇದೇ ಮೊದಲು, ಪುತ್ಥಳಿ ಮೈಸೂರು, ಶಿರಾದಲ್ಲಿದ್ದು, 4ನೇಯದಾಗಿ ಮಧುಗಿರಿಯಲ್ಲಾಗಿದೆ. ಪುತ್ಥಳಿಗಳನ್ನು ನಿರ್ಮಿಸುವುದರ ಮೂಲಕ ಅವರ ಆದರ್ಶ ಮೌಲ್ಯೃ ಯುವ ಪೀಳಿಗೆಗೆ ಪರಿಚಯಿಸಿದಂತಾಗುತ್ತದೆ. ಪೀಠಗಳು, ಮಠಗಳು ಆಯಾ ಸಮುದಾಯದ ಜಾಗೃತಿ ಮೂಡಿಸಲು ಪಾರಂಭವಾದವು, ಎಲ್ಲ ಸಮುದಾಯಗಳು ಶಿಕ್ಷಣ ಮೀಸಲಾತಿ ರಾಜಕೀಯ ಪ್ರಾವೀಣ್ಯತೆ ಪಡೆದಿದ್ದಾರೆ. ಆದರೆ ಕುಂಚಿಟಿಗರು ಇದನ್ನು ಪಡೆಯುವಲ್ಲಿ ವಿಫಲರಾಗಿದ್ದೇವೆ ಎಂದರು.

    ನಮ್ಮವರೇ ನಮ್ಮನ್ನು ಬೆಂಬಲಿಸುವುದ್ಲಿ: ನಮ್ಮಿಂದ ಗೆದ್ದವರು ನಮಗೆ ಮೀಸಲಾತಿ ಬೇಕು ಎಂದು ಹೋರಾಟ ಮಾಡುತ್ತಾರೆ. ಆದರೆ, ನಮ್ಮವರೇ ಹೋರಾಟ ಮಾಡುವಲ್ಲಿ ಹಿಂದಿರುವುದು ಬೇಸರ ತಂದಿದೆ ಎಂದು ಶಾಂತವೀರ ಸ್ವಾಮೀಜಿ ಹೇಳಿದರು.
    1994ರಲ್ಲಿ ಕುಂಚಿಟಿಗರು ಕೇಂದ್ರ ಸರ್ಕಾರದಲ್ಲಿ ಮೀಸಲು ಪಡೆದರು. ನಂತರ ನಮ್ಮ ಸಮುದಾಯದವರನ್ನು ಬಿಟ್ಟು ಹೋಗುತ್ತಾರೆಂದು ಒಂದೇ ಕಾರಣಕ್ಕೆ ಆ ಪಟ್ಟಿಯಿಂದ ಒಬಿಸಿ ಹೊರತೆಗೆಯಲಾಗಿದೆ. ಮಾಜಿ ಸಂಸದ ಮುದ್ದಹನುಮೇಗೌಡ ಮತ್ತು ಸಂಸದ ಜಿ.ಎಸ್.ಬಸವರಾಜು ನಮ್ಮ ಪರ ಮಾತನಾಡಿದರು. ಕೆ.ಎನ್.ರಾಜಣ್ಣ ಅವರು ವಿಧಾನಸಭೆಯಲ್ಲಿ ಕುಂಚಿಟಿಗರಿಗೆ ಮೀಸಲಾತಿ ಕೊಡಿ ಎಂದು ಪ್ರಸ್ತಾಪಿಸಿದ್ದರು. ಆದರೆ ಮಧುಗಿರಿ ಶಾಸಕ ವೀರಭದ್ರಯ್ಯ, ಶಿರಾ ಶಾಸಕರಾಗಿದ್ದ ಟಿ.ಬಿ.ಜಯಚಂದ್ರ ಅವರು ಒಬಿಸಿ ಪಟ್ಟಿಗೆ ಸೇರಿಸಲು ಪ್ರಯತ್ನ ಕೂಡ ಮಾಡಲ್ಲಿ ಎಂದರು.

    ಸರ್ವ ಜನಾಂಗದೊಂದಿಗೆ ಇರಬೇಕು: 33 ಸಮುದಾಯದ ಸ್ವಾಮೀಜಿಗಳ ಜತೆಗೆ ಚೆನ್ನಾಗಿದ್ದು, ಯಾರೇ ಕರೆದರೂ ನಾನು ಹೋಗಲು ಸಿದ್ಧನಿದ್ದೇನೆ. ವಾಲ್ಮೀಕಿ ಸಮುದಾಯದವರು ಬರುತ್ತಾರೆಂದು ಅಸಡ್ಡೆ ತೋರುವುದು, ಹರಿಜನರು ಬರುತ್ತಾರೆಂದು ನಾನು ಬರುವುದಿಲ್ಲವೆಂದು ಎಲ್ಲೂ ಹೇಳುವುದ್ಲಿ, ಜನರ ಹೃದಯದಲ್ಲಿ ನಾವಿದ್ದೇವೆ. ಎ್ಲರೂ ಒಂದಾದರೆ ಹಿಂದುವಾಗಲು ಸಾಧ್ಯ ಎಂದು ಸ್ವಾಮೀಜಿ ಹೇಳಿದರು.
    ಹೊಸಕೆರೆ ಗ್ರಾಪಂ ಸದಸ್ಯರಾದ ರಂಗಪ್ಪ, ಲಕ್ಷ್ಮೀ, ದಿವ್ಯಾ, ಉಮಾ ಚಿರಂಜಿವಿ, ವಿಶ್ವ ಕುಂಚಿಟಿಗ ಯುವಶಕ್ತಿ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಶಾಂತ್, ಉಪಾಧ್ಯಕ್ಷ ರಮೇಶ್ ಗುಟ್ಟೆ, ಪ್ರಧಾನ ಕಾರ್ಯದರ್ಶಿ ಎ.ಮಾರುತಿ, ಸುಬ್ರಮಣಿ, ಎಸ್.ಮೋಹನ್ ಕುಮಾರ್, ಹರೀಶ್ ಬಾಬು, ದೊರೆ ಭಗವಾನ್, ಮಧುಸೂದನ್, ಡಿ.ಬಿ.ಆಶಾ, ಚೇತನ್, ಗಜೇಂದ್ರ, ವೀರಾಪುರ ಶಿವಕುಮಾರ್, ಪಿ.ಡಿ.ಶಿವಣ್ಣ, ನೀಲಿಹಳ್ಳಿ ರಮೇಶ್, ಬಡಕನಹಳ್ಳಿ ಪ್ರವೀಣ್ ಶಿವಶಂಕರ್, ಹುಣಸವಾಡಿ ಶಿವಕುಮಾರ್, ಮರೀತಿಮ್ಮನಹಳ್ಳಿ ದಿಲೀಪ್, ನೀರಕಲ್ಲು ಶರತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts