More

    ಉದ್ಯೋಗ ಕಳೆದುಕೊಂಡವರಿಗೆ ಬ್ಯಾಂಕ್​ಗಳಿಂದಲೂ ಶೂಲ

    ಮುಂಬೈ: ಮನೆ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು ಅಥವಾ ಗೃಹ ಸಾಲ ಪಡೆದು ಕೆಲವೇ ದಿನಗಳಾಗಿದ್ದು, ಕೋವಿಡ್​-19 ಹಿನ್ನೆಲೆಯಲ್ಲಿ ಉದ್ಯೋಗ ನಷ್ಟಕ್ಕೆ ಒಳಗಾದವರಿಗೆ ಬ್ಯಾಂಕ್​ಗಳೂ ಶಾಕ್​ ಕೊಡಲು ಮುಂದಾಗುತ್ತಿವೆ.

    ಕೋವಿಡ್​-19 ಲಾಕ್​ಡೌನ್​ ಹಿನ್ನೆಲೆಯಲ್ಲಿ ಹಲವು ಸಂಸ್ಥೆಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದು, ಹಲವರ ವೇತನದಲ್ಲಿ ಗಣನೀಯ ಕಡಿತಗಳನ್ನು ಮಾಡಿರುವುದು ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಬ್ಯಾಂಕ್​ಗಳು ಗೃಹ ಸಾಲ ಕೇಳಿ ಅರ್ಜಿ ಸಲ್ಲಿಸಿದ್ದರೆ ಅಥವಾ ಹೊಸದಾಗಿ ಗೃಹ ಸಾಲ ಮಂಜೂರಾತಿ ಪಡೆದುಕೊಂಡವರಿಗೆ ಪ್ರಸಕ್ತ ತಿಂಗಳಿಣ ವೇತನಚೀಟಿ (ಸ್ಯಾಲರಿ ಸ್ಲಿಪ್​) ನಕಲುಗಳನ್ನು ತಕ್ಷಣವೇ ಸಲ್ಲಿಸುವಂತೆ ಸೂಚಿಸುತ್ತಿವೆ.

    ಉದ್ಯೋಗ ನಷ್ಟಕ್ಕೆ ಒಳಗಾಗಿದ್ದರೆ ಸಾಲ ಮರುಪಾವತಿ ಸಾಮರ್ಥ್ಯ ಇರುವುದಿಲ್ಲವಾದ್ದರಿಂದ, ಅಂಥವರ ಮನೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ವೇತನ ಕಡಿತಗೊಂಡಿದ್ದರೂ, ಸಾಲ ಮರುಪಾವತಿಸಬಹುದು ಎಂದೆನಿಸದರೆ ಮಾತ್ರವೇ ಅಂಥವರ ಸಾಲವನ್ನು ಮುಂದುವರಿಸಲಾಗುತ್ತಿದೆ.

    ಈ ಸಮಸ್ಯೆ ಮುಂಬೈನಲ್ಲಿ ಸ್ವಲ್ಪ ಹೆಚ್ಚಾಗಿದೆ. ಗೃಹ ಸಾಲ ಪಡೆಯಲು ಬಯಸಿ ಅರ್ಜಿ ಸಲ್ಲಿಸಿದ್ದರೆ, ಅಂಥವರಿಗೆ ಬ್ಯಾಂಕ್​ಗಳು ಸಾಲ ಕೊಡುವುದನ್ನೇ ನಿಲ್ಲಿಸಿವೆ. ಇದು ಕಳೆದೆರಡು ತಿಂಗಳಿನಿಂದ ಇರುವ ಪರಿಸ್ಥಿತಿ. ಇದರಿಂದಾಗಿ ಒಂದು ಕಡೆ ಗ್ರಾಹಕರು ಇನ್ನೊಂದು ಕಡೆ ಬಿಲ್ಡರ್​ಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ.

    ಕೆಲವೊಂದು ಪ್ರಕರಣಗಳಲ್ಲಿ ಬ್ಯಾಂಕ್​ಗಳು ಮೊದಲ ಕಂತಿನ ರೂಪದಲ್ಲಿ ಒಟ್ಟು ಗೃಹ ಸಾಲದ ಶೇ.20 ಸಾಲವನ್ನು ವಿತರಿಸಿವೆ. ಇನ್ನುಳಿದ ಮೊತ್ತವನ್ನು ವಿತರಿಸಲು ನಿರಾಕರಿಸುತ್ತಿವೆ ಎನ್ನಲಾಗಿದೆ.

    ಇದನ್ನೂ ಓದಿ: ಚೀನಾ ಕರಾವಳಿಯಲ್ಲಿ ಕಳವಳಕಾರಿ ವಿದ್ಯಮಾನ, ತೀರ ಸಮೀಪಿಸುತ್ತಿದ್ದಂತೆ ದಿಕ್ಕು ತಪ್ಪಿದ ಹಡಗುಗಳು…!

    ತಮ್ಮ ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಬ್ಯಾಂಕ್​ಗಳು, ಒಂದೊಮ್ಮೆ ಗೃಹ ಸಾಲ ವಿತರಿಸಲಾಗಿದ್ದರೆ, ವಿತರಿಸುವುದಿದ್ದರೆ, ಆ ಗ್ರಾಹಕ ಸಾಲ ಮರುಪಾವತಿಸಲು ಸಮರ್ಥನೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ. ಒಂದು ವೇಳೆ ಇಎಂಐ (ಸಮಾನ ಮಾಸಿಕ ಕಂತು) ಕಟ್ಟಲು ಅವರು ಸಮರ್ಥರಿಲ್ಲ ಎನ್ನುವುದಾದರೆ, ಸಾಲ ವಿತರಣೆಯನ್ನು ನಿಲ್ಲಿಸುವುದೇ ಒಳ್ಳೆಯದು. ಏಕೆಂದರೆ, ಗ್ರಾಹಕ ಇಎಂಐ ಪಾವತಿಸದೇ ಹೋದರೆ, ಅತ್ತ ಮನೆಯೂ ಇರುವುದಿಲ್ಲ, ಇತ್ತ, ಕಡಿಮೆ ಬೆಲೆಯ ಮನೆ ಖರೀದಿಸಲು ಹೊಸ ಸಾಲವೂ ಹುಟ್ಟುವುದಿಲ್ಲ ಎಂದು ಸ್ಪಷ್ಟಪಡಿಸಿವೆ.

    ಅಷ್ಟೇ ಅಲ್ಲ, ಉದ್ಯೋಗಿಗಳು ವೇತನ ಕಡಿತಕ್ಕೆ ಒಳಗಾಗಿದ್ದಾರೆಯೇ, ಕಡಿತಗೊಂಡಿದ್ದರೆ ಎಷ್ಟು ಪ್ರಮಾಣದ ಕಡಿತವಾಗಿದೆ ಎಂಬುದನ್ನು ಬ್ಯಾಂಕ್​ಗಳು ಪರಿಶೀಲಿಸುತ್ತಿವೆ. ಹೀಗಾಗಿ ಬ್ಯಾಂಕ್​ಗಳು ಸಾಲದ ಅರ್ಜಿಗಳೆಲ್ಲವನ್ನೂ ಬಾಕಿ ಉಳಿಸಿಕೊಂಡಿವೆ. ಇದರಿಂದ ಬಿಲ್ಡರ್​ಗಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಮಹಾರಾಷ್ಟ್ರ ವಸತಿ ಉದ್ದಿಮೆಗಳ ಮಹಾಸಂಸ್ಥೆಯ (ಥಾಣೆ) ಅಧ್ಯಕ್ಷ ಅಜಯ್​ ಅಶರ್​ ಹೇಳಿದ್ದಾರೆ.

    50 ಲಕ್ಷ ರೂ. ಮೇಲ್ಪಟ್ಟ ಗೃಹ ಸಾಲಗಳ ಮರುಪರಿಶೀಲನೆಗೆ ಬ್ಯಾಂಕ್​ಗಳು ಮುಂದಾಗುತ್ತಿವೆ. ಬ್ಯಾಂಕ್​ಗಳು ಸಾಲ ವಿತರಿಸಲು ಬಯಸುತ್ತಿಲ್ಲ, ಇನ್ನೊಂದೆಡೆ ಆರ್ಥಿಕ ಚೇತರಿಕೆಗೂ ಸಹಕರಿಸುವ ಮನೋಭಾವವನ್ನು ತೋರುತ್ತಿಲ್ಲ. ಒಟ್ಟಿನಲ್ಲಿ ಅವು ದುಪ್ಪಟ್ಟು ಬಡ್ಡಿ ವಸೂಲಿ ಮಾಡಿ, ಲಾಕ್​ಡೌನ್​ನಿಂದಾಗಿ ಆಗಿರುವ ಆದಾಯ ನಷ್ಟವನ್ನು ಸರಿದೂಗಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಕ್ರೆಡೈ-ಎಂಸಿಎಚ್​ಐ ಅಧ್ಯಕ್ಷ ಹಾಗೂ ಡೆವೆಲಪರ್​ ನಯನ್​ ಷಾ ಬೇಸರ ವ್ಯಕ್ತಪಡಿಸಿದ್ದಾರೆ.

    ಹಿಂದಿನ ದಿನ ಸಮಾಧಿ ಮಾಡಿದ್ದ ‘ತಂದೆ’ಯ ಶವ ಮರುದಿನ ಆಸ್ಪತ್ರೆಯ ಶವಾಗಾರದಲ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts