More

    ಬಂದರು ನೋಡಿ ಬನಿತಾ ; “ಗೂಢಚಾರಿ 2′ ಚಿತ್ರದಲ್ಲಿ ಅಡಿವಿ ಶೇಷ್​ಗೆ ಜೋಡಿಯಾದ ನಟಿ

    “ಮೇಜರ್​’ ಖ್ಯಾತಿಯ ಅಡಿವಿ ಶೇಷ್​ ನಾಯಕನಾಗಿದ್ದ 2018ರ ಹಿಟ್​ ಸಿನಿಮಾ “ಗೂಢಚಾರಿ’. ಕಳೆದ ವರ್ಷ ಅದರ ಸೀಕ್ವಲ್​ “ಗೂಢಚಾರಿ 2′ ಘೋಷಿಸಲಾಗಿತ್ತು. ಮೊದಲ ಚಿತ್ರ ಶಶಿಕಿರಣ್​ ಟಿಕ್ಕ ನಿರ್ದೇಶನದಲ್ಲಿ ಮೂಡಿಬಂದಿತ್ತು. ಇದೀಗ ಈ ಸೀಕ್ವಲ್​ಗೆ “ಮೇಜರ್​’ ಚಿತ್ರದ ಸಂಕಲನಕಾರ ವಿನಯ್​ ಕುಮಾರ್​ ಮೊದಲ ಬಾರಿಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದು, ಈಗಾಗಲೇ ಹೈದರಾಬಾದ್​ನಲ್ಲಿ ಮೊದಲ ಶೆಡ್ಯೂಲ್​ ಶೂಟಿಂಗ್​ ಮುಗಿಸಿರುವ ಚಿತ್ರತಂಡ ಇತ್ತೀಚೆಗಷ್ಟೆ ಗುಜರಾತ್​ನ ಭುಜ್​ನಲ್ಲಿ ಎರಡನೇ ಹಂತದ ಚಿತ್ರೀಕರಣ ಪ್ರಾರಂಭಿಸಿದೆ.

    ಬಂದರು ನೋಡಿ ಬನಿತಾ ; "ಗೂಢಚಾರಿ 2' ಚಿತ್ರದಲ್ಲಿ ಅಡಿವಿ ಶೇಷ್​ಗೆ ಜೋಡಿಯಾದ ನಟಿ

    ಹೆಸರೇ ಹೇಳುವಂತೆ ಇದೊಂದು ಆ್ಯಕ್ಷನ್​ ಸ್ಪೈ ಥ್ರಿಲ್ಲರ್​ ಚಿತ್ರವಾಗಿದ್ದು, ಕೆಲ ದಿನಗಳ ಹಿಂದಷ್ಟೇ ಬಾಲಿವುಡ್​ ನಟ ಎಮ್ರಾನ್​ ಹಷ್ಮಿ ಖಡಕ್​ ವಿಲನ್​ ಆಗಿ “ಗೂಢಚಾರಿ 2′ ಟೀಂ ಸೇರಿಕೊಂಡಿದ್ದರು. ಅವರ ಬೆನ್ನಲ್ಲೇ ಭುಜ್​ ಶೆಡ್ಯೂಲ್​ನಲ್ಲಿ ನಾಯಕಿ ಬನಿತಾ ಸಂಧು, ಶೇಷ್​ಗೆ ಸಾಥ್​ ನೀಡಿದ್ದಾರೆ. ಈ ಹಿಂದೆ “ಅಕ್ಟೋಬರ್​’, “ಸರ್ದಾರ್​ ಉಧಮ್​’ ಸೇರಿ ತಮಿಳಿನ “ಆದಿತ್ಯ ವರ್ಮ’ ಚಿತ್ರದಲ್ಲೂ ನಟಿಸಿದ್ದ ಬನಿತಾಗೆ “ಗೂಢಚಾರಿ 2′ ಮೊದಲ ಪ್ಯಾನ್​ ಇಂಡಿಯಾ ಸಿನಿಮಾ. ಇದೇ ಮೊದಲ ಬಾರಿಗೆ ವಿಭಿನ್ನ ಅವತಾರದಲ್ಲಿ ಅವರು ಮಿಂಚಲಿದ್ದಾರೆ.

    ಬಂದರು ನೋಡಿ ಬನಿತಾ ; "ಗೂಢಚಾರಿ 2' ಚಿತ್ರದಲ್ಲಿ ಅಡಿವಿ ಶೇಷ್​ಗೆ ಜೋಡಿಯಾದ ನಟಿ

    ಹೈದರಾಬಾದ್​, ಭುಜ್​ ಜತೆ ಯುಎಇ ಹಾಗೂ ಯೂರೋಪ್​ನಲ್ಲಿ ಶೂಟಿಂಗ್​ಗೆ ಪ್ಲ್ಯಾನ್​ ಮಾಡಿಕೊಳ್ಳಲಾಗಿದೆ. ಈ ಸೀಕ್ವಲ್​ ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಇದೇ ವರ್ಷ ತೆರೆಗೆ ಬರಲಿದೆ ಎನ್ನಲಾಗಿದೆ.

    ಬಂದರು ನೋಡಿ ಬನಿತಾ ; "ಗೂಢಚಾರಿ 2' ಚಿತ್ರದಲ್ಲಿ ಅಡಿವಿ ಶೇಷ್​ಗೆ ಜೋಡಿಯಾದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts