More

    ವೀರಶೈವ ಸಿದ್ಧಾಂತದಲ್ಲಿ ವಿಶೇಷ ಆಸಕ್ತಿ; ಇಷ್ಟಲಿಂಗ ದೀಕ್ಷೆ ಪಡೆದ ಬಾಂಗ್ಲಾ ಮಹಿಳೆ

    ವಾರಣಾಸಿ: ಬಾಂಗ್ಲಾ ದೇಶದ ಸ್ವಾತಂತ್ರ್ಯ ಹೋರಾಟಗಾರ್ತಿ ಚಾರುಪ್ರಸನ್ನ ಎಂಬ ಮಹಿಳೆ ಕಾಶೀ ಜಂಗಮವಾಡಿ ಮಠದಲ್ಲಿ ವೀರಶೈವ ಧರ್ಮದ ಪದ್ಧತಿಯಂತೆ ಇಷ್ಟಲಿಂಗ ದೀಕ್ಷೆ ಪಡೆದಿದ್ದಾರೆ. ಮೂಲತಃ ಬಾಂಗ್ಲಾದವರಾದ ಚಾರುಪ್ರಸನ್ನ ಅವರು ವೀರಶೈವ ಸಿದ್ಧಾಂತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು, ಹೀಗಾಗಿ ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳನ್ನು ಭೇಟಿಯಾಗಿ ಇಷ್ಟಲಿಂಗ ದೀಕ್ಷೆ ನೀಡುವಂತೆ ವಿನಂತಿಸಿಕೊಂಡಿದ್ದರು.

    ಬಾಂಗ್ಲಾ ದೇಶದ ಪಂಕಜ್ ರಾಯ್ ಎಂಬ ಯುವಕ ಆನ್​ಲೈನ್ ಮುಖಾಂತರ ಕಾಶೀ ಜಗದ್ಗುರುಗಳ ಪ್ರವಚನದಿಂದ ಪ್ರಭಾವಿತನಾಗಿ ಕಳೆದ ವರ್ಷ ಇಷ್ಟಲಿಂಗ ದೀಕ್ಷೆ ಪಡೆದು, ಬಳಿಕ ಬಾಂಗ್ಲಾದಲ್ಲಿ ಜಂಗಮವಾಡಿ ಶಾಖಾಮಠವನ್ನೇ ಪ್ರಾರಂಭಿಸಿದ್ದ. ಆ ಮಠದ ವಕ್ತಾರರಾಗಿರುವ ಚಾರುಪ್ರಸನ್ನ, ಬಾಂಗ್ಲಾದೇಶದ ನರ್ಸಿಂಗ್ ಕಾಲೇಜೊಂದರ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಷ್ಟಲಿಂಗ ದೀಕ್ಷೆಯಾದ ನಂತರ ಅನ್ನಪೂರ್ಣ ಎಂಬ ಹೆಸರನ್ನು ಅವರಿಗೆ ಇಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts