More

    ಮೆಟ್ಟಿಲುಗಳ ಸಹಾಯವಿಲ್ಲದೆ 1700 ಅಡಿ ಎತ್ತರದ ಗಡಾಯಿಕಲ್ಲು ಏರಿದ ಕೋತಿ ರಾಜ್!

    ಮಂಗಳೂರು: ಬೆಳ್ತಂಗಡಿ ತಾಲೂಕಿನಲ್ಲಿ ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿರುವ ಪ್ರಸಿದ್ಧ ಗಡಾಯಿಕಲ್ಲನ್ನು ಜ್ಯೋತಿ ರಾಜ್(ಕೋತಿ ರಾಜ್) ರೋಪ್ ಸಹಾಯದಿಂದ ಏರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ರೋಪ್​ವೇ ಸಹಾಯದಿಂದ ಗಡಾಯಿಕಲ್ಲು ಏರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಜ್ಯೋತಿ ರಾಜ್ ಪಾತ್ರರಾಗಿದ್ದಾರೆ.

    ಗಡಾಯಿಕಲ್ಲಿನ ಕೆಳಭಾಗದಲ್ಲಿರುವ ಚಂದ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೊದಲು ಪೂಜೆ ಸಲ್ಲಿಸಿ, ಬಳಿಕ ಮೆಟ್ಟಿಲುಗಳ ಸಹಾಯವಿಲ್ಲದೆ ಗಡಾಯಿಕಲ್ಲು ಏರಿದ್ದಾರೆ.

    ಕಳೆದರೆಡು ದಿನಗಳಿಂದ ಗಡಾಯಿಕಲ್ಲಿಗೆ ತೆರಳಿ ಜ್ಯೋತಿರಾಜ್ ಪರಿಶೀಲನೆ ನಡೆಸಿದ್ದರು. ಈ ಹಿಂದೆ ವಿಶ್ವವಿಖ್ಯಾತ ಜೋಗದಲ್ಲಿ ಬಿದ್ದು ಬೆನ್ನುಮೂಳೆಗೆ ಗಾಯ ಮಾಡಿಕೊಂಡಿದ್ದರು. ಇದೀಗ ಒಂದೂವರೆ ವರ್ಷದ ವಿಶ್ರಾಂತಿ ಬಳಿಕ ಮತ್ತೆ ಬಂಡೆಯೇರುವ ಸಾಹಸ ಮುಂದುವರಿಸಿದ್ದಾರೆ.

    ರಾಕ್ ಕ್ಲೈಂಬಿಂಗ್ ಫೌಂಡೇಶನ್ ಸ್ಥಾಪಿಸುವ ಉದ್ದೇಶ ಹೊಂದಿರುವ ಜ್ಯೋತಿರಾಜು, ನಾಡಿನೆಲ್ಲೆಡೆ ತಿರುಗಿ ಸಾಹಸ ಮಾಡುವ ಗುರಿ ಹೊಂದಿದ್ದಾರೆ. ಜ್ಯೋತಿರಾಜ್ ಮುಂದಿನವಾರ ಮಂಗಳೂರಿನ ಅತೀ ಎತ್ತರದ ಕಟ್ಟಡ ಏರಲು ಯೋಜನೆ ರೂಪಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts