More

    ವಿವಾಹಿತ ಪ್ರಿಯಕರನನ್ನು ಭೇಟಿಯಾಗಲು 2200 ಕಿ.ಮೀ. ಪ್ರಯಾಣಿಸಿದ ಮಹಿಳೆ..

    ಅನುಪಗಢ: ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಮಹಿಳೆಯೊಬ್ಬರು ತನ್ನ ಪ್ರೇಮಿಯನ್ನು ಭೇಟಿಯಾಗಲು ರಾಜಸ್ಥಾನದ ಅನುಪಗಢಕ್ಕೆ ಬಂದಿರುವ ವಿಚಿತ್ರ ಘಟನೆ ನಡೆದಿದೆ.

    ಇದನ್ನೂ ಓದಿ: ಆಟವಾಡುತ್ತಿದ್ದ ವೇಳೆ ಆಯಸ್ಕಾಂತವನ್ನು ನುಂಗಿದ ಬಾಲಕ: ಮುಂದೆ ನಡೆದಿದ್ದಿಷ್ಟು..

    ಢಾಕಾ ನಿವಾಸಿ ಉಮ್ಮೆ ಹಬೀಬಾ ಎಂದು ಗುರುತಿಸಲಾದ ಮಹಿಳೆಯೊಬ್ಬಳು ತಮ್ಮ ದೇಶದಿಂದ ರಾಜಸ್ತಾನದ ಅನುಪಗಢಕ್ಕೆ ರೋಷನ್ ಎಂಬಾತನನ್ನು ಬೇಟಿಯಾಗಲು ಬಂದಿದ್ದಾಳೆ. ಮಹಿಳೆ ತನ್ನ ಪ್ರಿಯಕರನನ್ನು ಭೇಟಿಯಾಗಲು ಸುಮಾರು 2200 ಕಿಲೋಮೀಟರ್ ಪ್ರಯಾಣಿಸಿದ್ದು, ಆರು ತಿಂಗಳ ಹಿಂದೆಯಷ್ಟೇ ಇವರಿಬ್ಬರೂ ಸೋಷಿಯಲ್ ಮೀಡಿಯಾ ಮುಖಾಂತರ ಮೂಲಕ ಸ್ನೇಹಿತರಾಗಿದ್ದರು.

    ಮಹಿಳೆ ಪ್ರವಾಸಿ ವೀಸಾದೊಂದಿಗೆ ಬಂದಿದ್ದು, ಸೆಪ್ಟೆಂಬರ್ 1ರಂದು ಢಾಕಾದಿಂದ ಹೊರಟು ಕೋಲ್ಕತ್ತಾ ತಲುಪಿದ್ದಾಳೆ ಎಂದು ರಾಜಸ್ಥಾನದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರವಾಸಿ ವೀಸಾದಲ್ಲಿ ಪ್ರಯಾಣಿಸುತ್ತಿದ್ದಾಗಿ ಮಹಿಳೆ ಹೇಳಿಕೊಂಡಿದ್ದು, ಸೆಪ್ಟೆಂಬರ್ 3ರಂದು ಆಕೆ ಹೌರಾ ಎಕ್ಸ್‌ಪ್ರೆಸ್ ಮೂಲಕ ಬಿಕಾನೇರ್ ತಲುಪಿ ಅಲ್ಲಿಂದ ಅನುಗಢ ಜಿಲ್ಲೆಯ ಡಾಲ್ ಗ್ರಾಮವನ್ನು ತಲುಪಿದ್ದಾಳೆ.

    ಇದನ್ನೂ ಓದಿ: ಫೇಸ್​​ಬುಕ್ ಮುಖಾಂತರ ಸ್ನೇಹ, ಪ್ರೀತಿ: ಮದುವೆಯಾದ ಮೂರು ತಿಂಗಳಲ್ಲೇ ಟ್ವಿಸ್ಟ್..

    ನಂತರ ಐಜಿಪಿ ಬಿಕನೇರ್ ಓಂ ಪ್ರಕಾಶ್ ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದು, ಈ ಬಗ್ಗೆ ಗುಪ್ತಚರ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ಸಂದೇಶವನ್ನು ರವಾನಿಸಲಾಗಿದೆ. ಆಕೆಯಿಂದ ಬಾಂಗ್ಲಾದೇಶದ 2000 ಕರೆನ್ಸಿ, ಪಾಸ್‌ಪೋರ್ಟ್, ಢಾಕಾದಿಂದ ಕೋಲ್ಕತ್ತಾಗೆ ರೈಲು ಟಿಕೆಟ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸ್ತುತ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts