More

    ಅಭ್ಯಾಸದ ವೇಳೆ ನೆಟ್ಸ್‌ನಲ್ಲಿ ಪಾಕ್ ಧ್ವಜ ಹಾರಾಟ, ಬಾಂಗ್ಲಾದೇಶ ಪ್ರವಾಸದಲ್ಲಿ ಕಿರಿಕ್

    ಢಾಕಾ: ಟಿ20 ವಿಶ್ವಕಪ್ ಬೆನ್ನಲ್ಲೇ ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ತಂಡ, ನ. 19ರಿಂದ 3 ಟಿ20 ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಈ ನಡುವೆ ಅಭ್ಯಾಸದ ವೇಳೆ ನೆಟ್ಸ್‌ನಲ್ಲಿ ಪಾಕ್ ರಾಷ್ಟ್ರಧ್ವಜ ಹಾರಿಸಿರುವ ಬಾಬರ್ ಅಜಮ್ ಪಡೆ, ಬಾಂಗ್ಲಾ ಜನರ ಕೆಂಗಣ್ಣಿಗೆ ಗುರಿಯಾಗಿದೆ.

    ಪಾಕ್ ತಂಡದೊಂದಿಗೆ ಆಡದೆ ಸರಣಿಯನ್ನೇ ರದ್ದುಗೊಳಿಸಬೇಕೆಂದೂ ಬಾಂಗ್ಲಾ ಕ್ರಿಕೆಟ್ ಪ್ರೇಮಿಗಳು ಒತ್ತಾಯಿಸುತ್ತಿದ್ದಾರೆ. ಆಟಗಾರರಿಗೆ ಪ್ರೇರಣೆ ತುಂಬುವುದಕ್ಕಾಗಿ ಪಾಕ್ ತಂಡದ ಕೋಚ್ ಸಕ್ಲೇನ್ ಮುಷ್ತಾಕ್, ನೆಟ್ಸ್‌ನಲ್ಲಿ ರಾಷ್ಟ್ರಧ್ವಜ ನೆಡುವ ಪದ್ಧತಿಯನ್ನು ಟಿ20 ವಿಶ್ವಕಪ್ ವೇಳೆ ಆರಂಭಿಸಿದ್ದರು. ಇದು ಈಗ ಬಾಂಗ್ಲಾದಲ್ಲೂ ಮುಂದುವರಿದಿದೆ.

    ಆದರೆ, ಬಾಂಗ್ಲಾ ಕ್ರಿಕೆಟ್ ಪ್ರೇಮಿಗಳು ಈ ನಡೆಗೆ ಆಕ್ಷೇಪ ಎತ್ತಿದ್ದು, ‘ಗೋಬ್ಯಾಕ್ ಪಾಕಿಸ್ತಾನ್’ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. ಪಾಕಿಸ್ತಾನ ವಿರುದ್ಧ ನಿಗದಿಯಾಗಿರುವ ಸರಣಿಯನ್ನು ಆಡಬಾರದು ಎಂದು ಇತ್ತೀಚೆಗಷ್ಟೇ 50ನೇ ಸ್ವಾತಂತ್ರ್ಯ ಸಂಭ್ರಮ ಆಚರಿಸಿದ್ದ ಬಾಂಗ್ಲಾದ ಜನತೆ ಆಗ್ರಹಿಸಿದ್ದಾರೆ.

    ಸೌರಾಷ್ಟ್ರ ಎದುರು ರೋಚಕ ಜಯ ದಾಖಲಿಸಿ ಸೆಮೀಸ್‌ಗೇರಿದ ಕರ್ನಾಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts