More

    ಸಹ-ಆಟಗಾರನ ಹಲ್ಲೆಗೆ ಯತ್ನಿಸಿ ಬೆಲೆತೆತ್ತ ಬಾಂಗ್ಲಾ ವಿಕೆಟ್ ಕೀಪರ್ ಮುಶ್ಫಿಕರ್ ರಹೀಂ

    ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮುಶ್ಫಿಕರ್ ರಹೀಂ ಕ್ಯಾಚ್ ಹಿಡಿಯುವ ವಿಷಯವಾಗಿ ಮೈದಾನದಲ್ಲೇ ಸಹ-ಆಟಗಾರನ ಮೇಲೆ ಹಲ್ಲೆಗೆ ಯತ್ನಿಸಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಬಂಗಬಂಧು ಟಿ20 ಕ್ರಿಕೆಟ್ ಟೂರ್ನಿಯ ಬೆಕ್ಸಿಮ್‌ಕೊ ಢಾಕಾ ಹಾಗೂ ಫಾರ್ಚೂನ್ ಬರಿಷಾಲ್ ನಡುವಿನ ಪಂದ್ಯದ ವೇಳೆ ಸ್ಲಿಪ್‌ನಲ್ಲಿ ನಿಂತಿದ್ದ ನಸುಮ್ ಅಹಮದ್‌ಗೆ ಹಲ್ಲೆಗೆ ಯತ್ನಿಸಿದ್ದರು. ಮುಶ್ಫಿಕರ್ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಬಳಿಕ ತನ್ನ ತಪ್ಪಿನಿಂದ ಅರಿತ ಮುಶ್ಫಿಕರ್, ಸಹ-ಆಟಗಾರನ ಕ್ಷಮೆಯಾಚಿಸಿ ಪ್ರಕರಣಕ್ಕೆ ಇತಿಶ್ರೀ ಹಾಡಲು ಯತ್ನಿಸಿದ್ದಾರೆ. ಜತೆಗೆ ಪಂದ್ಯದ ಸಂಭಾವನೆಯಲ್ಲಿ ಶೇಕಡ 25 ದಂಡ ವಿಧಿಸಲಾಗಿದೆ.

    ಕ್ಷಮಾಪಣೆ ಕುರಿತು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಮುಶ್ಪಿಕರ್ ರಹೀಂ, ‘ತಂಡದ ಸಹ-ಆಟಗಾರ ನಸುಮ್ ಅಹಮದ್ ಅವರ ಬಳಿ ಕ್ಷಮೆ ಕೇಳಿರುವೆ. ಇಂಥ ಘಟನೆಯನ್ನು ಮರೆತು ಕ್ಷಮಿಸಿ. ಇಂಥ ಘಟನೆ ಮರುಕಳಿಸಬಾರದು. ಭವಿಷ್ಯದಲ್ಲಿ ಇಂಥ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವೆ ಎಂದು’ ಎಂದು ರಹೀಂ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

    ವಿವಾದದಿಂದ ಎಚ್ಚೆತ್ತುಗೊಂಡ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮುಶ್ಫಿಕರ್ ರಹೀಂಗೆ ಪಂದ್ಯದ ಸಂಭಾವನೆಯಲ್ಲಿ ಶೇಕಡ 20 ದಂಡ ವಿಧಿಸಿದೆ.

    https://www.instagram.com/p/CIzde1Np7jH/?utm_source=ig_web_copy_link

    ಕಡೇ ಎರಡೂ ಟೆಸ್ಟ್ ಪಂದ್ಯವಾಡಲು ಆಸ್ಟ್ರೇಲಿಯಾಗೆ ತೆರಳಿದ ರೋಹಿತ್ ಶರ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts