More

    ಬೆಂಗಳೂರಿನಲ್ಲಿ ಮಾಸ್ಕ್‌ ಹಾಕದವರಿಗೆ ಬಿದ್ದದ್ದು ಒಂದು ಕೋಟಿ ರೂಪಾಯಿ ದಂಡ!

    ಬೆಂಗಳೂರು: ಕರೊನಾ ಬಿಕ್ಕಟ್ಟಿನ ಈ ಸಮಯದಲ್ಲಿ ಮಾಸ್ಕ್‌ ಹಾಕುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ ಸರ್ಕಾರದ ಆದೇಶಗಳಿಗೆ ಕಿಮ್ಮತ್ತೇ ಇಲ್ಲದಂತೆ ಕೆಲವರು ವರ್ತಿಸುತ್ತಿರುವ ಹಿನ್ನೆಲೆಯಲ್ಲಿ ವೈರಸ್‌ ಈ ಪ್ರಮಾಣದಲ್ಲಿ ವ್ಯಾಪಕವಾಗಿ ಹರಡುತ್ತಿದೆ.

    ತಾವೂ ಮಾಸ್ಕ್‌ ಧರಿಸದೇ ಇನ್ನೊಬ್ಬರಿಗೆ ಕರೊನಾ ವೈರಸ್‌ ಹರಡುವಲ್ಲಿ ಅನೇಕ ಮಂದಿ ದೊಡ್ಡ ಪಾತ್ರವನ್ನೇ ವಹಿಸಿದ್ದಾರೆ.

    ಇದನ್ನೂ ಓದಿ: ಜಪ್ಪಯ್ಯ ಎಂದ್ರೂ ಮಾಸ್ಕ್‌ ಧರಿಸಲು ಒಪ್ಪದ ಟ್ರಂಪ್‌ ಹೀಗೆ ಕಾಣಿಸಿಕೊಂಡದ್ದೇಕೆ?

    ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಮಾಸ್ಕ್‌ ಕಡ್ಡಾಯ, ಸಾಮಾಜಿಕ ಅಂತರ ಕಡ್ಡಾಯ ಎಂದು ಪೊಲೀಸ್‌ ಇಲಾಖೆ ಎಷ್ಟು ಬಾರಿ ಹೇಳಿದರೂ ಕೇಳದವರನ್ನು ಹಿಡಿದು ಇದೀಗ ಭಾರಿ ದಂಡವನ್ನು ಪೊಲೀಸರು ಹಾಕುತ್ತಿದ್ದಾರೆ.

    ಕಳೆದ ಒಂದೇ ಒಂದು ತಿಂಗಳಿನಲ್ಲಿ ಈ ನಿಯಮ ಉಲ್ಲಂಘನೆ ಮಾಡಿದವರಿಗೆ ಬಿದ್ದ ದಂಡ ಎಷ್ಟು ಗೊತ್ತಾ? ಬರೋಬರಿ 1 ಕೋಟಿ ಒಂದು ಸಾವಿರ ರೂಪಾಯಿ! ಹೌದು. ಮಾಸ್ಕ್‌ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿರುವ 50 ಸಾವಿರದ 706 ಮಂದಿಗೆ ಬಿಬಿಎಂಪಿ ಮಾರ್ಷಲ್‌ಗಳು ದಂಡ ವಿಧಿಸಿದ್ದು ಇದರ ಮೊತ್ತ 1.01ಕೋಟಿ ರೂಪಾಯಿಗಳಾಗಿವೆ.

    ಒಬ್ಬೊಬ್ಬರಿಂದ 200 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದಿದ್ದಾರೆ ಅಧಿಕಾರಿಗಳು. ಇದರ ಜತೆಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿಯಮ ಉಲ್ಲಂಘಿಸಿರುವವರ ಹಾಗೂ ಕಸ ವಿಂಗಡನೆ ಮಾಡದೇ ರುವ 149 ಅಂಗಡಿಗಳಿಗೆ ಬೀಗ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

    ಭೂಮಿಯೊಳಗಿನಿಂದ ಭಯಾನಕ ವಿಚಿತ್ರ ಶಬ್ದ: ವಿಡಿಯೋ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts