More

    ಕರೊನಾ ಹೊತ್ತಲ್ಲಿ ಜರ್ಮನಿಗೆ ಹೋಗಿ ಬಂತು ಕನ್ನಡದ ಈ ಸೈಲೆಂಟ್ ಕಿರುಚಿತ್ರ!

     

    ಬೆಂಗಳೂರು: ಲಾಕ್​ಡೌನ್​ ಹಿನ್ನೆಲೆಯಲ್ಲಿ ಲಾಕ್​ಡೌನ್​ ಪರಿಕಲ್ಪನೆಯನ್ನೇ ಆಧರಿಸಿ ಸಾಕಷ್ಟು ಕಿರುಚಿತ್ರಗಳು, ಹಾಡುಗಳು, ಜಾಗೃತಿ ಸಂದೇಶ ಸಾರುವ ಸಾಕಷ್ಟು ವಿಡಿಯೋಗಳು ಜಾಲತಾಣಗಳಲ್ಲಿ, ಯೂಟ್ಯೂಬ್​ ಚಾನೆಲ್​ಗಳಲ್ಲಿ ಅಪ್​ಲೋಡ್​ ಆಗಿದ್ದವು. ಅದೇ ರೀತಿ ಬೆಂಗಳೂರಿನ ಯುವ ನಿರ್ದೇಶಕ ಆದಿತ್ಯ ಸದಾಶಿವ, ‘ಬ್ಲಾಕ್​’ ಹೆಸರಿನ ಕಿರುಚಿತ್ರ ನಿರ್ಮಾಣ ಮಾಡಿದ್ದರು. ಇದೀಗ ಅದೇ ಕಿರುಚಿತ್ರ ಜರ್ಮನಿಯಲ್ಲಿ ಪ್ರದರ್ಶನ ಕಂಡು, ಮೆಚ್ಚುಗೆ ಪಡೆದುಕೊಂಡಿದೆ. ಈ ಕುರಿತು ‘ವಿಜಯವಾಣಿ’ ಜತೆಗೆ ಖುಷಿ ಹಂಚಿಕೊಂಡಿದ್ದಾರೆ ಆದಿತ್ಯ.
    ಅಚ್ಚರಿ ವಿಚಾರ ಏನೆಂದರೆ, ನಿರ್ದೇಶಕ ಆದಿತ್ಯ ಕಿರುಚಿತ್ರೋತ್ಸವಕ್ಕೆ ಕಳಿಸಲೆಂದೇ ಈ ಶಾರ್ಟ್​ ಫಿಲಂ ಮಾಡಿರಲಿಲ್ಲ. ಕೊನೇ ಕ್ಷಣದಲ್ಲಿ ತಮ್ಮ ಆಪ್ತವಲಯದಿಂದ ಹೀಗೊಂದು ಕಿರುಚಿತ್ರೋತ್ಸವ ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅದರ ಬಗ್ಗೆ ಮಾಹಿತಿ ತಿಳಿದುಕೊಂಡು ಅಪ್ಲೈ ಮಾಡಿದ್ದರು. ಕೊನೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಅವರ ಕಿರುಚಿತ್ರಕ್ಕೆ ಸಿಕ್ಕಿದೆ. 

    ಇದನ್ನೂ ಓದಿ: ಸದ್ಯ ಬಾಲಿವುಡ್​ನಲ್ಲಿ ಯಾರೂ ಮಾಡದ ಸಾಹಸಕ್ಕೆ ಕೈ ಹಾಕಿದ ಸಲ್ಮಾನ್​ ಖಾನ್​!

    ‘ಜರ್ಮನಿಯಲ್ಲಿ ‘ಕರೊನಾ ಶಾರ್ಟ್​ ಫಿಲಂಸ್​ ಫೆಸ್ಟಿವಲ್​’ ಹೆಸರಿನ ಕಿರು ಸಿನಿಮೋತ್ಸವ ಆಯೋಜಿಸಲಾಗಿತ್ತು. ಲಾಕ್​ಡೌನ್​ ಹೊತ್ತಿನಲ್ಲಿಯೇ ಮಾಡಿದ ಕಿರುಚಿತ್ರ ಅದಾಗಿರಬೇಕಿತ್ತು. ಕೊನೆಗೆ ಆನ್​ಲೈನ್ ಮೂಲಕವೇ ಕಿರುಚಿತ್ರ ಕಳುಹಿಸಿದ್ದೆ. ವಿಶ್ವದಾದ್ಯಂತ ಒಟ್ಟು 1250ಕ್ಕೂ ಅಧಿಕ ಕಿರುಚಿತ್ರಗಳು ಸ್ಪರ್ಧೆಯಲ್ಲಿದ್ದವು. ಅಂತಿಮವಾಗಿ 36 ಕಿರುಚಿತ್ರಗಳನ್ನು ತೀರ್ಪುಗಾರರ ಸುತ್ತಿಗೆ ಆಯ್ಕೆ ಮಾಡಲಾಯಿತು. ಇಡೀ ಭಾರತದಿಂದ ಕೇವಲ ಎರಡೇ ಸಿನಿಮಾಗಳು ಸೆಲೆಕ್ಟ್​ ಆಗಿದ್ದವು. ಅದರಲ್ಲಿ ನನ್ನ ನಿರ್ದೇಶನದ ‘ಬ್ಲಾಕ್​’ ಸಹ ಆಯ್ಕೆಯಾಗಿದ್ದು ಖುಷಿ ನೀಡಿತು’ ಎನ್ನುತ್ತಾರೆ ಆದಿತ್ಯ.

    ಇದನ್ನೂ ಓದಿ: ಕ್ಯೂನಲ್ಲಿ ಶ್ರೇಯಸ್; ಈ ಚಿತ್ರಕ್ಕೂ ನಾಗಶೇಖರ್ ನಿರ್ದೇಶನ

    ಒಟ್ಟು 14 ನಿಮಿಷದ ಈ ಕಿರುಚಿತ್ರದಲ್ಲಿ ಯಾವ ಕಲಾವಿದರೂ ಇಲ್ಲ, ಶೂಟಿಂಗ್​ಗೆ ಬೇಕಾದ ಸಲಕರಣೆಗಳನ್ನೂ ಬಳಸಲಾಗಿಲ್ಲ. ನಿರ್ದೇಶಕ ಆದಿತ್ಯ ತಮ್ಮ ಬಳಿ ಇರುವ ಕ್ಯಾಮರಾದಿಂದ ವಾಸವಿರುವ ಪ್ಲ್ಯಾಟ್​ನಿಂದಲೇ ಎಲ್ಲ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಹೇಗಿದ್ದ ಜಗತ್ತು ಹೇಗಾಯ್ತು ಎಂಬುದನ್ನು‘ಬ್ಲಾಕ್​’ ಸಿನಿಮಾದಲ್ಲಿ ಹೇಳಲಾಗಿದೆ. ಇಡೀ ಚಿತ್ರ ಕಪ್ಪು ಬಿಳುಪಿನಲ್ಲಿಯೇ ಮೂಡಿಬಂದಿದೆ.

    ಸಿನಿಮಾ ರಿಲೀಸ್​ ಮಾಡೋಕೆ ರೆಡಿಯಾಗಿ!; ಚಿತ್ರ ಪ್ರದರ್ಶನಕ್ಕೆ ಕೇಂದ್ರದಿಂದ ಸಿಕ್ತು ಗ್ರೀನ್​ ಸಿಗ್ನಲ್!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts