More

    ರಾಜಕಾರಣಕ್ಕಾಗಿ ಧರ್ಮ ಒಡೆಯುವುದು ಸಲ್ಲ

    ಬಾಗಲಕೋಟೆ: ರಾಜಕೀಯ ಕಾರಣಕ್ಕೆ ಧರ್ಮ ಒಡೆಯುವ ಕೆಲಸ ಸಲ್ಲ. ರಾಜಕೀಯಗೋಸ್ಕರ ಮಾಡಿದರು ತೀವ್ರ ಪೆಟ್ಟು ತಿಂದಿದ್ದಾರೆ. ವೀರಶೈವ ಲಿಂಗಾಯರು, ಗುರು ವೀರಕ್ತರು ಒಂದೇ. ಎಲ್ಲ ಒಳ ಸಮಾಜವನ್ನು ಒಬಿಸಿ ಪಟ್ಟಿಗೆ ಸೇರಿಸಲು ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
    ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಬಾಗಲಕೋಟೆ ತಾಲೂಕಾ ಘಟಕದಿಂದ ಹಮಿಕೊಂಡಿದ್ದ ಬಣಜಿಗ ಸಮಾಜದ ಪ್ರತಿಭಾ ಪುರಸ್ಕಾರ-ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ವೀರಶೈವ ಲಿಂಗಾಯರು, ಗುರು ವೀರಕ್ತರು ಪ್ರತ್ಯೇಕವಲ್ಲ. ಎಲ್ಲರು ಒಂದೇ. ಸಮಾಜ ಒಡೆಯುವ ಕೆಲಸಕ್ಕೆ ಯಾರು ಮುಂದಾಗಬಾರದು. ಸಮಾಜದ ಸಂಘಟನೆ ಬೆಳೆದಾಗ ಒಗಟ್ಟು ಹೆಚ್ಚಾಗುತ್ತದೆ. ಸಮಾಜದ ಅಧ್ಯಕ್ಷ, ಪದಾಽಕಾರಿ ಸ್ಥಾನಕ್ಕೆ ಭಿನ್ನಮತ, ಒಡಕು ಬೇಡ. ಸಮಾಜಮುಖಿ ಕೆಲಸಗಳನ್ನು ಮಾಡಬೇಕು. ದೂರ ದೃಷ್ಟಿ ಇಟ್ಟುಕೊಂಡು ಸಮಾಜದ ಸೇವೆ ಮಾಡಬೇಕು ಎಂದರು.
    ಬಣಜಿಗ ಸಮಾಜ ಅನೇಕ ಜನರು ಸಾಧನೆ ಮಾಡಿದ್ದಾರೆ. ಎಸ್.ನಿಜಲಿಂಗಪ್ಪ, ಜಿ.ಎಚ್.ಪಟೇಲ, ಬಿ.ಎಸ್.ಯಡಿಯೂರಪ್ಪ ನಮಗೆ ಮಾದರಿ. ಶಂಕರ ಬಿದರಿ ಐಪಿಎಸ್ ಅಽಕಾರಿಯಾಗಿ ವೀರಪ್ಪಣ್ಣ ಇತಿಹಾಸ ಕೊನೆಗಾಣಿಸಿದರು. ಸಮಾಜದ ಪ್ರತಿಭಾವಂತರು ದೊಡ್ಡ ದೊಡ್ಡ ಹುದ್ದೆ ಅಲಂಕರಿಸಬೇಕು. ಸಮಾಜದಲ್ಲಿ ಆರ್ಥಿಕವಾಗಿ ಬಡವರು ಇದ್ದಾರೆ. ಅವರನ್ನು ಗುರುತಿಸಿ ಕ್ರಿಯಾ ಶೀಲರಾಗಿ ಅವರ ನೆರವಿಗೆ ನಿಲ್ಲಬೇಕು. ಶಿಕ್ಷಣ, ಉದ್ಯೋಗ, ಉದ್ಯಮಕ್ಕೆ ಸಹಾಯ ಮಾಡಬೇಕು ಎಂದು ಹೇಳಿದರು.
    ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಮಾತು ಆಡುವದಕ್ಕಿಂತ ಕೆಲಸ ಮಾಡುವುದು ಮುಖ್ಯ. ಅದರಂತೆ ನಾನು ನಡೆದುಕೊಂಡಿದ್ದೇನೆ. ಬಣಜಿಗ ಸಮಾಜದೊಂದಿಗೆ ಅನ್ಯೂನ್ಯ ಸಂಬಂಧವಿದೆ. ನನ್ನ ತಮ್ಮ ಸಮಾಜದವರು ಅಂತ ಭಾವಿಸಿದ್ದಾರೆ. ನಾನು ಅವರೊಂದಿಗೆ ಬೇರೆಯುವುದು ಜಾಸ್ತಿ ಎಂದ ಅವರು, ಎಲ್ಲ ಸಮಾಜದಲ್ಲಿ ಶೇ.೫, ಶೇ.೧೦ ಜನ ಕೆಟ್ಟವರು ಇರುತ್ತಾರೆ. ಕೆಟ್ಟ ಕಾಳುಗಳನ್ನು ಹೊರಗಿಟ್ಟು ಒಳ್ಳೆಯ ಕೆಲಸ ಮಾಡಲು ಮುಂದಾಗಬೇಕು. ನವನಗರದಲ್ಲಿ ಸಮಾಜಕ್ಕೆ ನಿವೇಶನ ನೀಡಲು ಪ್ರಯತ್ನಿಸಲಾಗುವುದು ಎಂದರು.
    ರಾಜ್ಯದಲ್ಲಿ ದೇವರಾಜ ಅರಸು ಮುಖ್ಯಮಂತ್ರಿ ಇದ್ದಾಗ ಹಾವನೂರ ಆಯೋಗ ಅನ್ವಯ ಮೀಸಲಾತಿ ನೀಡಲಾಯಿತು. ವೀರಶೈವ-ಲಿಂಗಾಯತ ಸಮಾಜದ ಅನೇಕ ಪಂಗಡಗಳಿಗೆ ಮೀಸಲಾತಿ ಸಿಕ್ಕಿತು. ಕೆಲವು ಪಂಗಡಗಳಿಗೆ ದೊರೆಯಲಿಲ್ಲ. ಇದರಿಂದ ಸಂಘಟನೆಗಳು ರೂಪುಗೊಂಡು ಧ್ವನಿ ಎತ್ತಿವೆ. ದೇವೇಗೌಡರು ಪ್ರಧಾನ ಮಂತ್ರಿ ಇದ್ದಾಗ ತಮ್ಮ ಸಮಾಜದ ಎಲ್ಲ ಒಳ ಪಂಗಡಗಳಿಗೆ ಒಬಿಸಿ ಮೀಸಲಾತಿ ಕಲ್ಪಿಸಿದರು. ಇದೇ ರೀತಿ ಸಮಸ್ತ ವೀರಶೈವ-ಲಿಂಗಾಯತ ಸಮಾಜಕ್ಕೆ ಮೀಸಲಾತಿ ಕಲ್ಪಿಸಬೇಕು. ಇದರಲ್ಲಿ ಯಾರು ಬೇರೆ ಅಲ್ಲ. ಎಲ್ಲರು ಒಂದೇ. ಮೀಸಲಾತಿ ವಿಷಯದಲ್ಲಿ ರಾಜ್ಯದ ನಾಯಕರು ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿದರು.
    ಸ್ವಾಗತ ಸಮಿತಿ ಅಧ್ಯಕ್ಷ ಆನಂದ ಜಿಗಜಿನ್ನಿ ಮಾತನಾಡಿ, ಸಮಾಜ ಸೇವೆಯಲ್ಲಿ ಬಣಜಿಗ ಸಮಾಜದ ಮುಂಚೂಣಿಯಲ್ಲಿದೆ. ಸಮಾಜದ ಪ್ರತಿಭಾವಂತರು, ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ನವನಗರದಲ್ಲಿ ಸಮಾಜಕ್ಕೆ ಒಂದು ನಿವೇಶನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

    ಗುಳೇದಗುಡ್ಡದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ಅಂದಪ್ಪ ಜವಳಿ, ಜಿಲ್ಲಾಧ್ಯಕ್ಷ ಶರಣಪ್ಪ ಗುಳೇದ, ಮುಖಂಡರಾದ ಮಲ್ಲಪ್ಪಣ್ಣ ಆರಬ್ಬಿ, ವಿಶ್ವನಾಥ ವೈಜಾಪುರ, ಮುತ್ತು ಜೋಳದ, ಮುರುಗೇಶ ಶಿವನಗುತ್ತಿ, ರವಿ ಕುಮಟಗಿ, ಬಸವರಾಜ ಹಂಚಲಿ ಸೇರಿದಂತೆ ಇತರರು ಇದ್ದರು.

    ಬಾಕ್ಸ್..
    ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಎಲ್ಲ ಸಮಾಜದಲ್ಲಿ ಕೆಟ್ಟವರು ಇರುತ್ತಾರೆ. ಒಳ್ಳೆಯವರು ಇರುತ್ತಾರೆ. ಆದರೆ ಸಮಾಜದಲ್ಲಿ ನಾವು ಯಾವುದು ಸ್ವೀಕರಿಸಬೇಕು ಎಂಬುದನ್ನು ವಿವೇಚನೆ ನಮ್ಮಲ್ಲಿ ಇರಬೇಕು. ಬಣಜಿಗ ಸಮಾಜದಲ್ಲಿ ಪ್ರತಿಭಾವಂತ ಮಕ್ಕಳು ಇz್ದÁರೆ. ಸರ್ಕಾರದ ಉನ್ನತ ಹುದ್ದೆ ಅಲಂಕರಿಸಬೇಕು. ಉದ್ಯೋಗಿ ಆಗುವದಕ್ಕಿಂತ ಉದ್ಯಮಿಯಾಗಬೇಕು. ಬ್ರಾಹ್ಮಣ ಸಮಾಜದವರು ಶೇ.೨ ರಷ್ಟು ಇದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಸಾಧಕ, ಮುಂದುವರೆದ ಸಮಾಜವನ್ನು ಅನುಕರಣೆ ಮಾಡಬೇಕು. ಆಗ ಸಮಾಜದ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ತಿಳಿಸಿದರು.

    ಸಮಸ್ತ ವೀರಶೈವ ಲಿಂಗಾಯತ ಸಮಾಜ ಒಂದೇ. ಇದರಲ್ಲಿ ಭೇದ ಭಾವ ಸಲ್ಲ. ಎಲ್ಲ ಒಳಪಂಗಡಗಳನ್ನು ೨ ಎ ಮೀಸಲಾತಿಗೆ ಸೇರಬೇಕು ಎನ್ನುವುದು ನಮ್ಮ ಬಯಕೆ. ಕೋರ್ಟು ಕಚೇರಿ, ಜಗಳವಿಲ್ಲದೆ ಸಮಾಜದ ಇದೇ ಅಂದ್ರೇ ಅದು ಬಣಜಿಗ ಸಮಾಜದವರು. ಪ್ರತಿಭಾವಂತರು ಉದ್ಯಮ ಸ್ಥಾಪಿಸಲು ಮುಂದಾಗಬೇಕು. ಸರ್ಕಾರದಿಂದ ಶೇ.೫೦ ಸಬ್ಸಿಡಿ ಇದೆ. ಶೇ.೫೦ ಸಾಲ ದೊರೆಯುತ್ತದೆ. ನಿರಾಣಿ ಸಮೂಹವು ಒಂದು ಸಕ್ಕರೆ, ಇಥಿನಾಲ್ ಉತ್ಪಾದನೆಯಲ್ಲಿ ಗಣೀಯ ಸಾಧನೆ ಮಾಡಿದೆ. ಇದೇ ರೀತಿ ಬಣಜಿಗ ಸಮಾಜದವರು ಉದ್ಯಮ ಸ್ಥಾಪಿಸಲು ಮುಂದಾಗಬೇಕು ಎಂದು ಹೇಳಿದರು.

    ಬಾಕ್ಸ..

    ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಚಂದ್ರಶೇಖರ ಜಿಗಜಿನ್ನಿ, ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ವಿಜ್ಞಾನಿ ಸಿದ್ದಪ್ಪ ಅಂಗಡಿ ಸೇರಿದಂತೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.

    ಬಾಕ್ಸ್..
    ವಿಜಯಾನಂದ ಚಿತ್ರ ವೀಕ್ಷಣೆಗೆ ವಿನಂತಿ…

    ನಾಡಿನ ಖ್ಯಾತ ಉದ್ಯಮಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೆರ್ಮೇನ್ ಡಾ.ವಿಜಯ ಸಂಕೇಶ್ವರ ಜೀವನ ಆಧಾರಿತ ವಿಜಯಾನಂದ ಚಿತ್ರವನ್ನು ಪ್ರತಿಯೊಬ್ಬರು ನೋಡಬೇಕು. ವಿಶೇಷವಾಗಿ ಮಕ್ಕಳಿಗೆ ಅವರ ಸಾಧನೆ ಪರಿಚಯಿಸಿ ಸ್ಪೋರ್ತಿ ತುಂಬಬೇಕು. ಕುಟುಂಬ ಸಮೇತರಾಗಿ ನೋಡುವ ಚಿತ್ರವಾಗಿದ್ದು, ಸಮಾಜ ಬಾಂಧವರು ಚಿತ್ರ ವೀಕ್ಷಣೆ ಮಾಡಬೇಕು ಎಂದು ಕಾರ್ಯಕ್ರಮ ಸಂಘಟಕರು ಸಭೆಯಲ್ಲಿ ವಿನಂತಿ ಮಾಡಿದರು.

    ಕೋಟ್…
    ಬಣಜಿಗ ಸಮಾಜವು ಯಾರಿಗೂ ನೋವು ನೀಡಿಲ್ಲ. ಎಲ್ಲರಿಗೂ ಸಿಹಿ ಉಣಬಡಿಸುತ್ತಾ ಬಂದಿದ್ದಾರೆ. ಆರೋಪ, ವಿಷಕಾರುವ ಕೆಲಸ ಮಾಡಿಲ್ಲ. ಬಹಳ ಸಹನಶೀಲತೆ, ತಾಳ್ಮೆ ಹೊಂದಿದೆ. ಮಠ, ಮಾನ್ಯಗಳಿಗೆ ಆಶ್ರಯ ನೀಡಿದೆ. ಇತರ ಸಮಾಜಕ್ಕೆ ಮಾದರಿಯಾಗಿದೆ.

    • ವಿ.ಪ ಸದಸ್ಯ ಪಿ.ಎಚ್.ಪೂಜಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts