More

    256 ಬಾಲ್ಯ ವಿವಾಹ ಪ್ರಕರಣ : ಜಿಲ್ಲೆಯಲ್ಲಿ 30 ಕೇಸ್ ದಾಖಲು ಸದ್ದಿಲ್ಲದೇ ನಡೆದು ಹೋಗುತ್ತಿವೆ ಹಲವು ಮದುವೆಜಿಲ್ಲೆಯಲ್ಲಿ 30 ಕೇಸ್ ದಾಖಲು ಸದ್ದಿಲ್ಲದೇ ನಡೆದು ಹೋಗುತ್ತಿವೆ ಹಲವು ಮದುವೆಜಿಲ್ಲೆಯಲ್ಲಿ 30 ಕೇಸ್ ದಾಖಲು ಸದ್ದಿಲ್ಲದೇ ನಡೆದು ಹೋಗುತ್ತಿವೆ ಹಲವು ಮದುವೆಜಿಲ್ಲೆಯಲ್ಲಿ 30 ಕೇಸ್ ದಾಖಲು ಸದ್ದಿಲ್ಲದೇ ನಡೆದು ಹೋಗುತ್ತಿವೆ ಹಲವು ಮದುವೆಜಿಲ್ಲೆಯಲ್ಲಿ 30 ಕೇಸ್ ದಾಖಲು ಸದ್ದಿಲ್ಲದೇ ನಡೆದು ಹೋಗುತ್ತಿವೆ ಹಲವು ಮದುವೆ

    ರಾಮನಗರ : ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎನ್ನುವ ವಿಚಾರಗೊತ್ತಿದ್ದರೂ ಕಳೆದ ಮೂರು ವರ್ಷಗಳಲ್ಲಿ 256 ಬಾಲ್ಯ ವಿವಾಹ ನಡೆಸಲು ಮುಂದಾದ ಪ್ರಕರಣಗಳು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಜಿಲ್ಲೆಯಲ್ಲಿ 2019-20 ರಿಂದ 2021-22ನೇ ಸಾಲಿನ ಜುಲೈ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 256 ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ 226 ಮದುವೆಗಳನ್ನು ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ನಡೆದೇ ಹೋದ 30 ಬಾಲ್ಯ ವಿವಾಹ ಪ್ರಕರಣಗಳಲ್ಲಿ ಮಕ್ಕಳ ಪಾಲಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
    ವರವಾದ ಲಾಕ್‌ಡೌನ್ : ಕರೊನಾ ಹಿನ್ನೆಲೆಯಲ್ಲಿ ಸರ್ಕಾರ ಅದ್ದೂರಿ ಮದುವೆಗಳಿಗೆ ಬ್ರೇಕ್ ಹಾಕಿದೆ. ಆದರೆ ಇದೇ ಬಾಲ್ಯ ವಿವಾಹಗಳಿಗೆ ಹೆಚ್ಚಿನ ಅವಕಾಶ ಮಾಡಿಕೊಟ್ಟಿದ್ದು, ಎಲ್ಲವೂ ಅತಿ ಸರಳವಾಗಿ ನಡೆಯುವ ಜತೆಗೆ ಸದ್ದಿಲ್ಲದೆ ಅಪ್ತಾಪ್ತರ ಮದುವೆಗಳು ನಡೆಯುತ್ತಿದ್ದವು. ಅದೆಷ್ಟೋ ಮದುವೆಗಳು ಬೆಳಕಿಗೆ
    ಬಾರದೆ ಉಳಿದು ಬಿಡುತ್ತಿವೆ.

    ಮದುವೆ ನಂತರ ಮಾಹಿತಿ : ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ 30 ಬಾಲ್ಯ ವಿವಾಹಗಳು ನಡೆದಿವೆ. ಇವುಗಳಲ್ಲಿ ಬಹುತೇಕ ಪ್ರಕರಣಗಳಲ್ಲಿ ಮದುವೆ ನಂತರವೇ ಸಹಾಯವಾಣಿಗೆ ಕರೆಗಳು ಬರುತ್ತಿದ್ದು, ಇದನ್ನು ಪರಿಶೀಲನೆ ನಡೆಸಿದ ನಂತರವಷ್ಟೇ ಅಪ್ರಾಪ್ತರಿಗೆ ಮದುವೆ ಆಗಿರುವುದು ಬೆಳಕಿಗೆ ಬರುತ್ತಿದೆ. ಬಹುತೇಕ ಮದುವೆಗಳು ದೇವಾಲಯದ ಅಂಗಳ, ಇಲ್ಲವೇ ಮನೆಯಂಗಳದಲ್ಲಿ ನಡೆಯುತ್ತಿವೆ.
    ಗುಟ್ಟು ಗೊತ್ತಾಗುತ್ತಿಲ್ಲ: ಬಹುತೇಕ ಮದುವೆಗಳು ಗುಟ್ಟಾಗಿಯೇ ನಡೆದಿರುವುದು ಅಧಿಕಾರಿಗಳ ಚಿಂತೆಯನ್ನು ಹೆಚ್ಚುವಂತೆ ಮಾಡಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಬಹುತೇಕ ಸರಳವಾಗಿಯೇ ನಡೆದಿರುವುದರಿಂದ, ಆಹ್ವಾನ ಪತ್ರಿಕೆ ಸೇರಿ ಯಾವುದೇ ಸಾಕ್ಷ್ಯಗಳು ಲಭ್ಯವಾಗುತ್ತಿಲ್ಲ. ಅಲ್ಲದೆ, ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ಮದುವೆ ಆದರೆ ಸಾಕ್ಷ್ಯಗಳು ಲಭ್ಯವಾಗುತ್ತಿದ್ದವು. ಒಂದು ವೇಳೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದರೂ ಜನರು ಮದುವೆ ನಡೆದೇ ಇಲ್ಲ ಎನ್ನುವಂತೆ ಸಿಬ್ಬಂದಿ ಮೇಲೆ ವಾಗ್ಯುದ್ಧ ನಡೆಸಿದ ಪ್ರಸಂಗಗಳು ಕಂಡುಂದಿವೆ. ಇದರ ಹೊರತಾಗಿಯೂ ಮದುವೆ ನಡೆದಿರುವುದಕ್ಕೆ ಸಾಕ್ಷ್ಯಗಳು ಸಿಕ್ಕರೆ ಖಂಡಿತವಾಗಿ ಪ್ರಕರಣ ದಾಖಲು ಮಾಡಲಾಗುತ್ತಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. ಮತ್ತೊಂದು ನೆಮ್ಮದಿಯ ಸಂಗತಿ ಎಂದರೆ ಅಧಿಕಾರಿಗಳು 226 ಬಾಲ್ಯ ವಿವಾಹಗಳನ್ನು ತಡೆದಿದ್ದಾರೆ. ಇಲ್ಲವಾದರೆ ಆಟ ಪಾಠಗಳ ಮೂಲಕ ಬೆಳವಣಿಗೆ ಕಾಣಬೇಕಿದ್ದ ಮಕ್ಕಳು, ಸಂಸಾರ ಬಂಧನದಲ್ಲಿ ಸಿಲುಕಿ ಬದುಕು ಕಳೆದುಕೊಳ್ಳಬೇಕಿತ್ತು.

     

    ಸುಳ್ಳು ಮಾಹಿತಿ: ಮತ್ತೊಂದೆಡೆ ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸವೂ ಸಾರ್ವಜನಿಕರಿಂದ ಆಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ಬಂದ ಕರೆಗಳಲ್ಲಿ ಹಲವಾರು ಕರೆಗಳು ಹುಸಿ ಕರೆಯಾಗಿವೆ. ಮಾಹಿತಿ ಬರುತ್ತಿದ್ದಂತೆ ಅಧಿಕಾರಿಗಳ ಪೊಲಿಸರೊಂದಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರೆ ಅಲ್ಲಿ ಮದುವೆ ನಡೆಯದೇ ಇರುವುದು ಕಂಡು ಬಂದಿದೆ. ಇದರ ಜತೆಗೆ, ಮದುವೆ ಆಗಿದ್ದರೂ ಪ್ರಾಪ್ತ ವಯಸ್ಸಿಗೆ ಮದುವೆ ಮಾಡಿರುವುದು ಸಹ ಕಂಡು
    ಬಂದಿದೆ ಎನ್ನುತ್ತಿದ್ದಾರೆ ಅಧಿಕಾರಿಗಳು.

    ಪಾಲಕರೇ ಹುಷಾರ್ : ಮದುವೆ ಮಾಡಿಬಿಟ್ಟರೆ ನಮ್ಮ ಜವಾಬ್ದಾರಿ ಮುಗಿಯಿತು. ಇಲ್ಲ ಒಳ್ಳೆಯ ಕಡೆ ಸಂಬಂಧ ಬಂದಿದೆ ಅಥವಾ ಇನ್ನಾವುದೋ ಒತ್ತಡಕ್ಕೆ ಮಣಿದು 18 ವರ್ಷ ಮೀರದ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದು ಅಪರಾಧವಾಗಿದ್ದು, ಇದಕ್ಕೆ ಪಾಲಕರು ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ತಮ್ಮ ಮಕ್ಕಳ ಬಾಳನ್ನು ಹಾಳು ಮಾಡುವ ಜತೆಗೆ, ತಮ್ಮ ಜೀವನವನ್ನು ಕಳೆದುಕೊಳ್ಳಬೇಡಿ.

    ಇಲಾಖೆ ಸಾಧ್ಯವಾದಷ್ಟು ಮಟ್ಟಿಗೆ ಬಾಲ್ಯ ವಿವಾಹವನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಇದರ ಹೊರತಾಗಿಯೂ ಕಳೆದ 3 ವರ್ಷಗಳಲ್ಲಿ 30 ಮದುವೆಗಳು ನಡೆದಿದ್ದು, ಈ ಸಂಬಂಧ ಪ್ರಕರಣಗಳು ದಾಖಲಾಗಿದೆ. ಬಾಲ್ಯ ವಿವಾಹದ ಬಗ್ಗೆ ಸಾಕಷ್ಟು ಅರಿವು ಮೂಡಿಸುವ ಕಾರ್ಯಕ್ರಮವೂ ನಡೆಯುತ್ತಿದೆ. ಸಾರ್ವಜನಿಕರು ಎಚ್ಚೆತ್ತು ಅನಿಷ್ಟ ಪದ್ಧತಿ ತಡೆಯಲು ಇಲಾಖೆಗೆ
    ಸಹಕಾರ ನೀಡಬೇಕಿದೆ.
    ಸಿ.ವಿ.ರಾಮನ್ ಉಪನಿರ್ದೇಶಕ (ಪ್ರಭಾರ), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts