More

    ಬಳ್ಳಾರಿ ವಿಮ್ಸ್‌ನಲ್ಲಿ ಕರೊನಾ ಪರೀಕ್ಷೆ ಲ್ಯಾಬ್ ಆರಂಭ, ಸಚಿವ ಶ್ರೀರಾಮುಲು ಚಾಲನೆ

    ಬಳ್ಳಾರಿ: ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಕರೊನಾ ಸೋಂಕು ಪರೀಕ್ಷಾ ಪ್ರಯೋಗಾಲಯ ಆರಂಭವಾಗಿದೆ. ಒಂದು ದಿನಕ್ಕೆ 110 ಮಾದರಿಗಳನ್ನು ಈ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಬಹುದಾಗಿದೆ. ಆರೋಗ್ಯ ಸಚಿವ ಬಿ.ಶ್ರೀರಾಮುಲು ಸೋಮವಾರ ನೂತನ ಪ್ರಯೋಗಾಲಯಕ್ಕೆ ಚಾಲನೆ ನೀಡಿದರು.

    ಜಿಲ್ಲೆಯ ಕರೊನಾ ಶಂಕಿತರ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಇದುವರೆಗೆ ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಇದರಿಂದಾಗಿ ಪರೀಕ್ಷಾ ವರದಿ ಬರುವುದು ವಿಳಂಬವಾಗುತ್ತಿತ್ತು. ಇದೀಗ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ ಕೆಲವೇ ಗಂಟೆಗಳಲ್ಲಿ ವರದಿ ಬರಲಿದೆ. ಇದರಿಂದಾಗಿ ಸೋಂಕಿತರಿಗೆ ತಕ್ಷಣಕ್ಕೆ ಚಿಕಿತ್ಸೆ ಆರಂಭಿಸುವುದರ ಜತೆಗೆ ಇತರ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ.

    ಈ ಪ್ರಯೋಗಾಲಯದಿಂದ ಕೊಪ್ಪಳ, ರಾಯಚೂರು ಸೇರಿದಂತೆ ಇತರ ಜಿಲ್ಲೆಗಳಿಗೂ ಅನುಕೂಲವಾಗಲಿದೆ. ಎರಡು ಯಂತ್ರಗಳ ಮೂಲಕ ಕರೊನಾ ತಪಾಸಣೆ ಪರೀಕ್ಷೆ ನಡೆಯಲಿದೆ. ಒಂದು ಯಂತ್ರದಲ್ಲಿ ಏಕಕಾಲಕ್ಕೆ 15 ಮಾದರಿ ಪರೀಕ್ಷಿಸಬಹುದಾಗಿದೆ. ಜಿಲ್ಲಾಡಳಿತದ ವಿಪತ್ತು ಪರಿಹಾರ ನಿಧಿಯಡಿ ಖರೀದಿಸಿರುವ 16.5 ಲಕ್ಷ ರೂ. ವೆಚ್ಚದ ಎರಡನೇ ಯಂತ್ರದಲ್ಲಿ 45 ಮಾದರಿಗಳನ್ನು ಪರೀಕ್ಷಿಸಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts