More

    ಬಾಲಬ್ರೂಯಿ ಆವರಣದಲ್ಲಿ ಶಾಸಕರ ಕ್ಲಬ್‌ಗೆ ಸಿಎಂ ಶಂಕುಸ್ಥಾಪನೆ

    ಬೆಂಗಳೂರು:
    ಪಾರಂಪರಿಕವಾದ ಬಾಲಬ್ರೂಯಿ ಕಟ್ಟಡವನ್ನು ಉಳಿಸಿಕೊಂಡು ಶಾಸಕರ ಕ್ಲಬ್ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
    ಕರ್ನಾಟಕ ವಿಧಾನ ಮಂಡಳ ಸಂಸ್ಥೆಯ ಉದ್ಘಾಟನೆ ಮತ್ತು ಬಾಲಬ್ರೂಯಿ ಕಟ್ಟಡವನ್ನು ಪಾರಂಪರಿಕ ವಿನ್ಯಾಸಕ್ಕೆ ಒಳಪಟ್ಟು ನವೀಕರಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ನಮ್ಮ ಶಾಸಕರುಗಳ ಬಹು ವರ್ಷದ ಬೇಡಿಕೆಗೆ ಸ್ಪಂದಿಸಲಾಗಿದೆ ಎಂದರು.
    ಬೆಂಗಳೂರಿನ ಕ್ಲಬ್ ಒಂದಕ್ಕೆ ನಾನು, ಬಿ.ಆರ್.ಪಾಟೀಲ್, ಉಗ್ರಪ್ಪ, ಕೋದಂಡರಾಮಯ್ಯ ಜೊತೆಯಲ್ಲಿ ಹೋಗಿದ್ದೆ. ನಾನು ಪಂಚೆ ಹುಟ್ಟಿದ್ದೇನೆ ಎನ್ನುವ ಕಾರಣಕ್ಕೆ ಒಳಗೆ ಬಿಡಲಿಲ್ಲ. ಇಂಥ ಕಹಿ ಅನುಭವಗಳ ಹಿನ್ನೆಲೆಯಲ್ಲಿ ಶಾಸಕರಿಗೂ ಒಂದು ಕ್ಲಬ್ ಇರಬೇಕು ಅನ್ನಿಸಿತ್ತು. ಅದು ಇಂದು ಕೈಗೂಡಿದೆ ಎಂದು ಹೇಳಿದರು.
    ಗಾಂಧಿ ಅರೆ ಬಟ್ಟೆ ಹುಟ್ಟು ಚಳವಳಿ ನಡೆಸಿದರು. ಬ್ರಿಟೀಷ್ ಆಡಳಿತದಲ್ಲಿಯೂ ಗಾಂಧೀಜಿಗೆ ಗೌರವಯುತವಾಗಿ ನಡೆಸಿಕೊಳ್ಳಲಾಗಿತ್ತು. ಕೇರಳ ಮತ್ತು ತಮಿಳುನಾಡಿನಲ್ಲಿ ಶಾಸಕರು, ಸಚಿವರು ಸೇರಿದಂತೆ ಬಹುಪಾಲು ಜನರು ಪಂಚೆ ಧರಿಸುತ್ತಾರೆ. ಡ್ರೆಸ್ ಕೋಡ್ ಅವರವರ ಇಷ್ಟ. ಹೀಗೆ ಇರಬೇಕು ಎಂದು ಕಡ್ಡಾಯ ಮಾಡುವುದು ಸರಿಯಲ್ಲ ಎಂದರು.
    ಸರ್ಕಾರದ ವಶದಲ್ಲಿದ್ದ ಈ ಅತಿಥಿಗೃಹವನ್ನು ವಿಧಾನ ಮಂಡಳ ಸಂಸ್ಥೆಗೆ ವರ್ಗಾವಣೆ ಮಾಡಲಾಗಿದೆ. ಶಾಸಕರುಗಳು, ಮಾಜಿ ಶಾಸಕರು, ಸಂಸದರು ಈ ಕ್ಲಬ್ ಬಳಸಿಕೊಳ್ಳಲು, ರಿಲ್ಯಾಕ್ಸ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಿದೆ. ಶಾಸಕರುಗಳಿಗೆ ತಮ್ಮದೇ ಆದ ಕ್ಲಬ್ ಎನ್ನುವ ಗೌರವ ದಕ್ಕಲಿದೆ. ನಾನೂ ಬಿಡುವಾದಾಗ ಒಮ್ಮೊಮ್ಮೆ ಈ ಕ್ಲಬ್ ಬರಲಿದ್ದೇನೆ ಎಂದು ಹೇಳಿದರು.
    ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪರಿಷತ್ ಸೇವೆ 300 ಶಾಸಕರಿಗೆ ತಮ್ಮದೇ ಆದ ಕ್ಲಬ್ ಇರಲಿಲ್ಲ. ಇದಕ್ಕಾಗಿ ದಶಕದಿಂದಲೂ ಸತತ ಪ್ರಯತ್ನ ನಡೆದಿದ್ದರೂ ಲಪ್ರಧವಾಗಿರಲಿಲ್ಲ. ಈಗ ಆ ಕನಸು ನನಸಾಗಿದೆ ಎಂದರು.
    ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಪಾರಂಪರಿಕ ಕಟ್ಟಡಕ್ಕೆ ಯಾವುದೇ ದಕ್ಕೆ ಬಾರದ ರೀತಿಯಲ್ಲಿ ಇದನ್ನು ಮೂಲ ಸೌಕರ್ಯ ನೀಡಿ ಅಭಿವೃದ್ಧಿ ಮಾಡಲಾಗುವುದು ಎಂದರು.
    ಐಎಎಸ್, ಕೆಎಸ್ ಅಧಿಕಾರಿಗಳಿಗೂ ಕ್ಲಬ್ ಇದೆ. ಪ್ರಕರ್ತರಿಗೂ ಪ್ರೆಸ್ ಕ್ಲಬ್ ಇದೆ. ಅದೇ ರೀತಿ ಶಾಸಕರಿಗೂ ಒಂದು ಕ್ಲಬ್ ಬೇಕು ಎನ್ನುವ ಬೇಡಿಕ ಇತ್ತು. ನಾನಾ ಕಾರಣಕ್ಕಾಗಿ ಅದು ನನೆಗುದಿಗೆ ಬಿದ್ದಿತ್ತು. ಸಿಎಂ ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ದರಿಂದ ಈಗ ಕ್ಲಬ್‌ಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದೇವೆ ಎಂದರು.
    ಸಚಿವ ಕೆ.ಜೆ.ಜಾರ್ಜ್, ವಿಧಾನಸಭೆ ಉಪನಾಯಕ ಅರವಿಂದ ಬೆಲ್ಲದ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯ ಸಚೇತಕ ಅಶೋಕ್ ಪಠಾಣ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ವಿಧಾನ ಮಂಡಳ ಸಂಸ್ಥೆಯ ಹಂಪನಗೌಡ ಬಾದರ್ಲಿ, ಮಹಾಂತೇಶ ಕೌಜಲಗಿ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts