More

    ಲಯನ್ಸ್ ಕ್ಲಬ್‌ನ 47ನೇ ವಾರ್ಷಿಕೋತ್ಸವ; ಜಿಲ್ಲಾ ಗವರ್ನರ್ ಭೇಟಿ

    ರಾಣೆಬೆನ್ನೂರ: ಇಲ್ಲಿಯ ಲಯನ್ಸ್ ಕ್ಲಬ್‌ನ 47ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಮಾರಂಭ ಇತ್ತೀಚೆಗೆ ನಗರದ ಲಯನ್ಸ್ ಶಾಲೆಯಲ್ಲಿ ಜರುಗಿತು.
    ಕ್ಲಬ್‌ನ ಜಿಲ್ಲಾ ಗವರ್ನರ್ ಜೋಸ್ ಪ್ರಾನ್ಸಿಸ್ಕೋ ಅರ್ಲಿ ಬ್ರೈಟೋ ಸಮಾರಂಭ ಉದ್ಘಾಟಿಸಿದರು. ಕ್ಲಬ್‌ನ ತಾಲೂಕು ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಆರೋಗ್ಯ ತಪಾಸಣೆ ನಡೆಸಿದ ಡಾ. ಶಿವಾನಂದ ಹಿತ್ತಲಮನಿ ಅವರನ್ನು ಸನ್ಮಾನಿಸಲಾಯಿತು.
    ಸ್ನೇಹಾ ಬೇಲಾಳ, ದಾನೇಶ್ವರಿ ಸೂರಣಗಿ ಭರತನಾಟ್ಯ ಪ್ರದರ್ಶಿಸಿದರು. ಪ್ರೀತಮ ಸಾವಕ್ಕನವರ ಸಂಗೀತ ವಾದ್ಯ ಪ್ರಸ್ತುತ ಪಡಿಸಿದರು.
    ಪ್ರಮುಖರಾದ ಟಿ. ವೀರಣ್ಣ, ಎಂ.ಎಸ್. ಅರಕೇರಿ, ಕಿರಣಕುಮಾರ ಅಂತರವಳ್ಳಿ, ಗುತ್ತೆಪ್ಪ ಹಳೇಮನಿ, ಕೆ.ವೈ. ಬಾಜಿರಾಯ, ಮಹೇಶ ಅಡಿವೆಪ್ಪನವರ, ನಾಗರಾಜ ಕುಲಕರ್ಣಿ, ಬಿ.ಎನ್. ಪಾಟೀಲ, ಟಿ.ಸಿ. ಪಾಟೀಲ, ಜಯಣ್ಣ ಮುಚಡಿ, ಅಶೋಕ ಹೊಟ್ಟಿಗೌಡ್ರ, ಬಸವರಾಜ ಬಡಿಗೇರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts