More

    ಫೆ. ೧೫ ರಿಂದ ೧೭ ವರೆಗೆ ಬಳಗಾನೂರಿನ ಮೌನಯೋಗಿ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ೨೯ ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ

    ಗದಗ:  ಮೌನಯೋಗಿ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ೨೯ ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಇದೇ ಫೆ. ೧೫ ರಿಂದ ೧೭ ರ ವರೆಗೆ ಜರುಗಲಿದೆ. ಇದೇ ಫೆ. ೧೬ ರಂದು ಸಂಜೆ ೫ ಗಂಟೆಗೆ  ಮಹಾರಥೋತ್ಸವ ಜರುಗುವುದು ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಮಹಾತ್ಮರ ಜೀವನ ದರ್ಶನ ಪ್ರವಚನ, ಲಘು ರಥೋತ್ಸವ, ಸಾಮೂಹಿಕ ವಿವಾಹಗಳು, ಸುಮಂಗಲೆಯರಿಗೆ ಉಡಿ ತುಂಬುವುದು, ಜಾನಪದ ಕಲಾಮೇಳ, ತುಲಾಭಾರ, ಧಾರ್ಮಿಕ ಚಿಂತನಗೋಷ್ಟಿ ಹಾಗೂ ಶರಣಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು. 

    ಷಟಸ್ಥಲ ಧ್ವಜಾರೋಹಣ: ಇದೇ ಫೆ. ೧೫ ರಂದು  ಬೆಳಿಗ್ಗೆ ೮ ಗಂಟೆಗೆ ಇಟಗಿಯ ಮೇಲು ಗದ್ದುಗೆ ಹಿರೇಮಠದ ಷ.ಬ್ರ..ಡಾ ಗುರುಶಾಂತೇಶ್ವರ  ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹಿರೇವಡ್ಡಟ್ಟಿ ಹಿರೇಮಠದ ಷ.ಬ್ರ. ವಿರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ.  ಸಂಜೆ ೫ ಗಂಟೆಗೆ ಪ್ರಕಾಶ ಜಗದೀಶಪ್ಪ ಹುಗ್ಗಿ  ಹಾಗೂ ಶರಣರ ಬಳಗ ರೋಣ ಅವರ ಮಹಾಮನೆಯಿಂದ ರಥದ ಕಳಸ ಆಗಮಿಸುವುದು. ಸಂಜೆ ೬ ಗಂಟೆಗೆ ಲಘು ರಥೋತ್ಸವ ಜರಗುವುದು. 

    ಮಹಾತ್ಮರ ಜೀವನ ದರ್ಶನ ಪ್ರವಚನ ಮಂಗಲೋತ್ಸವ: ಸಂಜೆ ೭ ಗಂಟೆಗೆ ಮಹಾತ್ಮರ ಜೀವನ ದರ್ಶನ ಪ್ರವಚನ ಮಂಗಲೋತ್ಸವ ಜರಗುವುದು. ಮುಂಡರಗಿಯ ಅನ್ನದಾನೇಶ್ವರ ಸಂಸ್ಥಾನಮಠದ ಪೂಜ್ಯಶ್ರೀ ಜ. ನಾಡೋಜ ಡಾ. ಅನ್ನದಾನ ಮಹಾಶಿವಯೋಗಿಗಳು ಪಾವನ ಸಾನಿಧ್ಯವಹಿಸುವರು. ಹೂವಿನಹಡಗಲಿ ಗವಿಮಠದ ಪೂಜ್ಯಶ್ರೀ ಡಾ. ಹಿರಿಯ ಶಾಂತವೀರ ಮಹಾಸ್ವಾಮಿಗಳು, ಅಣ್ಣಿಗೇರಿ ದಾಸೋಹಮಠದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಖಜ್ಜಿಡೋಣಿಯ ಕೃಷ್ಣಾನಂದ ಶಾಸ್ತಿçಗಳು ಸಮ್ಮುಖ ವಹಿಸುವರು. ಚುರ್ಚಿಹಾಳ ಹಿರೇಮಠದ ವೇ. ಮೂ. ಪುಟ್ಟರಾಜ ಶಾಸ್ತಿçಗಳು ಪ್ರವಚನದ ಮಂಗಲದ ನುಡಿ ಆಡುವರು. ಕಲಬುರಗಿಯ ಸಂಗಮೇಶ ಎಸ್.ನೀಲಾ ಅವರು  ಸಂಗೀತ ನೀಡುವರು ಹಾಗೂ ಕುಷ್ಟಗಿಯ ಪ್ರತಾಪಕುಮಾರ ಹಿರೇಮಠ ತಬಲಾ ಸಾಥ್ ನೀಡುವರು. ನಂತರ ದಾನಿಗಳಿಂದ ಪೂಜ್ಯರಿಗೆ ತುಲಾಭಾರದ ಭಕ್ತಿಸೇವೆ ಜರುಗಲಿದೆ.  

    ಫೆ. ೧೬ ರಂದು ಬೆಳಿಗ್ಗೆ ೫ ಗಂಟೆಗೆ  ಶ್ರೀ ಚನ್ನವೀರ ಶರಣರ ಕತೃ ಗದ್ದುಗೆಗೆ  ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಲಿಂಗದೀಕ್ಷೆ-ಅಯ್ಯಾಚಾರ ಜರಗುವುದು. ಈ ಕಾರ್ಯಕ್ರಮದಲ್ಲಿ ಮೈನಳ್ಳಿ ಹಾಗೂ ಬಿಕನಳ್ಳಿ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷೆತೆ ವಹಿಸುವರು. ಹುಬ್ಬಳ್ಳಿಯ ಚಿ.ಚ. ಶರಣರ ಅಂಧರ ಕಲ್ಯಾಣಾಶ್ರಮದ ವೇ. ಮೂ.ಬಸಯ್ಯಶಾಸ್ತಿçಗಳು ಕಲ್ಯಾಣಮಠ, ಅಮರಾಪೂರದ ಚನ್ನವೀರ ಶಾಸ್ತಿçಗಳು  ಹಾಗೂ ಶ್ರೀಮಠದ ವೈದಿಕ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೈದಿಕ ಕಾರ್ಯಕ್ರಮಗಳು ಜರುಗುವವು. 

    ಶ್ರೀ ಚನ್ನವೀರ ಶರಣರ ೨೯ ನೇ ಪುಣ್ಯಸ್ಮರಣೋತ್ಸವ ಹಾಗೂ ಸಾಮೂಹಿಕ ವಿವಾಹ ಕಲ್ಯಾಣ ಮಹೋತ್ಸವ: ಬೆಳಿಗ್ಗೆ ೧೦.೩೦ ಗಂಟೆಗೆ  ಶ್ರೀ ಚನ್ನವೀರ ಶರಣರ ೨೯ ನೇ ಪುಣ್ಯಸ್ಮರಣೋತ್ಸವ ಹಾಗೂ ಸಾಮೂಹಿಕ ವಿವಾಹ ಕಲ್ಯಾಣ ಮಹೋತ್ಸವ ಜರಗುವುದು. ಈ ಕಾರ್ಯಕ್ರಮದಲ್ಲಿ ಶಿರಹಟ್ಟಿ-ಬಾಲೇಹೊಸೂರ ಸಂಸ್ಥಾನಮಠದ ಪೂಜ್ಯಶ್ರೀ ಜ.ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹಾಗೂ ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಪೂಜ್ಯಶ್ರೀ ಜ. ಅಭಿನವ ಬೂದೀಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸುವರು. ಕುಂದಗೋಳ ಕಲ್ಯಾಣಮಠದ ಪೂಜ್ಯಶ್ರೀ ಅಭಿನವ ಬಸವಣ್ಣನವರು, ಗದುಗಿನ ವಿರೇಶ್ವರ ಪುಣ್ಯಾಶ್ರಮದ ಪೂಜ್ಯಶ್ರೀ ಡಾ.ಕಲ್ಲಯ್ಯಜ್ಜನವರು, ಚಿಕ್ಕಮಲ್ಲಿಗವಾಡ ಶ್ರೀಆಶ್ರಮದ ಎ.ಪಿ.ಪಾಟೀಲ ಗುರೂಜಿ ಅವರುಗಳು ಸಮ್ಮುಖ ವಹಿಸುವರು.

    ಬೆಂಗಳೂರಿನ ಮಹೇಶಕುಮಾರ ಹೇರೂರ ಹಾಗೂ ಸಂಗಡಿಗರಿAದ ಸಂಗೀತ ಕಾರ್ಯಕ್ರಮ ಜರುಗಲಿದೆ  ನಂತರ ಸಂಜೆ ೪ ಗಂಟೆಗೆ ಬಳಗಾನೂರಿನ ಶರಣರ ಬಳಗ ಹಾಗೂ  ಡಾ. ಶಿವಕುಮಾರಯ್ಯ ಹಿರೇಮಠ ಅವರ ಮಹಾಮನೆಯಿಂದ ರಥದ ಹಗ್ಗವನ್ನು ತರಲಾಗುವುದು. 

    ಸಂಜೆ ೬ ಗಂಟೆಗೆ ಧಾರ್ಮಿಕ ಚಿಂತನಾಗೋಷ್ಠಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ  ಕೊಪ್ಪಳ ಗವಿಮಠ ಸಂಸ್ಥಾನದ ಪೂಜ್ಯಶ್ರೀ ಜ. ಗವಿಸಿದ್ದೇಶ್ವರ ಮಹಾಸ್ವಾಮಿಗಳು ಪಾವನ ಸಾನಿಧ್ಯವಹಿಸುವರು. ಶೇಗುಣಸಿ ವಿರಕ್ತಮಠದ ಪೂಜ್ಯಶ್ರೀ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಉಪದೇಶಾಮೃತ ನೀಡುವರು. ಹೆಬ್ಬಾಳ ಬ್ರಹನ್ಮಠದ ಪೂಜ್ಯಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಅಣದೂರ ನೀಲಕಂಠೇಶ್ವರ ಮಠದ ಪೂಜ್ಯಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಗುಡದೂರಿನ ಪೂಜ್ಯಶ್ರೀ ನೀಲಕಂಠ ತಾತನವರು ಸಮ್ಮುಖ ವಹಿಸುವರು. ಬೆಂಗಳೂರಿನ ಮಹೇಶಕುಮಾರ ಹೇರೂರ ಹಾಗೂ ಸಂಗಡಿಗರಿAದ  ಸಂಗೀತ ಕಾರ್ಯಕ್ರಮ ಜರಗುವುದು.   ನಗರಸಭೆ ಮಾಜಿ ಅಧ್ಯಕ್ಷ ಪೀರಸಾಬ ಕೌತಾಳ ಇವರ ಸುಪುತ್ರಿ ದಿಯಾ ಕೌತಾಳ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ಜರುಗುವುದು. 

    ಫೆ. ೧೭ ರಂದು ಸಂಜೆ ೫ ಗಂಟೆಗೆ ಕಡುಬಿನ ಕಾಳಗ ಹಾಗೂ ಶ್ರೀ ಶರಣರ ಬೆಳ್ಳಿಮೂರ್ತಿ ಉತ್ಸವ ಜರಗುವುದು. ಸುಕ್ಷೇತ್ರ  ಬಳಗಾನೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಚನ್ನವೀರ ಶರಣರ ಬೆಳ್ಳಿಮೂರ್ತಿ ಉತ್ಸವ ಜರಗುವುದು ನಂತರ ಶ್ರೀಮಠದಲ್ಲಿ ಕಡುಬಿನ ಕಾಳಗ ನಡೆಯಲಿದೆ. ಸಂಜೆ ೫.೩೦ ಗಂಟೆಗೆ  ಶಿರಗುಪ್ಪಿಯ ಸ್ವಾಮಿ ವಿವೇಕಾನಂದ ಯೋಗ ಮತ್ತು ಮಲ್ಲಕಂಬ ತರಬೇತಿ ಕೇಂದ್ರ ಇವರಿಂದ ಮಲ್ಲಕಂಬ ಪ್ರದರ್ಶನ ಜರಗುವುದು ಹಾಗೂ ಇವರಿಗೆ ಶರಣಶ್ರೀ ಪ್ರಶಸ್ತಿ ನೀಡಲಾಗುವುದು

    ಸಂಜೆ ೬.೩೦ ಗಂಟೆಗೆ ಬೆಂಗಳೂರಿನ ಶ್ರೀಮತಿ ಸುಧಾ ಬರಗೂರ ಅವರಿಂದ ಹಾಸ್ಯ ಸಂಜೆ ಜರುಗುವುದು. ನಂತರ  ಕೊಪ್ಪಳದ ಗಾಯಕಿ ಶ್ರೀಮತಿ  ಗಂಗಮ್ಮ ಅವರು ಸಂಗೀತ ಸುಧೆ ಕಾರ್ಯಕ್ರಮ ನೀಡಲಿದ್ದಾರೆ. ರಾತ್ರಿ ೯ ಗಂಟೆಗೆ ಸಿಡಿಮದ್ದು ಸುಡುವ ಆಕರ್ಷಣಿಯ ಕಾರ್ಯಕ್ರಮ ಜರುಗಲಿದೆ.  ಈ ಎಲ್ಲ ಪವಿತ್ರ ಕಾರ್ಯಕ್ರಮಗಳಲ್ಲಿ ನಾಡಿನ ಸಮಸ್ತ ಭಕ್ತರು ಭಾಗವಹಿಸಿ ತನು-ಮನ-ಧನದಿಂದ ಸೇವೆ ಸಲ್ಲಿಸಿ  ಶ್ರೀ ಶರಣರ ಕೃಪೆಗೆ ಪಾತ್ರರಾಗಬೇಕೆಂದು  ಬಳಗಾನೂರಿನ ಪೂಜ್ಯಶ್ರೀ ಶಿವಶಾಂತವೀರ ಶರಣರು ಹೇಳಿದರು. 

    ಈ ಪತ್ರಿಕಾಗೋಷ್ಠಿಯಲ್ಲಿ  ಎ.ಎನ್. ನಾಗರಳ್ಳಿ, ವಿ.ಬಿ.ಪೋಲೀಸಪಾಟೀಲ, ಎಂ.ಬಿ. ಸಿಕ್ಕೇದೇಸಾಯಿ, ವಿ.ಎಸ್. ಹಿರೇಮಠ, ಎಸ್.ಬಿ.ಪಾಟೀಲ,ಮಹದೇವಪ್ಪ ಗೌರಿಪುರ,ಎಸ್.ಎಸ್.ಪಾಟೀಲ  ಶಿವಲಿಂಗಶಾಸ್ತ್ರಿ ಹಿರೇಮಠ ಸಿದ್ದಾಪೂರ, ಶಶಿಧರ ಗೂಳರಡ್ಡಿ, ಬಿ.ವೈ. ಡೊಳ್ಳಿನ,ವಿಶ್ವನಾಥ ಕಮ್ಮಾರ,  ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts