More

    ಬಜೆ ಡ್ಯಾಮಲ್ಲಿದೆ ಸಮೃದ್ಧ ನೀರು

    ಉಡುಪಿ: ದಶಕದ ಬಳಿಕ ರಾಜ್ಯಾದ್ಯಂತ ಸುರಿಯುತ್ತಿರುವ ಬೇಸಿಗೆ ಮಳೆಯಿಂದಾಗಿ ಘಟ್ಟಪ್ರದೇಶದಿಂದ ಬಜೆ ಅಣೆಕಟ್ಟೆಗೆ ನೀರಿನ ಹರಿವು ಹೆಚ್ಚಳವಾಗಿದ್ದು, 15 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಮೇ ತಿಂಗಳಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹವಾಗಿದೆ.
    ಪ್ರತೀ ವರ್ಷ ಮಾರ್ಚ್ ಮೊದಲ ವಾರದಲ್ಲೇ ಬಜೆ ಅಣೆಕಟ್ಟೆಯಲ್ಲಿ ನೀರು ಬರಿದಾಗಿ ಏಪ್ರಿಲ್ ಎರಡನೇ ವಾರದ ಸುಮಾರಿಗೆ ಸ್ವರ್ಣಾ ನದಿಯಲ್ಲಿ ಪಂಪಿಂಗ್ ಕೆಲಸ ಪ್ರಾರಂಭಿಸಲಾಗುತ್ತಿತ್ತು. ಮೇ ಆರಂಭದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ನಗರಕ್ಕೆ ನೀರು ಪೂರೈಸುವ ಬಜೆ ಡ್ಯಾಂನಲ್ಲಿ 5.71 ಮೀಟರ್ ನೀರು ಸಂಗ್ರಹವಾಗಿದ್ದು, 1.5 ಮೀಟರ್ ಡೆಡ್ ಸ್ಟೋರೇಜ್ ಹೊರತು ಪಡಿಸಿದರೆ, 4.2 ಮೀಟರ್ ನೀರಿನಲ್ಲಿ ಇಡೀ ನಗರಕ್ಕೆ 70 ದಿನಗಳವರೆಗೆ ನಿರಂತರ ನೀರಿನ ಪೂರೈಕೆ ಮಾಡಬಹುದು. ಮುಂದಿನ ತಿಂಗಳು ಮುಂಗಾರು ಪ್ರವೇಶವಾದರೆ ಈ ಬಾರಿ ನಗರಕ್ಕೆ ನೀರಿನ ಸಮಸ್ಯೆ ಕಾಡುವುದಿಲ್ಲ.

    ನೀರಿನ ಬಳಕೆ ಹೆಚ್ಚಳ
    ನಗರದಲ್ಲಿ 12.500 ಮನೆಗಳು, ಮಣಿಪಾಲ ಕೈಗಾರಿಕಾ ವಲಯದಲ್ಲಿ 70ರಿಂದ 80 ಘಟಕಗಳು, 570 ಫ್ಲಾೃಟ್‌ಗಳು, ಸಾವಿರದಷ್ಟು ವಾಣಿಜ್ಯ ಸಂಸ್ಥೆಗಳು, 600 ಹೋಟೆಲ್ ಹಾಗೂ 40 ಲಾಡ್ಜ್‌ಗಳಿವೆ. ನಗರಪ್ರದೇಶದ ಶೇ 90 ರಷ್ಟು ವಾಣಿಜ್ಯ ಕಟ್ಟಡಗಳು ನಗರಸಭೆ ನೀರನ್ನೇ ಅವಲಂಭಿಸಿರುವುದರಿಂದ ಬೇಸಿಗೆಯಲ್ಲಿ ಹೋಟೆಲ್‌ಗಳಲ್ಲಿ ನೀರಿನ ಬಳಕೆ ಹೆಚ್ಚಾಗಿದೆ. ನಳ್ಳಿ ನೀರು ಸಂಪರ್ಕ 19,200ಕ್ಕೆ ಏರಿಕೆಯಾಗಿದೆ.

    4 ವರ್ಷದ ಅಂಕಿಸಂಖ್ಯೆ
    ಕಳೆದ 4 ವರ್ಷದಲ್ಲಿ ಮೇ ಮೊದಲವಾರ ಬಜೆ ಅಣೆಕಟ್ಟೆಯಲ್ಲಿ ಸಂಗ್ರಹವಿದ್ದ ನೀರಿನ ಪ್ರಮಾಣ ಈ ರೀತಿ ಇದೆ.
    2018ರಲ್ಲಿ 3.25 ಮೀ.
    2019ರಲ್ಲಿ 1.66 ಮೀ.
    2020ರಲ್ಲಿ 3.40 ಮೀ.

    ಬೇಸಿಗೆ ಮಳೆಯಿಂದಾಗಿ ಪ್ರಸ್ತುತ ಬಜೆ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರನ್ನು 70 ದಿನಗಳ ಕಾಲ ನಗರಕ್ಕೆ ನಿರಂತರ ಪೂರೈಕೆ ಮಾಡಬಹುದು. ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಬಜೆ, ಶಿರೂರಿನಲ್ಲಿ ಮರಳುಚೀಲ ಬಳಸಿ ನೀರನ್ನು ಸಂಗ್ರಹಿಸಿಡಲಾಗಿದೆ.
    -ಮೋಹನ್‌ರಾಜ್ ಎಎಇ ನಗರಸಭೆ ಉಡುಪಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts