More

    ವಿವಾಹ ಮಹೋತ್ಸವದ ದಿನ ಕೆರೆಗೆ ಬಾಗಿನ

    ವಿಜಯವಾಣಿ ಸುದ್ದಿಜಾಲ ಶ್ರೀನಿವಾಸಪುರ
    ಕೆಸಿ ವ್ಯಾಲಿ ನೀರು ಶ್ರೀನಿವಾಸಪುರ ತಾಲೂಕಿನ ಮುಳಳ್ಳಿ ಕೆರೆಗೆ ಹರಿದು ಕೋಡಿ ಹೋಗಿರುವುದರಿಂದ ಗ್ರಾಮಸ್ಥರ ಕೋರಿಕೆ ಮೇರೆಗೆ ಶಾಸಕ ಕೆ.ಆರ್.ರಮೇಶ್‌ಕುಮಾರ್ ಬುಧವಾರ ಮಧ್ಯಾಹ್ನ 3.30ಕ್ಕೆ ಪತ್ನಿ ಹಾಗೂ ಪುತ್ರನೊಂದಿಗೆ ಗಂಗಾಪೂಜೆ ನಡೆಸಿ ಬಾಗಿನ ಅರ್ಪಿಸಿದರು.
    ಆಪ್ತರ ಸಮ್ಮುಖದಲ್ಲಿ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿ, ಮುಳಳ್ಳಿ ನನ್ನ ತಾಯಿ ಮತ್ತು ಪತ್ನಿ ವಿಜಯಮ್ಮ ಅವರ ತವರೂರು, ಬುಧವಾರ ನಮ್ಮ ವಿವಾಹವಾದ ದಿನವೂ ಹೌದು. ಗ್ರಾಮದ ಕೆರೆ ಇಂದೇ ಕೋಡಿ ಹೋಗಿರುವುದು ಸಂತಸವನ್ನುಂಟು ಮಾಡಿದೆ. ಈ ಕೆರೆಯಲ್ಲಿ ಸದಾಕಾಲ ನೀರು ಹರಿಯುವಂತಾಗಬೇಕು ಎಂದು ಆಶಿಸಿದರು.
    ಕೆಸಿ ವ್ಯಾಲಿ ನೀರನ್ನು ಅಂತರ್ಜಲ ವೃದ್ಧಿಗಾಗಿ ಕೆರೆಗಳಿಗೆ ಹರಿಸಲಾಗುತ್ತಿದ್ದು, ರೈತರು ಕೃಷಿಗೆ ಕೆರೆ ನೀರು ಬಳಕೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು. ಮಳೆ ಆರಂಭವಾಗಿರುವುದರಿಂದ ನೀರಿನ ಸಮಸ್ಯೆ ಕೊಂಚಮಟ್ಟಿಗೆ ನಿವಾರಣೆ ಆಗಬಹುದು, ರೈತರು ನೀರಿಗಾಗಿ ಜಗಳ ಮಾಡದೆ ಅನ್ಯೂನ್ಯವಾಗಿರಬೇಕು ಎಂದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ, ಮುಳ್ಳುರು ಗ್ರಾಮದ ಮುಖಂಡರಾದ ಚಂದ್ರೇಗೌಡ, ನರಸಿಂಹರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವೇಲಗಲಬುರ‌್ರೆ ಶಶಿಧರ್, ತಾಪಂ ಸದಸ್ಯ ಪದ್ಮಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts