More

    ಸೌಲಭ್ಯ ಕಲ್ಪಿಸಲು ತಾರತಾಮ್ಯ ಸಲ್ಲ: ಶಾಸಕ ರಮೇಶ್‌ಕುಮಾರ್ ಹೇಳಿಕೆ, ಅಂಗನವಾಡಿ ಕಟ್ಟಡ ಕಾಮಗಾರಿಗೆ ಭೂಮಿಪೂಜೆ

    ರಾಯಲ್ಪಾಡು: ಸಾರ್ವಜನಿಕರ ಕೆಲಸ ದೇವರ ಕೆಲಸ ಎಂದು ಭಾವಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಹಳ್ಳಿಗಳ ಅಭಿವೃದ್ಧಿಯಲ್ಲಿ ಕುಂಠಿತವಾಗುವುದಿಲ್ಲ. ಅದೇ ರೀತಿಯಲ್ಲಿ ನೆಲವಂಕಿ ಗ್ರಾಪಂನಲ್ಲಿ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು.

    ನೆಲವಂಕಿ ಗ್ರಾಪಂ ವ್ಯಾಪ್ತಿಯ ಬೀಡಗಾನಹಳ್ಳಿಯಲ್ಲಿ 10 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರ ಕೊಟ್ಟಿರುವುದರಿಂದ ಅನುದಾನಗಳನ್ನು ಪ್ರಜೆಗಳ ಅಗತ್ಯತೆಗಳಿಗೆ ಬಳಸಬೇಕು. ಅದು ಬಿಟ್ಟು ಕೆಲವು ಜನ ಪ್ರತಿನಿಧಿಗಳು ಬಂದಿರುವ ಅನುದಾನಗಳಲ್ಲಿ ಪಾಲು ಕೇಳುತ್ತಾರೆಂಬ ದೂರುಗಳು ಬಂದಿವೆ. ಅದು ಯಾರಿಗೂ ಒಳಿತಲ್ಲ. ರಾಜಕೀಯ ಜೀವನದಲ್ಲಿ ಮತ ನೀಡಲಿ, ನೀಡದಿರಲಿ ಮೂಲಸೌಲಭ್ಯ ಒದಗಿಸುವುದರಲ್ಲಿ ತಾರತಾಮ್ಯ ಮಾಡಬಾರದು ಎಂದರು.

    ನಾನೆಂದು ಸುಳ್ಳಿನ, ದ್ವೇಷದ ರಾಜಕೀಯ ಮಾಡದವನಲ್ಲ. ಅದ್ದರಿಂದ ನಿರ್ಭಯವಾಗಿ ಚುನಾವಣೆಗಳನ್ನು ಎದುರುಸುತ್ತೇನೆ. ಅಹಂಕಾರ ಪಟ್ಟರೆ ಜನ ಮನ್ನಣೆ ಸಿಗುವುದಿಲ್ಲ ಎಂಬುದಕ್ಕೆ ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆ ಲಿತಾಂಶವೇ ಸಾಕ್ಷಿ. ಚುನಾವಣೆಯಲ್ಲಿ ಇತರ ಪಕ್ಷಗಳು ಹಂಚಿದ್ದ ಹಣ ಕೆಲಸ ಮಾಡಲಿಲ್ಲ, ಪ್ರಜಾಶಕ್ತಿಗೆ ಜಯವಾಯಿತು ಎಂದರು.

    ಸರ್ಕಾರದಿಂದ ವೈದ್ಯರಿಂದ ಹಿಡಿದು ಗ್ರಾಪಂನಲ್ಲಿ ಕೆಲಸ ಮಾಡುವ ಜಲಗಾರರವರೆಗೂ ನಿಗದಿತ ವೇಳೆಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಪ್ರಧಾನಿ ಮೋದಿ ಕಾಲಹರಣ ಮಾಡಿಕೊಂಡು ಇದುವರೆಗೂ ಬಡವರಿಗೆ ಸೂರು ಕೊಡದೆ ಕಾಶಿ ಮತ್ತು ಅಯೋಧ್ಯೆಯಲ್ಲಿ ಗುಡಿ ನಿರ್ಮಿಸಲು ಹೋಗುತ್ತಾರೆ. ಇದು ಬಡವರ ಹೊಟ್ಟೆ ತುಂಬಿಸುತ್ತಿದೆಯೇ ಎಂಬುದು ಪ್ರಜೆಗಳೆ ತೀರ್ಮಾನ ಮಾಡಲಿ ಎಂದು ಗುಡುಗಿದರು.

    ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳ ಜನಸಂಖ್ಯೆಗೆ ಅನುಗುಣವಾಗಿ ರಸ್ತೆ, ಚರಂಡಿ, ನೀರು, ಸ್ಮಶಾನ, ಸಮುದಾಯ ಭವನ ಸೇರಿ ಮೂಲಸೌಲಭ್ಯಗಳನ್ನು ಪಟ್ಟಿ ಮಾಡುವಂತೆ ಪಿಡಿಒ ಗೌಸ್‌ಸಾಬ್‌ಗೆ ಸೂಚಿಸಿದರು.

    ಇಒ ಎಸ್.ಆನಂದ್, ಗ್ರಾಪಂ ಅಧ್ಯಕ್ಷೆ ಗೌತಮಿ ಮುನಿರಾಜ್, ಉಪಾಧ್ಯಕ್ಷೆ ಮಮತಾ ಸೋಮಶೇಖರ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸಂದ್ರ ಶಿವಾರೆಡ್ಡಿ, ತಾಪಂ ಮಾಜಿ ಸದಸ್ಯ ಕೆ.ಕೆ.ಮಂಜು, ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮಮ್ಮ ಮುನಿಯಪ್ಪ, ಪ್ರಮೀಳಾ ಶಿವಣ್ಣ, ರಾಮಕೃಷ್ಣಪ್ಪ, ಬಟ್ಟುವಾರಿಪಲ್ಲಿ ಉಪೇಂದ್ರ, ರೆಡ್ಡಪ್ಪ, ನರೇಗಾ ಜೆಇ ಗೌತಮಿ, ಗ್ರಾಪಂ ಸದಸ್ಯರಾದ ಪಾತೂರು ಬಾಬುರೆಡ್ಡಿ, ಸಿ.ಎಂ.ರಮೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts