More

    ನಿವೃತ್ತ ಅಧಿಕಾರಿಯಿಂದ ತನಿಖೆ

    ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಪಟ್ಟಂತೆ ಈ ಹಿಂದಿನ ಆರು ವರ್ಷದಲ್ಲಿ ಹಕ್ಕು ಪತ್ರ ವಿತರಣೆಯಲ್ಲಿ ಸಾಕಷ್ಟು ನ್ಯೂನತೆ ಕಂಡು ಬಂದಿವೆ. ಹೀಗಾಗಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಐಎಎಸ್, ಕೆಎಎಸ್ ಅಧಿಕಾರಿಯಿಂದ ದಾಖಲಾತಿ ವಿಚಾರಣೆಗೊಳಿಸಲಾಗುವುದು ಎಂದು ಬಿಟಿಡಿಎ ಅಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

    ನಗರದ ಬಿಟಿಡಿಎ ಸಭಾಂಗಣದಲ್ಲಿ ಶನಿವಾರ ನವನಗರದ ಯೂನಿಟ್ 2ರ ವ್ಯಾಪ್ತಿಯಲ್ಲಿನ ಸಂತ್ರಸ್ತರಿಗೆ ಹಕ್ಕುಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ಕಳೆದ 6 ವರ್ಷಗಳಲ್ಲಿ ಹಕ್ಕು ಪತ್ರ ವಿತರಣೆಯಲ್ಲಿ ನ್ಯೂನತೆಗಳು ಕಂಡುಬಂದಿವೆ. ಅವುಗಳ ಸಮಗ್ರ ತನಿಖೆಗೆ ಒಳಪಡಿಸಿ ತಪ್ಪಿತಸ್ಥ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

    ಹಕ್ಕುಪತ್ರ ಪಡೆದ ಸಂತ್ರಸ್ತರು ತಮಗೆ ನೀಡಿದ ನಿವೇಶನ ಯಾರಿಗೂ ಮಾರಾಟ ಮಾಡಲು ಬರುವುದಿಲ್ಲ. ಇನ್ನು ಒಂದು ವರ್ಷದೊಳಗೆ ಮನೆಗಳನ್ನು ಕಟ್ಟಿಕೊಂಡು ಅಲ್ಲಿ ವಾಸ ಮಾಡಬೇಕು. ಒಂದು ವರ್ಷದಲ್ಲಿ ಮನೆಗಳನ್ನು ಕಟ್ಟಿಕೊಳ್ಳದಿದ್ದರೆ ನಿವೇಶನವನ್ನು ವಾಪಸ್ ಪಡೆಯಲಾಗುವುದು. ಆಸ್ತಿ ಕಳೆದುಕೊಂಡು ಸಂತ್ರಸ್ತರಾದವರು ನೇರವಾಗಿ ಬಿಟಿಡಿಎ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಯಾವುದೇ ರೀತಿಯಲ್ಲಿ ಮಧ್ಯವರ್ತಿಗಳಿಗೆ ಮೊರೆ ಹೋಗಬಾರದು. ತಾವು ಪದೇ ಪದೆ ಕಚೇರಿಗೆ ಅಲೆದಾಡಬಾರದು. ತಾವು ಕೊಟ್ಟ ಅರ್ಜಿಯನ್ನು ಪರಿಶೀಲಿಸಿ ಹಕ್ಕು ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಬಿಟಿಡಿಎ ಸದಸ್ಯರಾದ ಶಿವಾನಂದ ಟವಳಿ, ಮೋಹನ ನಾಡಗೌಡರ, ಕುಮಾರ ಎಳ್ಳಿಗುತ್ತಿ, ಬಿಟಿಡಿಎ ಮುಖ್ಯ ಅಭಿಯಂತರ ಅಶೋಕ ವಾಸನದ, ಪುನರ್ವಸತಿ ಅಧಿಕಾರಿ ಗಣಪತಿ ಪಾಟೀಲ ಸೇರಿ ಇತರರು ಉಪಸ್ಥಿತರಿದ್ದರು.

    ಬಿಟಿಡಿಎ ಅಧಿಕಾರ ವಹಿಸಿಕೊಂಡ ಒಂದೂವರೆ ತಿಂಗಳಲ್ಲಿ ಮೊದಲ ಹಂತದಲ್ಲಿ 72, ಎರಡನೇ ಹಂತದಲ್ಲಿ 93 ಹಾಗೂ ಮೂರನೇ ಹಂತದಲ್ಲಿ 160 ಸೇರಿ ಇಲ್ಲಿವರೆಗೆ ಒಟ್ಟು 325 ಹಕ್ಕು ಪತ್ರ ವಿತರಿಸಲಾಗಿದೆ. ಆಸ್ತಿ ಕಳೆದುಕೊಂಡ ಮೂಲ ಸಂತ್ರಸ್ತರಿಗೆ ನ್ಯಾಯ ದೊರಬೇಕು ಎನ್ನುವುದು ನಮ್ಮ ಆಶಯ. ಹೀಗಾಗಿ ಸಮರ್ಪಕವಾಗಿ ದಾಖಲಾತಿಗಳನ್ನು ಪರಿಶೀಲನೆ ಮಾಡಿ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. 15 ದಿನಕ್ಕೊಮ್ಮೆ ಹಕ್ಕು ಪತ್ರ ವಿತರಣೆ ನಡೆಯಲಿದೆ.
    ವೀರಣ್ಣ ಚರಂತಿಮಠ ಶಾಸಕ, ಬಿಟಿಡಿಎ ಅಧ್ಯಕ್ಷ

    ನಿವೇಶಕ್ಕೆ ಬಿಟಿಡಿಎ ಕಚೇರಿಗೆ ನೇರವಾಗಿ ಅರ್ಜಿ ಸಲ್ಲಿಸಿ
    ಬಾಗಲಕೋಟೆ ಪಟ್ಟಣದಲ್ಲಿ ಆಸ್ತಿ ಕಳೆದುಕೊಂಡ ಸಂತ್ರಸ್ತರು, ಬಾಡಿಗೆದಾರರು, ಬಯಲು ಜಾಗ ಸಂತ್ರಸ್ತರು ನವನಗರದಲ್ಲಿ ನಿವೇಶನಕ್ಕಾಗಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಂದು ಅರ್ಜಿ ಸಲ್ಲಿಸಬೇಕು. ಮಧ್ಯವರ್ತಿಗಳ ಮೂಲಕ ಅರ್ಜಿ ಸಲ್ಲಿಕೆ ಮಾಡಬಾರದು. ಸಂತ್ರಸ್ತರು ಬಿಟಿಡಿಎ ಕಚೇರಿಯಿಂದ ತೊಂದರೆ ಅನುಭವಿಸುತ್ತಿದ್ದಲ್ಲಿ, ಸಿಬ್ಬಂದಿ ವಿಳಂಬ ಧೋರಣೆ ಮಾಡಿದಲ್ಲಿ, ಲಂಚ ಆಮಿಷ ಒಡ್ಡಿದಲ್ಲಿ ನೇರವಾಗಿ ದೂರವಾಣಿ ಮೂಲಕ ಪುನರ್ವಸತಿ ಅಧಿಕಾರಿಗಳು, ಮುಖ್ಯ ಇಂಜಿನಿಯರ್ ಇಲ್ಲವೆ ಪ್ರಾಧಿಕಾರದ ಸದಸ್ಯರನ್ನು ಸಂಪರ್ಕಿಸಬಹುದಾಗಿದೆ. ಮೊ.ನಂ. ಪುನರ್ವಸತಿ ಅಧಿಕಾರಿಗಳು (9902407759), ಮುಖ್ಯ ಅಭಿಯಂತರರು (08354-233353), ಬಿಟಿಡಿಎ ಸದಸ್ಯರಾದ ಮೋಹನ ನಾಡಗೌಡ (9448073888), ಜಿ.ಜಿ.ಯಳ್ಳಿಗುತ್ತಿ (9448336663), ಶಿವಾನಂದ ಟವಳಿ (7019225105) ಸಂಪರ್ಕಿಸಬೇಕು.

    ಇನ್ನು ಅಧಿಕೃತವಲ್ಲದ, ಖೊಟ್ಟಿ ದಾಖಲೆ ಪತ್ರಗಳನ್ನು ಸಲ್ಲಿಸಿ ನಿವೇಶನ ಪಡೆದುಕೊಳ್ಳಲು ಯತ್ನಿಸಿದಲ್ಲಿ ಅಂತಹ ಅರ್ಜಿದಾರರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಪ್ರಾಧಿಕಾರದ ಪುನರ್ವಸತಿ ಅಧಿಕಾರಿ ಗಣಪತಿ ಪಾಟೀಲ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts