More

    ಹಾನಿಯಾದ ಮನೆಗಳ ಪರಿಶೀಲನೆ ಆರಂಭ

    ಬಾಗಲಕೋಟೆ: ಈಚೆಗೆ ಸುರಿದ ಮಳೆಯಿಂದ ಹುನಗುಂದ ತಾಲೂಕಿನ ಕಮತಗಿಯಲ್ಲಿ 29 ಮನೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಣ್ಣಿನ ಮನೆಗಳಿಗೆ ಹಾನಿಯಾಗಿದ್ದು, ಮಳೆ ಹಾನಿಯ ಸಮೀಕ್ಷೆ ಕಾರ್ಯಕ್ಕೆ ತಂಡವನ್ನು ರಚನೆ ಮಾಡಲಾಗಿದೆ ಎಂದು ಹುನಗುಂದ ತಹಶೀಲ್ದಾರ್ ಬಸವರಾಜ್ ನಾಗರಾಳ ತಿಳಿಸಿದ್ದಾರೆ.

    ಮಂಗಳವಾರ ಕಮತಗಿ ಪಟ್ಟಣದ ವಿವಿಧ ಮನೆಗಳಿಗೆ ಭೇಟಿ ನೀಡಿ, ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಅದರಲ್ಲೂ ಅಮೀನಗಡ ಮಳೆ ಮಾಪನ ಕೇಂದ್ರದಲ್ಲಿ ದಾಖಲಾಗಿರುವ ವರದಿಯಂತೆ ಅಮೀನಗಡ, ಕಮತಗಿ ಭಾಗಗಳಲ್ಲಿ 96 ಮೀ.ಮಿ ದಾಖಲೆಯ ಮಳೆಯಾಗಿದೆ. ಇದರಿಂದಾಗಿ ತಾಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮನೆಗಳಿಗೆ ಹಾನಿಯಾಗಿದೆ ಎಂದರು.

    ಮನೆಗಳ ಹಾನಿಯ ಬಗ್ಗೆ ವರದಿಯನ್ನು ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸುವ ಉದ್ದೇಶದಿಂದ ಈಗಾಗಲೇ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇಂಜನಿಯರ, ಗ್ರಾಪಂ ಪಿಡಿಒ, ಪಪಂ, ಪುರಸಭೆ ಮುಖ್ಯಾಧಿಕಾರಿ, ಗ್ರಾಮ ಲೆಕ್ಕಾಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚನೆ ಮಾಡಲಾಗಿದ್ದು, ಮಳೆಯಿಂದ ಹಾನಿಯಾಗಿರುವ ಮನೆಗಳನ್ನು ಮೂರು ಹಂತದಲ್ಲಿ ಗುರುತಿಸಲಾಗುವುದು. ಈಗಾಗಲೇ ಮಳೆ ಹಾನಿಯ ಸಮೀಕ್ಷೆ ಕಾರ್ಯವು ಚುರುಕಿನಿಂದ ಸಾಗಿದೆ ಎಂದರು.

    ಪಟ್ಟಣ ಪಂಚಾಯತಿ ಸದಸ್ಯ ರಮೇಶ ಲಮಾಣಿ, ಸಿಬಂದಿಗಳಾದ ರಮೇಶ ಕಡ್ಲಿಮಟ್ಟಿ,ಸಿದ್ರಾಮಪ್ಪ ಮಾಗುಂಡಪ್ಪನವರ, ಗ್ರಾಮ ಲೆಕ್ಕಾಧಿಕಾರಿ ಡಿ.ಎಸ್. ಯತ್ನಟ್ಟಿ ಸೇರಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts