More

    ಹಿಂದುಳಿದ ವರ್ಗಗಳ ಏಳಿಗೆ ಶ್ರಮ

    ಬಾಗಲಕೋಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆ, ಕಾರ್ಯಕ್ರಮ ಜನರಿಗೆ ತಲುಪಿಸುವುದರ ಜತೆಗೆ ಹಿಂದುಳಿದ ವರ್ಗ ಸಮುದಾಯಗಳನ್ನು ಸಂಘಟಿಸುವ ಕೆಲಸದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ನಿರಂತರವಾಗಿ ತೊಡಗಿಕೊಳ್ಳಲಿದೆ ಎಂದು ಬಿಜೆಪಿ ಒಬಿಸಿ ರಾಜ್ಯ ಘಟಕದ ಅಧ್ಯಕ್ಷ ನೆ.ಲಾ.ನರೇಂದ್ರಬಾಬು ಹೇಳಿದರು.

    ಹಿಂದುಳಿದ ವರ್ಗಗಳಲ್ಲಿ ಬರುವ ಅನೇಕ ಸಮಾಜಗಳು ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಬಹಳಷ್ಟು ಹಿಂದೆ ಉಳಿದಿವೆ. ಕೆಲವು ಸಮಾಜಗಳು ಇದೂವರೆಗೂ ಒಂದು ಸರ್ಕಾರಿ ನೌಕರಿ, ಯೋಜನೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಅಂತಹ ಎಲ್ಲ ಸಮಾಜಗಳನ್ನು ಒಗ್ಗೂಡಿಸಿಕೊಂಡು ಸರ್ವರಿಗೂ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಕಾರ್ಯಕ್ರಮ ರೂಪಿಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಹಿಂದುಳಿದ ವರ್ಗಗಳಿಗಾಗಿ ವಿನೂತನ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಇನ್ನು ರಾಜ್ಯದಲ್ಲಿ ಹಲವು ಹಿಂದುಳಿದ ವರ್ಗಗಳ ಸಮಾಜವು ಹರಿದು ಹಂಚಿ ಹೋಗಿವೆ. ಸಂಘಟನೆ ಕೊರತೆಯಿಂದ ಸರ್ಕಾರದ ಯಾವುದೇ ಯೋಜನೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಅವರೆನ್ನೆಲ್ಲ ಒಗ್ಗೂಡಿಸುವ ಕಾರ್ಯವನ್ನು ಮೋರ್ಚಾದ ಕಾರ್ಯಕರ್ತರು, ಪದಾಧಿಕಾರಿಗಳು ಮಾಡಲಿದ್ದಾರೆ. ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಂಘಟನೆ ಮಾಡಲಿದ್ದಾರೆ ಎಂದರು.

    ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ವೀರಣ್ಣ ಹಳೇಗೌಡರ ಮಾತನಾಡಿ, ಬಿಜೆಪಿ ಕೇವಲ ಮೇಲ್ವರ್ಗದ ಪಕ್ಷ ಎನ್ನುವ ಹಣೆಪಟ್ಟಿ ವಿಪಕ್ಷಗಳು ಕಟ್ಟಿದ್ದವು. ಇದೆಲ್ಲ ಸುಳ್ಳು ಎಲ್ಲ ವರ್ಗಗಳ ಜನರ ಪಕ್ಷವಾಗಿದೆ. ಸರ್ವ ಸಮಾಜದ, ಸರ್ವ ಸ್ಪರ್ಶಿ ಪಕ್ಷವಾಗಿದೆ.

    ಮುಖಂಡರಾದ ಸತೀಶ ಎಸ್., ನಾಗಪ್ಪ ಅಂಬಿ, ರಾಜು ರೇವಣಕರ, ರಾಜು ನಾಯ್ಕರ, ಸಂಗಮೇಶ ಹಿತ್ತಲಮನಿ, ಸಂಗಮೇಶ ಹೂಗಾರ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts