More

    ಜನಾರ್ಧನ ರೆಡ್ಡಿ ಹೊಸ ಪಕ್ಷಕ್ಕೆ ಬೆಂಬಲಿಸಬಾರದು

    ಬಾಗಲಕೋಟೆ: ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರು ಪಕ್ಷ ಸ್ಥಾಪಿಸಬಹುದು. ಅದು ಅವರಿಗೆ ಇರುವ ಹಕ್ಕು. ಆದರೇ ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪಿಸಿದಲ್ಲಿ ಜನ ಬೆಂಬಲಿಸಬಾರದು ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಹೇಳಿದರು.
    ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಕುರಿತು ಪ್ರತಿಕ್ರಿಯೆ ನೀಡಿದ ಎಸ್.ಆರ್.ಹಿರೇಮಠ, ಜನಾರ್ಧನ ರೆಡ್ಡಿ ಬ್ರರ‍್ಸ್ ಹಾಗೂ ಸಚಿವ ಶ್ರೀರಾಮಲು ಅವರ ಬಳಿ ಹೇಗೆ ಕೋಟ್ಯಂತರ ರೂ. ಬಂತು? ಈ ಹಿಂದೆ ಶ್ರೀರಾಮಲ ಹೊಸ ಪಕ್ಷ ಕಟ್ಟಿದರು ಜನರು ಬೆಂಬಲಿಸಲಿಲ್ಲ. ಅದೇ ರೀತಿ ಜನಾರ್ಧನ ರೆಡ್ಡಿ ಹೊಸ ಪಕ್ಷಕ್ಕೆ ಬೆಂಬಲ ನೀಡಬಾರದು. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರು ಪಕ್ಷ ಸ್ಥಾಪಿಸಬಹುದು. ಅದು ಅವರ ಹಕ್ಕು. ಆದರೇ ಅದಕ್ಕೆ ಪ್ರೋತ್ಸಾಹ ನೀಡುವುದು, ಬಿಡುವುದು ಜನರ ಮೇಲೆ ಇದೆ ಎಂದರು.
    ಜನಾರ್ಧನ ರೆಡ್ಡಿ ಬದಲಾಗಿಲ್ಲ. ಕುತಂತ್ರ, ಕ್ರಿಮಿನಲ್ ಬಿಟ್ಟಿಲ್ಲ. ಒಂದು ಕಾಲಕ್ಕೆ ಅವರ ಒಂದು ಕಿಸೆಯಲ್ಲಿ ಬಿ.ಎಸ್.ಯಡಿಯೂರಪ್ಪ, ಇನ್ನೊಂದು ಕಿಸೆಯಲ್ಲಿ ವೈ.ಎಸ್.ರಾಜಶೇಖರ ರೆಡ್ಡಿ ಇಟ್ಟಿದ್ದರು. ಅದಿರುವ ಪ್ರಕರಣದಲ್ಲಿ ಸಾವಿರಾರು ಕೋಟಿ ರೂ. ಅಕ್ರಮವಾಗಿ ಹಣ ಮಾಡಿದ್ದರು. ಇಂದಿಗೂ ರೆಡ್ಡಿ ಬಳ್ಳಾರಿಗೆ ಬರಬೇಕು ಎಂದರೇ ಸುಪ್ರೀಂಕೋರ್ಟ ಪರವಾಣಿಗೆ ಪಡೆದು ಬರಬೇಕು. ನಮ್ಮ ಹೋರಾಟ ಫಲವಾಗಿ ಈ ಭೂಪ ಜೈಲು ಸೇರುವಂತಾಯಿತು. ಹೈದ್ರಾಬಾದ್ ನ್ಯಾಯಾಲಯದಲ್ಲಿ ೪ ವರ್ಷವಾದರು ಆತನನ್ನು ವಿಚಾರಣೆ ಮಾಡಲಿಲ್ಲ. ನ್ಯಾಯಾಧೀಶರನ್ನೆ ಲಂಚಾವತಾರಕ್ಕೆ ಸೆಳೆದರು. ನಮ್ಮ ಹೋರಾಟದ ಫಲವಾಗಿ ಸಿಬಿಐ ರೆಡ್ಡಿ ವಶಕ್ಕೆ ಪಡೆಯಿತು. ಇದೀಗ ೬೦ ಕೋಟಿ ರೂ. ನೀಡಿ ಜಾಮೀನು ಪಡೆದುಕೊಂಡಿದ್ದಾರೆ. ಇಂತಹವರ ಪಕ್ಷ ಬೆಂಬಲಿಸುವುದು ಸೂಕ್ತವೇ ಎಂದು ಪ್ರಶ್ನಿಸಿದರು.
    ನಾನು ತಿನ್ನುವದಿಲ್ಲ. ತಿನ್ನುವವರಿಗೂ ಬಿಡುವದಿಲ್ಲ ಎನ್ನುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ರೆಡ್ಡಿ ಕರ್ಮಕಾಂಡ ಬಗ್ಗೆ ಗೊತ್ತಿಲ್ಲವೇ?. ಹಾಗಿದ್ದರೇ ಕಠಿಣ ಕ್ರಮ ತೆಗೆದುಕೊಂಡಿಲ್ಲ ಯಾಕೇ ಅಂತ ಪ್ರಶ್ನಿಸಿದ ಅವರು, ಅಳಿಯನ ಕೋಟ್ಯಂತರ ರೂ. ಆಸ್ತಿ ಉಳಿಸಲು ಮಾಜಿ ಸಿಎಂ ಎಸ್.ಎಂ.ಕೃಷ್ಣ ಬಿಜೆಪಿ ಸೇರಿದರು. ತನ್ನ ಅಕ್ರಮ ಮುಚ್ಚಿಕೊಳ್ಳಲು ಮಾಯಾವತಿ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಬಿಜೆಪಿ ಸರ್ಕಾರ ಭಷ್ಟರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts