More

    ಬಸವೇಶ್ವರ ಬ್ಯಾಂಕ್ ಪರಿವೀಕ್ಷಣೆ

    ಬಾಗಲಕೋಟೆ : ನಗರದ ಪ್ರತಿಷ್ಠಿತ ಬಸವೇಶ್ವರ ಸಹಕಾರಿ ಬ್ಯಾಂಕ್ ಪ್ರಧಾನ ಕಚೇರಿಗೆ ಬೆಳಗಾವಿ ವಿಭಾಗದ ಸಹಕಾರಿ ಸಂಘಗಳ ಸಂಯುಕ್ತ ನಿಬಂಧಕ ಜಿ.ಎಂ.ಪಾಟೀಲ ಶುಕ್ರವಾರ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.

    ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರೊಂದಿಗೆ ಚರ್ಚೆ ನಡೆಸಿದ ಸಂಯುಕ್ತ ಉಪನಿಬಂಧಕ ಜಿ.ಎಂ.ಪಾಟೀಲ ಬ್ಯಾಂಕ್ ವ್ಯವಹಾರಗಳ ಕುರಿತು, ಗ್ರಾಹಕರಿಗೆ ಹಮ್ಮಿಕೊಂಡ ವಿವಿಧ ಯೋಜನೆಗಳು, ಸೌಲಭ್ಯಗಳು, ಕಾರ್ಯ ಸಾಧನೆ, ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಬ್ಯಾಂಕ್ ಪರಿವೀಕ್ಷಣೆ ಟಿಪ್ಪಣಿಯನ್ನು ಸಹಕಾರಿ ಸಂಘದ ಅಧಿಕಾರಿಗಳಾದ ಸಿಡಿಒ ವಿಕ್ರಮ ಕುಲಕರ್ಣಿ, ಸಿ.ಕೆ.ಲಮಾಣಿ, ಪ್ರಕಾಶ ಹಿರೇಗೋಳಿ ಸಿದ್ಧಪಡಿಸಿದರು. ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿವೇಕಾನಂದ ಕೇಮಾಳಿ, ಅಧಿಕಾರಿಗಳಾದ ಬಿ.ಎಸ್. ನಾವಲಗಿ, ಎಸ್.ಬಿ. ಬದಾಮಿ, ಪಿ.ಎನ್. ಹಳ್ಳಿಕೇರಿ, ಎಸ್.ವಿ.ಹುಬ್ಬಳ್ಳಿ, ವಿ.ಎಂ.ಹಿರೇಮಠ ಉಪಸ್ಥಿತರಿದ್ದರು.

    ವೃತ್ತಿಪರ ನಿರ್ದೇಶಕರಾಗಿ ಕುಲಕರ್ಣಿ ಮತ್ತು ನಾವಲಗಿ ನೇಮಕ
    ಬಸವೇಶ್ವರ ಸಹಕಾರಿ ಬ್ಯಾಂಕ್ 2020-2025ನೇ ಅವಧಿಗೆ ವೃತ್ತಿಪರ ನಿರ್ದೇಶಕರಾಗಿ ಆಯ್ಕೆಯಾದ ನಾರಾಯಣ ರಾಮರಾವ ಕುಲಕರ್ಣಿ ಹಾಗೂ ಈರಣ್ಣ ಸಂಗಪ್ಪ ನಾವಲಗಿ ಅವರನ್ನು ಸೋಮವಾರ ಪ್ರಧಾನ ಕಚೇರಿ ಸಭಾಭವನದಲ್ಲಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸನ್ಮಾನಿಸಿದರು.

    ನಿರ್ದೇಶಕ ನಾರಾಯಣ ಕುಲಕರ್ಣಿ ಮಾತನಾಡಿ, ಪ್ರಕಾಶ ತಪಶೆಟ್ಟಿ ನೇತೃತ್ವದಲ್ಲಿ ಬಸವೇಶ್ವರ ಸಹಕಾರಿ ಬ್ಯಾಂಕ್ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಗ್ರಾಹಕರ ಹಿತದೃಷ್ಟಿಯಿಂದ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿರುವ ಅವರು, ರಾಜ್ಯಾದ್ಯಂತ ಬ್ಯಾಂಕ್ ಶಾಖೆಗಳನ್ನು ತೆರೆದಿದ್ದಾರೆ. ಬ್ಯಾಂಕ್ ಸರ್ವತೋಮುಖ ಬೆಳವಣಿಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.

    ಬ್ಯಾಂಕ್ ಉಪಾಧ್ಯಕ್ಷ ಎಂ.ಜಿ.ವಾಲಿ, ನಿರ್ದೇಶಕರಾದ ಎಚ್.ಎಸ್.ರಾಠೋಡ, ವಿ.ವಿ.ಶಿರಗಣ್ಣವರ, ಎಸ್.ಸಿ.ಆರಬ್ಬಿ, ಬಿ.ಎಂ.ಈಟಿ, ಎಸ್.ಎಸ್.ಕಂಕಣಮೇಲಿ, ಶಶಿಧರ ಜಿಗಳೂರ, ಸಿದ್ಲಿಂಗೇಶ್ವರ ಗೋಡಿ, ಎನ್.ಎ್. ಪಲ್ಲೇದ, ಎಸ್.ಎಸ್.ಜಂಗಿ, ಜೆ.ಸಿ. ಅಬ್ದುಲಪುರ, ಯು.ಎಸ್. ಜಿಗಜಿನ್ನಿ, ಅಧಿಕಾರಿಗಳಾದ ಬಿ.ಎಸ್.ನಾವಲಗಿ, ಎಂ.ಬಿ. ಮೋಟಗಿ, ಎಸ್.ಬಿ.ಬದಾಮಿ, ಪಿ.ಎನ್. ಹಳ್ಳಿಕೇರಿ, ಎಸ್.ವಿ.ಹುಬ್ಬಳ್ಳಿ, ವಿ.ಎಂ.ಹಿರೇಮಠ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts