More

    ಶಾಸಕ ಯತ್ನಾಳ ವಿರುದ್ಧ ಆಕ್ರೋಶ

    ಬಾಗಲಕೋಟೆ: ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬೆಂಬಲಿಗರು, ಅಭಿಮಾನಿಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರು ಜಂಟಿಯಾಗಿ ನವನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
    ಅಂಬೇಡ್ಕರ್ ಭವನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನದ ಮುಖ್ಯದ್ವಾರ ತಲುಪಿತು. ಅಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

    ಪ್ರತಿಭಟನಾ ಸಭೆಯಲ್ಲಿ ಡಿಎಸ್‌ಎಸ್ ರಾಜ್ಯ ಸಂಚಾಲಕ ಪರಶುರಾಮ ನೀಲನಾಯಕ ಮಾತನಾಡಿ, ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಸಿಂಧೂರ ಲಕ್ಷ್ಮಣ, ಹಲಗಲಿ ಬೇಡರು, ಒನಕೆ ಓಬ್ಬವ್ವ ಅವರ ಹೋರಾಟದ ಇತಿಹಾಸ ಗೊತ್ತಿಲ್ಲ. ಅವರಿಗೆ ತಕ್ಕಡಿ ಹೊಡೆದು ಜೀವನ ಮಾಡುವುದು ಮಾತ್ರ ಗೊತ್ತು. ಬಾಯಿಗೆ ಬಂದ ಹಾಗೆ ಮಾತನಾಡುವುದೇ ಅವರ ಚಾಳಿ. ಸತೀಶ ಜಾರಕಿಹೊಳಿ ವಿರುದ್ಧ ಟೀಕೆ ಮಾಡಲು ಯತ್ನಾಳಗೆ ನೈತಿಕತೆ ಇಲ್ಲ ಎಂದರು.
    ಗೋಕಾಕದಲ್ಲಿ ೨೦ ಸಾವಿರ ಜನರನ್ನು ಸೇರಿಸಿ ಭಾಷಣ ಮಾಡಿರುವ ಯತ್ನಾಳ ಅವರೇ ನಾವು ವಿಜಯಪುರದಲ್ಲಿ ೫೦ ಸಾವಿರ ಜನರನ್ನು ಸೇರಿಸಿ ನಮ್ಮ ತಾಕತ್ತು ತೋರಿಸುತ್ತೇವೆ ಎಂದು ಹೇಳಿದರು.
    ಮುಖಂಡ ಬಸವರಾಜ ಧರ್ಮಂತಿ ಮಾತನಾಡಿ, ಶಾಸಕ ಬಸನಗೌಡಚಲ ಯತ್ನಾಳಗೆ ನಾಲಿಗೆ, ಮಿದುಳಿಗೆ ಲಿಂಕ್ ಇಲ್ಲ ಎಂದು ವಾಗ್ದಾಳಿ ನಡೆಸಿದರು.
    ಮುಖಂಡರಾದ ಸುಭಾಸ ಗಸ್ತಿ, ದ್ಯಾಮಣ್ಣ ಗಾಳಿ, ಹಾಜಿಸಾಬ ದಂಡಿನ, ಜಯರಾಜ ಹಾದಿಕರ, ಲಕ್ಷ್ಮಣ ಮಾಲಗಿ, ಹನುಮಂತ ಡೋಣಿ, ಭರಮಣ್ಣ ಡೋಳಿ, ಶ್ರೀಶೈಲ ಅಂಟಿನ, ಚಿಟ್ಟು ನೀಲನಾಯಕ ಇತರರು ಇದ್ದರು.

    ಶಿರಚ್ಛೇದ ಮಾಡಿಕೊಳ್ಳುವೆ!
    ಹೋರಾಟಗಾರ ಕುತುಬುದ್ಧೀನ್ ಖಾಜಿ ಮಾತನಾಡಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ತಾವು ಹಿಂದು, ಲಿಂಗಾಯತ ಪಂಚಮಸಾಲಿಯೋ ಅಂತ ಮೊದಲು ಸ್ಪಷ್ಟಪಡಿಸಲಿ. ಹಿಂದು ಎನ್ನುತ್ತ ಮುಸ್ಲಿಮರನ್ನು ವಿರೋಽಸುತ್ತಾರೆ. ಮೀಸಲಾತಿ ಕೇಳುವ ನೆಪದಲ್ಲಿ ಸಮಾವೇಶ ನಡೆಸಿ ಉಳಿದ ಸಮಾಜಕ್ಕೆ ನಿಂದಿಸುತ್ತಾರೆ. ಶಾಸಕರಾಗಲು ಅಯೋಗ್ಯ ವ್ಯಕ್ತಿ ಅವರು. ಶಾಸಕ ಯತ್ನಾಳ ವಿಧಾನಸೌಧದ ಮೂರನೇ ಮಹಡಿ ಮೆಟ್ಟಿಲು ಹತ್ತಿದರೆ ವಿಜಯಪುರದ ಗಾಂಽ ಚೌಕ್‌ನಲ್ಲಿ ಶಿರಚ್ಛೇದ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts