More

  ಬಾಗಲಕೋಟೆ: ಹಬ್ಬದ ದಿನದಂದೇ ದೇವಸ್ಥಾನದಲ್ಲಿ ಲೋಕಸಭಾ ಬಿಜೆಪಿ-ಕಾಂಗ್ರೆಸ್​ ಅಭ್ಯರ್ಥಿಗಳು ಮುಖಾಮುಖಿ!

  ಬಾಗಲಕೋಟೆ: ರಾಜ್ಯದಲ್ಲಿ ಯುಗಾದಿ ಹಬ್ಬದ ಸಂಭ್ರಮಾಚರಣೆ ಅದ್ದೂರಿಯಾಗಿ ಸಾಗುತ್ತಿದ್ದು, ಈ ಮಧ್ಯೆ ಬಾಗಲಕೋಟೆ ಲೋಕಸಭಾ ಅಭ್ಯರ್ಥಿಗಳಾದ ಪಿ.ಸಿ.ಗದ್ದಿಗೌಡರ ಮತ್ತು ಸಂಯುಕ್ತಾ ಪಾಟೀಲ್​ ಸುಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಟೋತ್ಸವದಲ್ಲಿ ಮುಖಾಮುಖಿಯಾಗಿದ್ದಾರೆ.

  ಇದನ್ನೂ ಓದಿ: ಹೊಸ ವರ್ಷದ ಹೊಸ ಹರ್ಷ; ಯುಗಾದಿಯ ಬೇವು, ಬೆಲ್ಲದ ಸವಿಯಲ್ಲಿ ತಾರೆಯರು

   
  ಮಹಾಲಿಂಗೇಶ್ವರ ಜಟಾ ದರ್ಶನಕ್ಕೆ ಸಾವಿರಾರು ಭಕ್ತರು ಭಾಗಿಯಾಗಿದ್ದು, ಈ ವೇಳೆ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹಾಗೂ ಕಾಂಗ್ರೆಸ್​ ಅಭ್ಯರ್ಥಿ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ್​ ಪರಸ್ಪರ ಮುಖಾಮುಖಿಯಾದರು.

  ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಮಹಾಲಿಂಗೇಶ್ವರ ಮಠದಲ್ಲಿ ಜಟಾ ಪೂಜೆ ನಡೆಯುತ್ತದೆ. ಜಟಾ ದರ್ಶನ ಪಡೆದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಹಲವು ವರ್ಷಗಳಿಂದ ಯುಗಾದಿ ಪಾಡ್ಯದಂದು ಸಂಸದ ಪಿ.ಸಿ.ಗದ್ದಿಗೌಡರ ತಪ್ಪದೇ ಜಟಾ ದರ್ಶನ ಪಡೆಯುತ್ತಾರೆ. ಈ ವರ್ಷ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಂಯುಕ್ತ ಪಾಟೀಲ ಸಹ ಜಟಾ ಪೂಜೆಯಲ್ಲಿ ಭಾಗಿಯಾದರು.

  ಇದನ್ನೂ ಓದಿ: ನಾಗೇಂದ್ರ ಪ್ರಸಾದ್ ಯುಗಾದಿ ಗೀತೆ; ಕೃಷ್ಣಾವತಾರ ಹಾಡನ್ನು ರಿಲೀಸ್ ಮಾಡಿದ ಯದುವೀರ್ ಒಡೆಯರ್

  ನಸುಕಿನ ಜಾವ 5 ಗಂಟೆಗೆ ಆರಂಭವಾದ ಜಟಾ ಪೂಜೆಯಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ದರ್ಶನ ಪಡೆಯಲು ವಿವಿಧೆಡೆಯಿಂದ ಭಕ್ತ ಸಾಗರ ಹರಿದುಬರುತ್ತಿದೆ.

  ಯುಗಾದಿ ಹಬ್ಬದಂದು ತಪ್ಪದೇ ಈ ಕೆಲಸಗಳನ್ನು ಮಾಡಿ! ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts