More

    ಪರೀಕ್ಷಾರ್ಥ ಸಾರಿಗೆ ನೌಕರರಿಗೆ ಸೂಚನಾ ಪತ್ರ

    ಬಾಗಲಕೋಟೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಕೂಟ (ರಿ) ಸಂಘಟನೆಯು ಕರೆ ನೀಡಿರುವ ಮುಷ್ಕರಕ್ಕೆ ಬಾಗಲಕೋಟೆ ವಿಭಾಗದ ಒಟ್ಟು 129 ಜನ ಪರೀಕ್ಷಾರ್ಥ ನೌಕರರು ಅನಧಿಕೃತವಾಗಿ ಗೈರು ಹಾಜರಾಗುವ ಮೂಲಕ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ.

    ಪರೀಕ್ಷಾರ್ಥ ನೌಕರರು ಗೈರು ಆಗದೇ ಕೆಲಸ ನಿರ್ವಹಿಸುವುದು ಅವರ ಕರ್ತವ್ಯವಾಗಿರುತ್ತದೆ. ಆದರೆ ಅವರ ಅನಧಿಕೃತ ಗೈರು ಹಾಜರಿ, ಘಟಕದ ಧೈನಂದಿನ ಸಾರಿಗೆ ಕಾರ್ಯಾಚರಣೆಗೆ ಅಡಚಣೆಯಾಗಿದೆ. ಅಲ್ಲದೆ ಪ್ರಯಾಣಿಕರಿಗೆ ಅನುಕೂಲ ಉಂಟಾಗಿದೆ. ಸಾರ್ವಜನಿಕರಲ್ಲಿ ಸಂಸ್ಥೆಯ ಘನತೆಗೆ ಧಕ್ಕೆ ಉಂಟಾಗಲು ಕಾರಣರಾಗಿರುತ್ತಾರೆ. ಪರೀಕ್ಷಾರ್ಥ ನೌಕರರ ಕರ್ತವ್ಯ ಲೋಪಕ್ಕೆ ವಾಕರಸಾಸಂಸ್ಥೆ, ಬಾಗಲಕೋಟೆ ವಿಭಾಗವು ಅಳವಡಿಸಿಕೊಂಡಿರುವ ಕ.ರಾ.ರ.ಸಾ.ಸಂಸ್ಥೆಯ (ಪದವೃಂದ ನೇಮಕಾತಿ) ನಿಯಮಾವಳಿ-1982ರ ಉಪನಿಯಮ 12(2) ರಂತೆ ಶಿಸ್ತು ಕ್ರಮ ಜರುಗಿಸಲಾಗುವುದು.

    ಆದ್ದರಿಂದ ವಾ.ಕ.ರ.ಸಾ.ಸಂಸ್ಥೆಯ ಬಾಗಲಕೋಟೆ ವಿಭಾಗದಲ್ಲಿ ನಿಯುಕ್ತಿಗೊಂಡ ಪರೀಕ್ಷಾರ್ಥ ಸಿಬ್ಬಂದಿಗಳು ಲಿಖಿತ ಸಮಜಾಯಿಷಿಯೊಂದಿಗೆ ಕೂಡಲೇ ತಮ್ಮ ಕಾರ್ಯ ಸ್ಥಳದ ಕೆಲಸದ ಮೇಲೆ ಹಾಜರಾಗಬೇಕು. ತಪ್ಪಿದಲ್ಲಿ ಅವರ ವಿರುದ್ದ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ವಾಕರಸಾ ಸಂಸ್ಥೆಯ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.



    
    
    ಪರೀಕ್ಷಾರ್ಥ ಸಾರಿಗೆ ನೌಕರರಿಗೆ ಸೂಚನಾ ಪತ್ರ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts