More

    ಜಗತ್ತಿನ ಮಾನವೀಯ ಒಳ ನೋಟ ಗ್ರಹಿಸಿ

    ಬಾಗಲಕೋಟೆ: ಕನ್ನಡ ಭಾಷೆ ಸಾಹಿತ್ಯದಲ್ಲಿ ವಿಶ್ವ ಸಾಹಿತ್ಯ ದರ್ಶನ ಮಾಡಬಹುದು. ಅಷ್ಟೊಂದು ವಿನೋದವಾದ ಸಾಹಿತ್ಯ ಕನ್ನಡದಲ್ಲಿ ಮೂಡಿ ಬಂದಿದೆ ಎಂದು ಹೆಗ್ಗೋಡಿನ ನೀನಾಸಂ ಪ್ರತಿಷ್ಠಾನದ ಸಂಚಾಲಕ ಡಾ.ಟಿ.ಪಿ.ಅಶೋಕ ಹೇಳಿದರು.

    ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕರ್ನಾಟಕ ಸಾಹಿತ್ಯ ಸಂಘ ಹಾಗೂ ಹೆಗ್ಗೋಡು ನೀನಾಸಂ ಪ್ರತಿಷ್ಠಾನ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಿಶ್ವ ಸಾಹಿತ್ಯ’ ಎರಡು ದಿನಗಳ ಸಾಹಿತ್ಯ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವಮಾನ್ಯ ಸಾಹಿತ್ಯವನ್ನು ಕನ್ನಡ ಭಾಷಾ ನೆಲೆಯಿಂದ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.

    ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ) ಮಾತನಾಡಿ, ಆಧುನಿಕ ಜಗತ್ತು ತುಂಬ ಚಿಕ್ಕದಾಗಿದೆ. ಆದರೆ, ಜಗತ್ತಿನ ಮಾನವೀಯ ಒಳನೋಟಗಳನ್ನು ಗ್ರಹಿಸಬೇಕಾದರೆ ಶಾಸಿಯವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಸಾಹಿತ್ಯವು ಇದನ್ನು ಪರಿಣಾಮಕಾರಿಯಾಗಿ ಪೂರೈಸುತ್ತದೆ. ಈ ಹಿನ್ನೆಲೆ ವಿಶ್ವದ ನಾನಾ ಪ್ರದೇಶದ ಸಾಹಿತ್ಯವನ್ನು ಪರಸ್ಪರ ಕೊಡು-ಕೊಳ್ಳುವಿಕೆಯ ಮೂಲಕ ತಿಳಿದುಕೊಳ್ಳುವಂಥ ಹಲವಾರು ಅನುಕೂಲತೆಗಳು ಇವೆ ಎಂದರು.

    ಅನುವಾದ ಸಾಹಿತ್ಯಕ್ಕೆ ತನ್ನದೆಯಾದ ಇತಿಮಿತಿಗಳಿವೆ. ವಿಶ್ವದ ಯಾವುದೇ ಶ್ರೇಷ್ಠ ಸಾಹಿತ್ಯವನ್ನು ಒಂದು ಭಾಷೆಗೆ ಅಕಾಡೆಮಿಕ್ ಆಗಿ ತಜುರ್ಮೆ ಮಾಡಬಹುದೆ ವಿನಾ ಅದರ ಮೂಲ ಭಾವವನ್ನು ಕಟ್ಟಿಕೊಡುವಲ್ಲಿ ಕೆಲವು ತೊಡಕುಗಳಿವೆ. ಅದನ್ನು ಮೀರಿ ಸಾಹಿತ್ಯವು ಸಮೃದ್ಧಿಗೊಳ್ಳಬೇಕಾಗಿದೆ ಎಂದು ತಿಳಿಸಿದರು.

    ಪ್ರಾಚಾರ್ಯ ಡಾ.ವಿ.ಎಸ್. ಕಟಗಿಹಳ್ಳಿಮಠ, ಕರ್ನಾಟಕ ಸಾಹಿತ್ಯ ಸಂಘದ ಸಂಯೋಜಕ ಡಾ.ಕೆ. ಪ್ರಹ್ಲಾದ, ಪ್ರೊ.ಎಸ್.ಎಂ.ಮುಳ್ಳೂರ, ಪ್ರೊ.ಡಿ.ಎಸ್.ಮಂಜುನಾಥ, ಪ್ರೊ.ಎಂ.ಎಸ್. ನಾಗರಾಜ ರಾವ್ ಉಪಸ್ಥಿತರಿದ್ದರು.

    ವಿಶ್ವ ಸಾಹಿತ್ಯ ಕುರಿತು ನಡೆದ ಚರ್ಚೆ-ಸಂವಾದದಲ್ಲಿ ಬಿವಿವಿ ಸಂಘದ ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts