More

    ಕೋಟೆನಗರಿ ರಂಗಿನಾಟಕ್ಕೆ ಸಂಭ್ರಮದ ತೆರೆ

    ಬಾಗಲಕೋಟೆ: ಅತ್ಯಂತ ವೈಭದಿಂದ ಆರಂಭಗೊಂಡಿದ್ದ ಮುಳುಗಡೆ ನಗರಿಯ ಹೋಳಿ ಹುಣ್ಣಿಮಯ ಮೂರು ದಿನಗಳಿಂದ ಸಡಗರದಿಂದ ಜರುಗಿದ್ದ ಬಣ್ಣದೋಕುಳಿಯ ಜೋರು ಬುಧವಾರ ಸಂಭ್ರಮದಿಂದ ಮುಕ್ತಾಯವಾಯಿತು. ಕೋವಿಡ್ ಭೀತಿ ನಡುವೆಯೂ ಕೋಟೆನಗರಿ ಹೋಳಿಗೆ ಮಂಗಳ ಹಾಡಲಾಯಿತು.

    ಕಾಮದಹನ ಬಳಿಕ ಅದ್ದೂರಿಯಾಗಿ ಚಾಲನೆ ದೊರೆತಿದ್ದ ಬಣ್ಣದೋಕುಳಿಗೆ ನಗರದ ಪ್ರತಿ ಮನೆ ಮನೆ, ರಸ್ತೆ ಇಕ್ಕೆಲ ಮತ್ತು ಗಲ್ಲಿಗಲ್ಲಿಗಳಲ್ಲಿ ಬಣ್ಣದ ರಂಗು ಕಾಣಿಸಿಕೊಂಡಿತ್ತು. ನಸುಕಿನ ಜಾವ ಹಲಿಗೆ ನಾದ, ಶಹನಾಯಿ ಸ್ವರದೊಂದಿಗೆ ಆರಂಭಗೊಳ್ಳುತ್ತಿದ್ದ ಬಣ್ಣದೋಕುಳಿ ಮಧ್ಯಾಹ್ನದ ವೇಳೆಗೆ ರಂಗು ಪಡೆಯುತ್ತಿತ್ತು.

    ಈ ಭಾರಿ ಬಣ್ಣದಾಟಕ್ಕೆ ಶಾಂತಿಯುತವಾಗಿ ಆರಂಭಗೊಂಡಿತ್ತು. ಪ್ರವಾಸಕ್ಕೆ ತೆರಳಿದವರು ಮರಳಿ ಆಗಮಿಸಿದ್ದರಿಂದ ಕೊನೆದಿನದ ಬಣ್ಣದಾಟ ಭರ್ಜರಿಯಾಗಿ ರಂಗೇರಿತ್ತು. ಮಕ್ಕಳು, ಯುವಕ-ಯುವತಿಯರು ಕೂಡಿಕೊಂಡು ರಂಗಿನ ಲೋಕದಲ್ಲಿ ಮಿಂದೆದ್ದರು. ಬಣ್ಣದ ಬಂಡಿಗಳಿಗೆ ನಿಷೇಧ ಪರಿಣಾಮ ಕೋಟೆನಗರಿ ಹೋಳಿ ಸಪ್ಪೆಯಾಗಿತ್ತು. ಸ್ನೇಹಿತರು, ಆತ್ಮೀಯರು ಎದುರಿಗೆ ಸಿಕ್ಕರೇ ಬಣ್ಣದ ನೀರಿನ ಮಜ್ಜನದಲ್ಲಿ ಮುಳುಗುಸುವ ದೃಶ್ಯ ಗಮನ ಸೆಳೆಯಿತು. ಬಗೆ ಬಗೆಯ ಬಣ್ಣ ಹಚ್ಚುವುದರ ಜೊತೆಗೆ ಆಕರ್ಷಕ ರೀತಿಯಲ್ಲಿ ಹಲಿಗೆ ಭಾರಿಸಿದ್ದು ರಂಜಿಸಿತು. ಬಾಯಿ ಬಡಿದುಕೊಳ್ಳುವ ಮೂಲಕ ಹೋಳಿ ಹಬ್ಬಕ್ಕೆ ವಿಶೇಷ ಮೆರಗು ನೀಡಿದರು.

    ಮಕ್ಕಳು ಕೈಯಲ್ಲಿ ಪಿಚಕಾರಿಗಳನ್ನು ಹಿಡಿದು ಸಿಕ್ಕ ಸಿಕ್ಕವರೆಲ್ಲರಿಗೂ ಶೂಟ್ ಮಾಡುತ್ತಿದ್ದರು. ದೊಡ್ಡವರು, ಬಣ್ಣದ ಲೋಕದಿಂದ ದೂರ ಉಳಿದ ಮನೆಯಲ್ಲಿ ಸೇರಿದ್ದ ಸ್ನೇಹಿತರನ್ನು ಹೊರಗಡೆ ಎಳೆದುತಂದು, ಕೈಯಲ್ಲಿ ಬಣ್ಣ, ನೀರು ಕಲಿಸಿ, ಶೈನಿಂಗ್ ಬರುವಂತೆ ವಿಧ ವಿಧದ ಬಣ್ಣಗಳನ್ನು ಹಚ್ಚುತ್ತಿದ್ದರು. ಯುವಕರು ಅಣುಕು ಶವ ಯಾತ್ರೆ ನಡೆಸಿ ರಂಜಿಸಿದರು. ಮಹಿಳೆಯರು ಮತ್ತು ಯುವತಿಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬಣ್ಣ ಹಚ್ಚಬೇಡಿ ಎಂದು ಅಂಗಲಾಚಿದರೂ ಬಿಡದೇ ಬಣ್ಣದ ನೀರಿನ ಮಜ್ಜನ ಮಾಡಿಸಿ, ಸಂಭ್ರಮಿಸುತ್ತಿದ್ದರು. ಬಣ್ಣ ರಂಗಿನಿಂದ ಯಾರ ಮುಖವು ಗುರುತು ಸಿಗದಷ್ಟು ಬದಲಾಗಿದ್ದವು. ರೇನ್ ಡ್ಯಾನ್ಸ್, ಡಿಜೆ ಸೌಂಡ ಇರಲಿಲ್ಲ. ಹೀಗಾಗಿ ಸಾಂಪ್ರದಾಯಕ ತುರಾಯಿ ಹಲಗೆ ನಿನಾದಕ್ಕೆ ಯುವಕರು, ಹಿರಿಯರು ಕುಣಿದು ಕುಪ್ಪಳಿಸಿದರು. ಶಿಳ್ಳೆ, ಕೇಕೆ, ಜೈಕಾರಗಳು ಮುಗಿಲು ಮುಟ್ಟಿದವು.

    ಯುವ ಪಡೆ ಮುಖದ ಒಂದು ಭಾಗದಲ್ಲಿ ವಾರ್ನಿಷ್, ಇನ್ನೊಂದು ಭಾಗದಲ್ಲಿ ಕಲರ್ ಕಲರ್ ಬಣ್ಣ ಹಚ್ಚಿಕೊಂಡು ನೃತ್ಯ ಮಾಡುತ್ತ ಗಮನ ಸೆಳೆದರು. ಹಲಗೆ ನಾದದ ಜೊತೆಗೆ ಧ್ವನಿವರ್ಧಕಗಳನ್ನು ಹಚ್ಚಿಕೊಂಡು ಮೈಮರೆತು ಕುಣಿದರು. ಹೀಗೆ ಸರ್ಕಾರಿ ನೌಕರರು, ಮಾಧ್ಯಮ ಮಿತ್ರರು ಸೇರಿದಂತೆ ಜಾತಿ ಮತ ಪಂಥ ಬೇದ ಭಾವ ಮರೆತು ಹೋಳಿ ಹಬ್ಬ ಆಚರಿಸಿದರು. ದೇಶದಲ್ಲಿಯೇ ಗಮನ ಸೆಳೆದಿರುವ ಕೋಟೆ ನಗರಿಯ ಬಣ್ಣದೋಕುಳಿ ಬಿಗಿ ಪೊಲೀಸ ಭದ್ರತೆ ನಡುವೆ ಸಂಭ್ರಮದಿಂದ ತೆರೆ ಬಿದ್ದಿತು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts