More

    ಜಾನಪದ ಗಾರುಡಿಗನನ್ನು ಗುರುತಿಸಿದ ಸರ್ಕಾರ

    ಬಾಗಲಕೋಟೆ: ಜಾನಪದ ಕಲಾವಿದ, ಖ್ಯಾತ ರಂಗ ಕಲಾವಿದ, ಚಿತ್ರನಟ ಗುರುರಾಜ ಹೊಸಕೋಟೆ ಅವರನ್ನು ಕೊನೆಗೂ ಸರ್ಕಾರ ಗುರುತಿಸಿ 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

    ಮಹಾಲಿಂಗಪುರದ ಗುರುರಾಜ ಅವರು 1948 ಮೇ 26 ರಂದು ಜನಿಸಿದರು. ತಂದೆ ಹರಿಕಥಾ ವಿದ್ವಾನ. ತಾಯಿ ಜಾನಪದ ಹಾಡುಗಾರ್ತಿ. ಕುಟುಂಬದ ಬಳುವಳಿಯಾಗಿ ಬಂದಿದ್ದ ಹಾಡುಗಾರಿಕೆ ಮೈಗೂಡಿಸಿಕೊಂಡರು. ಪಿಯುಸಿ ಶಿಕ್ಷಣ ಬಳಿಕ 1969 ರಲ್ಲಿ ಕಲಾ ರಂಗ ಪ್ರವೇಶಿಸಿದರು. 11500 ಕ್ಕೂ ಹೆಚ್ಚು ರಾಜ್ಯ ವ್ಯಾಪಿ ಕಾರ್ಯಕ್ರಮ ನೀಡಿದ್ದಾರೆ. 605 ಧ್ವನಿ ಸುರುಳಿಗಳಿಗೆ ಸಾಹಿತ್ಯ, ಸಂಗೀತ, ಕಂಠ ಒದಗಿಸಿದ್ದಾರೆ. ಜೋಗಿ, ರಾಮ-ಭಾಮ-ಶಾಮ, ಸಂತ, ಕರಿಯ, ಸುಂಟರಗಾಳಿ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. 80 ಕ್ಕೂ ಹೆಚ್ಚು ಚಿತ್ರಗಳಿಗೆ ಕಂಠದಾನ ಮಾಡಿದ್ದಾರೆ. ಅಲ್ಲೇ ಇರುವುದು ನೋಡಿ ಎಂಬ ಚಿತ್ರದ ನಿರ್ದೇಶನ ಕೂಡ ಮಾಡಿದ್ದಾರೆ. 70ರ ವಯಸ್ಸಿನಲ್ಲೂ ಮನರಂಜನೆ ಕಾರ್ಯಕ್ರಮ ನೀಡುತ್ತಾರೆ. ಚಿತ್ರಗಳಲ್ಲಿ ನಟನೆ ಮಾಡುತ್ತಿದ್ದಾರೆ. ಮೂರು ಜನ ಪುತ್ರಿಯರು, ಓರ್ವ ಪುತ್ರ ಇದ್ದು, ಅವರನ್ನು ರಂಗಭೂಮಿಗೆ ಪರಿಚಯಿಸಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts