More

    ದುರ್ಗಾದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಗಟ್ಟಿ

    ಬಾಗಲಕೋಟೆ: ದುರ್ಗಾದೇವಿ ಜಾತ್ರೆ ಹಿನ್ನೆಲೆ ಬಾಗಲಕೋಟೆ ತಾಲೂಕಿನ ಬೇವಿನಮಟ್ಟಿ ಗ್ರಾಮದಲ್ಲಿ ಸಾವಿರಾರು ಪ್ರಾಣಿ ಬಲಿ ಕೊಡಲಾಗುತ್ತದೆ. ಹೈಕೋರ್ಟ್ ಆದೇಶದಂತೆ ಕೂಡಲೇ ಇದನ್ನು ತಡೆಗಟ್ಟಬೇಕು ಎಂದು ಬೆಂಗಳೂರಿನ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಆಗ್ರಹಿಸಿದರು.

    1959ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಕಾಯ್ದೆ ಹಾಗೂ ಹೈಕೋರ್ಟ್ ಆದೇಶದಂತೆ ಪ್ರಾಣಿಬಲಿ ಮಾಡುವುದು ಶಿಕ್ಷಾರ್ಹ ಅಪರಾಧ. ದೇವರು, ಧರ್ಮದ ಹೆಸರಿನಲ್ಲಿ ದೇವಾಲಯ, ದೇವಾಲಯ ಆವರಣದಲ್ಲಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಾಣಿ ಕೊಲ್ಲುವುದು, ಹಿಂಸೆ ಮಾಡುವುದು, ರಕ್ತತರ್ಪಣ, ಮಾಂಸ ನೈವೇದ್ಯ ನಡೆಸುವುದು ಕಾನೂನುಬಾಹಿರ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಂಬಂಧಪಟ್ಟ ಪೊಲೀಸ್ ಠಾಣೆ ಇದನ್ನು ತಡೆಗಟ್ಟಲು ಕೋರ್ಟ್ ಆದೇಶಿಸಿದೆ. ಆದರೆ ಜಾತ್ರೆ ಮಹೋತ್ಸವ ಅಂಗವಾಗಿ ಬೇವಿನಮಟ್ಟಿಯಲ್ಲಿ ನಡೆಯುವ ಪ್ರಾಣಿ ಬಲಿ ತಡೆಗಟ್ಟುವ ಪ್ರಯತ್ನವನ್ನು ಯಾರೊಬ್ಬರೂ ಮಾಡುತ್ತಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

    ಫೆ.17 ರಿಂದ 20 ರವರೆಗೆ ಬೇವಿನಮಟ್ಟಿ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ನಡೆಯಲಿದೆ. ಈ ವೇಳೆ ಸಾವಿರಾರು ಪ್ರಾಣಿಗಳನ್ನು ಬಲಿ ಕೊಡಲಾಗುತ್ತದೆ. ಇದೊಂದು ಪೈಶಾಚಿಕ, ಅನಾಗರಿಕ ಕೃತ್ಯವಾಗಿದೆ. ಇಂತಹ ಶೋಷಣೆ ಪರಂಪರೆ ನಿಲ್ಲಬೇಕು. ದೇವಾಲಯಗಳು ವದಾಲಯಗಳಾಗಬಾರದು. ದೇವಾಲಯಗಳು ಕಟುಕರ ಕೇಂದ್ರಗಳಾಗಬಾರದು. ಜಿಲ್ಲಾಧಿಕಾರಿ, ತಹಸೀಲ್ದಾರ್, ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, ಪ್ರಾಣಿಬಲಿ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

    ಜಾತ್ರಾ ಮಹೋತ್ಸವ ಸಮಿತಿ ಮುಖಂಡರು, ಪೊಲೀಸ್ ಇಲಾಖೆ ಸಮ್ಮುಖದಲ್ಲಿ ಸೋಮವಾರ ಸಭೆ ನಡೆಯಲಿದೆ. ಈ ವೇಳೆ ಪ್ರಾಣಿ ಬಲಿ ನಿಲ್ಲಿಸುವ ಬಗ್ಗೆ ಅರಿವು ಮೂಡಿಸಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts