More

    ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ

    ಬಾಗಲಕೋಟೆ: ಮದುವೆ, ಮಸಣದಂತಹ ಸಂದರ್ಭದಲ್ಲಿ ಕುಟುಂಬ ಸದಸ್ಯರು ಹೊರತು ಪಡಿಸಿ ಅಧಿಕ ಸಂಖ್ಯೆಯಲ್ಲಿ ಜನ ಸೇರಬಾರದು. ಶ್ರಾವಣ ಮಾಸ ಆರಂಭವಾಗಿದ್ದು, ಯಾವುದೇ ಕಾರಣಕ್ಕೂ ದೇವಸ್ಥಾನ, ಧಾರ್ಮಿಕ ಕ್ಷೇತ್ರಗಳಲ್ಲಿ ಪುರಾಣ, ಪ್ರವಚನ, ಅನ್ನ ಸಂತರ್ಪಣೆ ಏರ್ಪಡಿಸುವುದನ್ನು ತಕ್ಷಣಕ್ಕೆ ಕೈ ಬಿಡಬೇಕು. ಪರಿಸ್ಥಿತಿ ಅರ್ಥೈಸಿಕೊಂಡು ಕೋವಿಡ್ ಸೋಂಕು ನಿಯಂತ್ರಣಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಮನವಿ ಮಾಡಿದರು.

    ಹಬ್ಬದ ಸೀಸನ್ ಆರಂಭವಾಗುವುದರಿಂದ ಲಾಕ್‌ಡೌನ್, ಸೀಲ್‌ಡೌನ್ ಮಾಡುವುದು ಪರಿಹಾರವಲ್ಲ, ಜನ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಸಾಮಾಜಿಕ ಅಂತರ್ ಕಾಯ್ದಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಬೇಕು. ಧಾರ್ಮಿಕ ಕ್ಷೇತ್ರಗಳಲ್ಲಿರುವ ಮುಖಂಡರು ಸಹ ಮುಂಜಾಗೃತೆ ವಹಿಸಬೇಕು. ಯಾರೂ ಕೂಡ ಮಂದಿರ, ದೇವಸ್ಥಾನ, ಚರ್ಚ್‌ಗಳಲ್ಲಿ ಜನರನ್ನು ಸೇರಿಸಬಾರದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

    ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ತಂಪು ವಾತಾವರಣ ಸೃಷ್ಟಿಯಾಗಿದೆ. ಇದರು ಕೋವಿಡ್ ಹರಡಲು ಕಾರಣವಾಗುತ್ತದೆ. ಕುಟುಂಬದ ಸದಸ್ಯರು ಮಕ್ಕಳ, ಹಿರಿಯರ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು. ಕೆಮ್ಮು, ನೆಗಡಿ ಜ್ವರ ಕಾಣಿಸಿಕೊಂಡಲ್ಲಿ ಕೂಡಲೇ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಕರೊನಾ ರೋಗಕ್ಕೆ ಯಾರು ಭಯ ಪಡಬಾರದು. ಜಾಗೃತಿ ವಹಿಸುವುದು ಅವಶ್ಯವಿದೆ. ಕುಮಾರೇಶ್ವರ ಆಸ್ಪತ್ರೆಯಲ್ಲಿ ಸಕಲ ರೀತಿಯಿಂದ ಆರೋಗ್ಯ ಚಿಕಿತ್ಸೆ ಲಭ್ಯವಿದೆ ಎಂದರು.

    ಸಾವಿರ ಬೆಡ್ ಆಸ್ಪತ್ರೆ ನಿರ್ಮಾಣ
    ಕೋವಿಡ್ ಸೋಂಕಿತರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಗದ್ದನಕೇರಿ ಸಮೀಪದ ಬಿವಿವಿ ಸಂಘದ ಸ್ಪೀನಿಂಗ್ ಮಿಲ್ ಆವರಣದಲ್ಲಿ ಸಾವಿರ ಬೆಡ್‌ಗಳನ್ನು ಅಳವಡಿಸಲಾಗುತ್ತಿದೆ. ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದಿಂದ 500 ಕ್ಕೂ ಹೆಚ್ಚು ಬೆಡ್ ಹಾಗೂ ವಿವಿಧ ಸರ್ಕಾರಿ ಹಾಸ್ಟೆಲ್‌ಗಳಲ್ಲಿರುವ ಬೆಡ್‌ಗಳನ್ನು ತರಲಾಗುತ್ತಿದೆ. ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು. ಆರೋಗ್ಯದಲ್ಲಿ ಗಂಭೀರವಾಗಿ ಸಮಸ್ಯೆಗಳು ಕಂಡು ಬಂದು ವೆಂಟಿಲೇಟರ್, ಐಸಿಯುನಲ್ಲಿ ನಿಗಾ ಇಡಬೇಕಾದ ಸಂದರ್ಭ ಬಂದಲ್ಲಿ ಅಂತಹ ರೋಗಿಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ತಿಳಿಸಿದರು.

    24 ಗಂಟೆಯಲ್ಲಿ ರಿಪೋರ್ಟ
    ಕರೊನಾ ಸೋಂಕು ಬೇಗನೆ ಪತ್ತೆ ಹಚ್ಚುವ ಉದ್ದೇಶದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಆರ್‌ಟಿಪಿಎಸ್ ಯಂತ್ರ ಅಳವಡಿಸಲಾಗುತ್ತಿದೆ. ಇನ್ನೇರಡು ದಿನಗಳಲ್ಲಿ ಕಾರ್ಯ ಪ್ರಾರಂಭವಾಗಲಿದೆ. ಆರಂಭದಲ್ಲಿ 300 ಕೋವಿಡ್ ಟೆಸ್ಟ್ ಮಾಡಲಾಗುವುದು. ನಂತರ ನಿತ್ಯ ಗರಿಷ್ಠ 500 ವರೆಗೆ ಟೆಸ್ಟ್ ನಡೆಯಲಿದೆ. 24 ಗಂಟೆಯಲ್ಲಿ ವರದಿ ಪ್ರಕಟವಾಗಲಿದ್ದು, ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts